ಮಡಿಕೇರಿ, ಜು. ೨೮: ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಇದರ ಆಶ್ರಯದಲ್ಲಿ ನಡೆದ ವಿವಿಧ ಸಾಹಿತ್ಯ ಕೃತಿಗಳ ಸ್ಪರ್ಧೆಯಲ್ಲಿ ಸ್ಮಿತಾ ಅಮೃತರಾಜ್ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಲಭಿಸಿದೆ. ಸ್ಮಿತಾ ಅಮೃತರಾಜ್ ಅವರ ‘ಒಂದು ವಿಳಾಸದ ಹಿಂದೆ’ ಲಲಿತ ಪ್ರಬಂಧ ಕೃತಿಯು ಆಯ್ಕೆಯಾಗಿದೆ. ಸಂಪಾಜೆಯ ಚೆಂಬು ಗ್ರಾಮದ ಸ್ಮಿತಾ ಅವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದಾರೆ.