ಮಡಿಕೇರಿ, ಜು. ೨೯: ಬೋಯಿಕೇರಿ ಬಳಿ ನಡೆದ ಸೈನಿಕ ಕುಟುಂಬದ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿದೂರು ದಾಖಲಾಗಿದೆ. ಪ್ರಕರಣದ ಆರೋಫಿ ರಫೀಕ್ ಖಾನ್ ದೂರು ನೀಡಿದ್ದು, ಅಪಘಾತ ನಡೆದ ವೇಳೆ ಸೈನಿಕ ಕುಟುಂಬವೇ ಮೊದಲು ತನ್ನ ಮೇಲೆ ಹಲ್ಲೆ ಮಾಡಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎನ್ನುವುದಾದರೆ ನನ್ನ ಮೊಬೈಲ್ನ್ನು ಪೊಲೀಸರು ತನಿಖೆಗೆ ಒಳಪಡಿಸಲಿ ಎಂದು ರಫೀಕ್ ಖಾನ್ ಹೇಳಿದರು.
ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಗೂ ಮತ್ತೊಬ್ಬ ಆರೋಪಿ ಇಸಾಕ್ಖಾನ್ ಮಾತನಾಡಿ, ಅದು ಉದ್ದೇಶಪೂರ್ವಕ ಅಪಘಾತವಲ್ಲ. ತನ್ನ ಸಹೋದರನ ಕಾರು ಅಪಘಾತವಾದ ಹಿನ್ನೆಲೆಯಲ್ಲಿ ತಾನು ಸ್ಥಳಕ್ಕೆ ತೆರಳಿದ್ದು, ಅಲ್ಲಿ ಜನರ ದೊಡ್ಡ ಗುಂಪು ಕಂಡು ಬಂತು. ನಾನು ಹೋದ ತಕ್ಷಣ ಕೆಲವರು ‘ಎಲ್ಲವೂ ಸರಿಯಾಗಿದೆ ನೀವು ಹೋಗಿ’ ಎಂದು ಕಳುಹಿಸಿದರು. ಈ ಸಂದರ್ಭ ಪೊಲೀಸರು ಅಲ್ಲಿದ್ದವರ ಫೋಟೋ ತೆಗೆಯುತ್ತಿದ್ದರು. ಸ್ಥಳದಲ್ಲಿದ್ದವರ ಫೋಟೋ ಆಧಾರದಲ್ಲಿ ರಾಜಕೀಯ ಒತ್ತಡದಿಂದ ತನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆಪಾದಿಸಿದರು. ಗೋಷ್ಠಿಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ. ಕರೀಂ, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಐ. ರಫೀಕ್ ಉಪಸ್ಥಿತರಿದ್ದರು.