ಸೋಮವಾರಪೇಟೆ, ಜು. ೨೮: ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯ ಬಗ್ಗೆ ಅಧ್ಯಯನ ನಡೆಸಿ, ಅದರಂತೆ ಅವಕಾಶಗಳನ್ನು ಕಲ್ಪಿಸಿದರೆ ಅವರುಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಶಿಕ್ಷಣ ಸಂಪನ್ಮೂಲ ವ್ಯಕ್ತಿ ಕಾಜೂರು ಸತೀಶ್ ಅಭಿಪ್ರಾಯಪಟ್ಟರು. ಇಲ್ಲಿನ ಪತ್ರಿಕಾಭವನದಲ್ಲಿ ‘ನಾವು’ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಯೋಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜ್ಞಾನಾರ್ಜನೆಯೊಂದಿಗೆ ಬದುಕು ರೂಪಿಸುವಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ಒಂದೊAದು ಶಾಲೆಗಳನ್ನು ಗುರುತಿಸಿ ಅಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆನ್‌ಲೈನ್ ಶಿಕ್ಷಣ ಮತ್ತು ಮೊಬೈಲ್‌ಗಳ ಸದ್ಬಳಕೆ ಕುರಿತು ಕಾರ್ಯಾಗಾರಗಳನ್ನು ನಡೆಸಬೇಕು ಎಂದರು.

ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ.ಸಂಜೀವ ಮಾತನಾಡಿ, ಯುವ ಜನಾಂಗ ಸಮಾಜದ ಕುರಿತು ಚಿಂತನೆ ನಡೆಸಬೇಕಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಸಮಾಜಮುಖಿ ಚಿಂತನೆ ಕಡಿಮೆಯಾಗುತ್ತಿರುವುದು ಬೇಸರದ ವಿಚಾರ ಎಂದರು.

ಹಿರಿಯ ಸಾಹಿತಿ ನ.ಲ. ವಿಜಯ ಮಾತನಾಡಿ, ಹಿಂದೆ ಕವಿಗಳು, ಸಾಹಿತಿಗಳು ತಮ್ಮ ಮೊನಚು ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಆದರೆ ಪ್ರಸಕ್ತ ದಿನಗಳಲ್ಲಿ ಅವು ಮರೆಯಾಗುತ್ತಿವೆ.

ಸಾಹಿತ್ಯದ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದಲು ಸಾಧ್ಯವಿಲ್ಲವೇನೊ ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಹಾಳಾಗುತ್ತಿದೆ ಎಂದು ವಿಷಾದ ವ್ಯಕಪಡಿಸಿದರು. ಪ್ರತಿಷ್ಠಾನದ ಸಂಚಾಲಕ ಗೌತಮ್ ಕಿರಗಂದೂರು ಅವರು ಅಂಗಾAಗ ದಾನಗಳ ಮಹತ್ವದ ಕುರಿತು ಮಾತನಾಡಿದರು. ಶನಿವಾರಸಂತೆಯ ಕಾವೇರಿ ಕಾಲೇಜಿನ ಮುಖ್ಯಸ್ಥ ಹೂವಯ್ಯ ಮಾಸ್ಟರ್ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಎಸ್.ಎ. ಮುರಳೀಧರ್, ಸಮಾಜ ಸೇವಕರಾದ ದಿನೇಶ್ ಐಗೂರು, ಅಶ್ವಿನಿ ಕೃಷ್ಣಕಾಂತ್ ಮಾತನಾಡಿದರು. ಸುಮನ ಗೌತಮ್ ಅವರು ಪ್ರತಿಷ್ಠಾನದ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ತಾನ್ಯಾ ಮುರಳೀಧರ್ ಪ್ರಾರ್ಥಿಸಿದರು.