ಟೋಕಿಯೋ, ಜು.೨೯: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ ಕ್ರೀಡೆಯ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ೨೦೧೬ ರ ಒಲಂಪಿಕ್ ಹಾಕಿಯ ಚಾಂಪಿಯನ್ ತಂಡ ದಕ್ಷಿಣ ಅಮೇರಿಕಾ ಖಂಡದ ಅರ್ಜಂಟೀನಾ ತಂಡವನ್ನು ೩-೧ ಗೋಲ್ ನಿಂದ ಮಣಿಸಿ ‘ಪೂಲ್ ಎ’ ಗುಂಪಿನಲ್ಲಿ ೨ನೇ ಸ್ಥಾನ ಖಚಿತಪಡಿಸಿಕೊಂಡಿದೆ. ಈ ಮೂಲಕ ಕ್ವಾರ್ಟರ್ ಫೈನಲ್ ತಲುಪಿದೆ. ‘ಪೂಲ್ ಎ’ ಗುಂಪಿನಲ್ಲಿ ಆಸ್ಟೆçÃಲಿಯಾ ಮೊದಲನೆ ಸ್ಥಾನ ಖಚಿತಪಡಿಸಿ ಕೊಂಡಿದೆ. ಇನ್ನೆರಡು ಸ್ಥಾನಗಳಿಗೆ ಉಳಿದ ೪ ದೇಶಗಳಾದ ಸ್ಪೇನ್, ನ್ಯೂಜಿಲ್ಯಾಂಡ್, ಅರ್ಜಂಟೀನಾ, ಜಪಾನ್ ತಂಡಗಳು ಪೈಪೋಟಿಯಲ್ಲಿವೆ.

‘ಪೂಲ್’ ಬಿ ನಲ್ಲಿ ಬೆಲ್ಜಿಯಮ್ ಮೊದಲನೆಯ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನುಳಿದ ೩ ಸ್ಥಾನಗಳಿಗೆ ನೆದರ್‌ಲ್ಯಾಂಡ್, ಗ್ರೇಟ್ ಬ್ರಿಟನ್, ಜರ್ಮನಿ, ಸೌತ್ ಆಫ್ರಿಕಾ ಪೈಪೋಟಿಯಲ್ಲಿವೆ. ಕೆನಡಾ ಕೊನೆಯ ಸ್ಥಾನ ಖಚಿತಪಡಿಸಿಕೊಂಡಿದೆ.

೨ ಗುಂಪುಗಳಿAದ ಆಯ್ಕೆಯಾದ ಒಟ್ಟು ೮ ತಂಡಗಳು ಆಗಸ್ಟ್ ೧ ರಂದು ಕ್ವಾರ್ಟರ್ ಫೈನಲ್‌ನಲ್ಲಿ ಭಾಗವಹಿಸಲಿವೆ. ಭಾರತದ ಲೀಗ್ ಸ್ಟೇಜ್‌ನ ಕೊನೆಯ ಪಂದ್ಯ ಜಪಾನ್ ವಿರುದ್ಧ ತಾ.೩೦ ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ನಡೆಯಲಿದ್ದು, ಭಾರತ ಗೆಲ್ಲುವ ನಿರೀಕ್ಷೆಯಿದೆ. ಈ ಪಂದ್ಯದ ಫಲಿತಾಂಶ ಭಾರತದ ಪ್ರಸ್ತುತ ೨ನೇ ಸ್ಥಾನಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.