ಮಡಿಕೇರಿ, ಜು. ೨೯: ಸುಂಟಿಕೊಪ್ಪ ನಿವಾಸಿ ಗುಡ್ಡೆಮನೆ ಬಾಬು ಅವರ ಪುತ್ರ ಗುಡ್ಡೆಮನೆ ವಿನೋದ್ ಅವರು ೨೦೨೦ನೆ ಸಾಲಿನ ‘ದಿ ಗ್ರೇಟ್ ಇಂಡಿಯನ್ ಅಕ್ವಾಸ್ಕೇಪಿಂಗ್' (ಅಕ್ವೇರಿಯಂ ವಿನ್ಯಾಸ) ಸ್ಪರ್ಧೆಯಲ್ಲಿ ರಾಷ್ಟçಕ್ಕೆ ೧೫ನೆ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪರ್ಧೆಯ ಪ್ರಾದೇಶಿಕ ಮಟ್ಟದಲ್ಲಿ ಕರ್ನಾಟಕಕ್ಕೆ ಮೊದಲನೆಯ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯು ಎ.ಡಿ.ಎ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದು, ಬೆಂಗಳೂರಿನ ‘ಸ್ಟಿಲ್ ವಾಟರ್ ಅಕ್ವಾಟಿಕ್ಸ್'ನ ನಿರ್ದೇಶಕ ಅದೀಪ್ ಸಜ್ಜನರಾಜ್ ಅವರು ತಾ.೧೭ ರಂದು ವಿನೋದ್ ಅವರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.