ವೀರಾಜಪೇಟೆ: ನಾಗರಿಕ ಸಮಾಜವು ಆಶ್ರಮ ವಾಸಿಗಳ ಸೇವೆಗೆ ಮುಂದಾಗಬೇಕು ಎಂದು ಜಯ ಭಾರತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಬ್ಬೀರ ಯು. ಜೋಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಜಯ ಭಾರತ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೆದಮುಳ್ಳೂರು ಗ್ರಾಮದ ಕಥೆರಿನಾ ಚಿತ್ತದಿನಿ ನಿರ್ಗತಿಕ ಮಕ್ಕಳ ಸೇವಾಶ್ರಮದಲ್ಲಿ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಶ್ರಮಗಳನ್ನು ನಡೆಸುವ ಆಡಳಿತ ಸಮಿತಿಗಳು ಆರ್ಥಿಕವಾಗಿ ಸದೃಢವಾಗಿರುವುದಿಲ್ಲ. ಆದ್ದರಿಂದ ದಾನಿಗಳ ನೆರವು ಅಗತ್ಯ ಎಂದರು. ಜಯ ಭಾರತ ರಕ್ಷಣಾ ವೇದಿಕೆಯ ನಗರ ಅಧ್ಯಕ್ಷ ಟಿ.ಎಂ. ಯೋಗೇಶ್ ನಾಯ್ಡು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ನ್ಯಾಯ ಒದಗಿಸುವುದು, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಯ ಭಾರತ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಮನೋಹರ್, ಜಿಲ್ಲಾ ಕೋಶಾಧಿಕಾರಿ ಎಂ. ರಘು ಶೆಟ್ಟಿ, ನಗರ ಉಪಾಧ್ಯಕ್ಷ ಪಿ.ಎಸ್. ಇಬ್ರಾಹಿಂ, ತಾಲೂಕು ಸಂಚಾಲಕ ಬಿ.ಕೆ. ಬೋಪಣ್ಣ, ಆಶ್ರಮದ ಪ್ರಮುಖರಾದ ಸಿಸ್ಟರ್ ಲೂಸಿ ಮತ್ತು ಸಿಸ್ಟರ್ ಪ್ರಸಿಲ್ಲಾ ಹಾಗೂ ಆಶ್ರಮದಲ್ಲಿರುವ ಮಕ್ಕಳು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿಯ ಅರ್ಚಕರಿಗೆ ಶಾಸಕ ಅಪ್ಪಚ್ಚು ರಂಜನ್ ಕಿಟ್ ವಿತರಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಅರ್ಚಕರು ಕೂಡ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಸಂದರ್ಭ ಅರ್ಚಕರ ಸಂಘದ ಜಿಲ್ಲಾ ಅಧ್ಯಕ್ಷ ಪರಮೇಶ್ ಭಟ್ ಶಾಸಕರಿಗೆ ಮನವಿ ಮಾಡಿದ ಮೇರೆಗೆ ಶಾಸಕರು ಹೋಬಳಿಯ ೩೧ ಅರ್ಚಕರಿಗೆ ನಿತ್ಯೋಪಯೋಗಿ ವಸ್ತುಗಳ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭ ಓಬಿಸಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಮೋಹನ, ಶಕ್ತಿ ಕೇಂದ್ರದ ಪ್ರಮುಖ್ ಬಿ.ಕೆ. ಪ್ರಶಾಂತ್. ಸಹ ಪ್ರಮುಖ್ ವಾಸು, ಪಂಚಾಯಿತಿ ಸದಸ್ಯರಾದ ಶಾಂತಿ, ವಸಂತಿ, ಸುನೀಲ್ ಕುಮಾರ್, ಆನಂದ, ಸೋಮಯ್ಯ, ಮಹಿಳಾ ಮೋರ್ಚಾದ ಸದಸ್ಯೆ ಲೀಲಾ ಮೇದಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ವ್ಯಾಪ್ತಿಯ ಹಾ.ಮಾ. ಗಣೇಶ್ ಶರ್ಮಾ, ಗಣೇಶ್ ಭಟ್, ದರ್ಶನ್ ಭಟ್, ನರಸಿಂಹ ಭಟ್, ಮಂಜುನಾಥ್ ಭಟ್, ಮಂಜುನಾಥ್ ಉಡುಪ, ಮಂಜುನಾಥ್ ಭಟ್ ಮತ್ತಿಕಾಡು, ಮನೋಜ್ ಭಟ್ ಸೇರಿದಂತೆ ಇತರ ಅರ್ಚಕರು ಹಾಜರಿದ್ದರು.

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬೆಂಗಳೂರಿನ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹೋಬಳಿ ವ್ಯಾಪ್ತಿಯ ೧೫೦ ಮಂದಿ ಕಟ್ಟಡ ಮತ್ತು ಇತರ ಕಾರ್ಮಿಕರಿಗೆ ಶಾಸಕ ಅಪ್ಪಚ್ಚು ರಂಜನ್ ದಿನಸಿ ಕಿಟ್ ವಿತರಿಸಿದರು.

ಸಿ.ಪಿ.ಐ. ಪರಶಿವಮೂರ್ತಿ, ಕಾರ್ಮಿಕ ಇಲಾಖೆ ಅಧಿಕಾರಿ ಲೀನಾ, ಸಿಬ್ಬಂದಿ ಸಹೀದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಶಾಲಪ್ಪ ಹಾಜರಿದ್ದರು.ಸೋಮವಾರಪೇಟೆ: ರಾಜ್ಯ ಸರ್ಕಾರದಿಂದ ಕಾರ್ಮಿಕ ಇಲಾಖೆಯ ಮೂಲಕ ಅಸಂಘಟಿತ ಕಾರ್ಮಿಕರಿಗೆ ಒದಗಿಸಲಾಗುವ ವೃತ್ತಿಪರ ಸಲಕರಣೆಗಳ ಕಿಟ್‌ನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಫಲಾನುಭವಿಗಳಿಗೆ ವಿತರಿಸಿದರು.

ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕಿಟ್ ನೀಡಲಾಯಿತು. ಈ ಸಂದರ್ಭ ತಾಲೂಕು ಕಾರ್ಮಿಕ ಇಲಾಖಾ ನಿರೀಕ್ಷಕಿ ಕೆ.ಎನ್. ಲೀನಾ, ಕಾರ್ಮಿಕ ಬಂಧು ಸೈಯದ್ ಅವರುಗಳು ಉಪಸ್ಥಿತರಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆ ವ್ಯಾಪ್ತಿಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಅವರು ಆಶಾ ಕಾರ್ಯಕರ್ತೆಯರಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿದರು.

ಕೋವಿಡ್ ಸಂದರ್ಭ ಸೇವೆ ಸಲ್ಲಿಸಿದ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ೧೦ ಆಶಾ ಕಾರ್ಯಕರ್ತೆಯರಿಗೆ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಹಾರಂಗಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಕಾಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.