ಕಣಿವೆ, ಜು. ೨೮: ಈ ಬಾರಿ ಬಹುತೇಕ ಕಡೆಗಳಲ್ಲಿ ಕೃಷಿಕರು ಬೆಳೆದಿರುವ ಶುಂಠಿ ಬೆಳೆಗೆ ಕೊಳೆ ರೋಗ ಬಾಧಿಸುತ್ತಿದೆ. ಇದರಿಂದಾಗಿ ರೋಗ ಹತೋಟಿಗೆ ಬಾರದ ಕಡೆಗಳಲ್ಲಿ ಕೃಷಿಕರು ಅವಧಿಗೆ ಮುನ್ನವೇ ಶುಂಠಿ ಕಟಾವಿಗೆ ಮುಂದಾಗುತ್ತಿದ್ದಾರೆ.

ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಶುಂಠಿ ಬಿತ್ತನೆ ಕೈಗೊಂಡಿದ್ದ ರೈತರು ಈಗ ತಾವು ಬೆಳೆದಿರುವ ಬೆಳೆಗೆ ನಾಲ್ಕು ತಿಂಗಳು ತುಂಬಿದ್ದು ಕೊಳೆ ರೋಗದಿಂದ ಬೆಳೆ ನಷ್ಟದ ಭೀತಿಯಲ್ಲಿ ಮಾರುಕಟ್ಟೆಯಲ್ಲಿ ಈಗ ಇರುವ ಬೆಲೆಗೆ ಸಂತೃಪ್ತರಾಗಿ ಬೆಳೆ ಕಟಾವು ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಇದೀಗ ಹೊಸ ಶುಂಠಿಗೆ ೬೦ ಕೆ.ಜಿ. ತೂಕದ ಚೀಲವೊಂದಕ್ಕೆ ರೂ. ೯೦೦ ಇದೆ. ಹಳೆಯ ಶುಂಠಿಗೆ ರೂ. ೧೬೦೦ ಇದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮತ್ತೆ ಶುಂಠಿಗೆ ಈ ಬಾರಿಯೂ ಬೆಲೆ ಇಳಿಕೆಯಾಗಿರುವುದು ಬೆಳೆಗಾರರಲ್ಲಿ ಅಸಮಾಧಾನ ಉಂಟು ಮಾಡಿದೆ. ಕಳೆದ ವರ್ಷ ಇದೇ ಜುಲೈ ಮಾಸಾಂತ್ಯದಲ್ಲಿ ಒಂದು ಚೀಲ ಶುಂಠಿಗೆ ರೂ. ೧೩೦೦ ಇತ್ತು. ಇದು ಈ ವರ್ಷಕ್ಕೆ ಹೋಲಿಸಿದಲ್ಲಿ ರೂ. ೪೦೦ ಇಳಿಕೆಯಾಗಿದೆ.

೨೦೧೯ ರಲ್ಲಿ ಶುಂಠಿ ಫಸಲಿಗೆ ಇದೇ ಜುಲೈ ಮಾಸಾಂತ್ಯದಲ್ಲಿ ಒಂದು ಚೀಲಕ್ಕೆ ರೂ. ೫೦೦೦ ಇತ್ತು. ೨೦೧೯ ರಲ್ಲಿ ಶುಂಠಿ ಫಸಲಿಗೆ ರೂ. ೫ ಸಾವಿರ ಇದ್ದುದರಿಂದ ಸಹಜವಾಗಿಯೇ ೨೦೧೮ರಲ್ಲಿ ಬಹಳಷ್ಟು ಮಂದಿ ಕೃಷಿಕರು ಹಾಗೂ ಕೃಷಿಕರಲ್ಲದವರು ಬಂಪರ್ ಬೆಲೆಯುಳ್ಳ ಶುಂಠಿ ಬೆಳೆದರೆ ಹೇಗೆ ಎಂದುಕೊAಡು ಕಂಡಕAಡಲ್ಲಿ ಜಾಗ ಹಿಡಿದು ಶುಂಠಿಯನ್ನು ಯಥೇಚ್ಛ ಪ್ರಮಾಣದಲ್ಲಿ ಬೆಳೆದರು. ಆದರೆ ೨೦೨೦ರಲ್ಲಿ ಕೊರೊನಾ ಲಾಕ್‌ಡೌನ್ ಆಗಿ ಅಂರ‍್ರಾಷ್ಟಿçÃಯ ಮಾರುಕಟ್ಟೆಗಳು ಮುಚ್ಚಿದ ಪರಿಣಾಮ ಶುಂಠಿ ಬೆಳೆಗಾರರು ಬಹಳಷ್ಟು ನಷ್ಟಕ್ಕೆ ತುತ್ತಾಗಿದ್ದರು.

ಆದರೂ ಕೂಡ ಅಳಿದುಳಿದ ಕೆಲ ಬಂಡವಾಳ ಶಾಹಿ ಕೃಷಿಕರು ಹಾಗೂ ಸ್ವಂತ ಭೂಮಿಯುಳ್ಳ ಕೃಷಿಕರು ೨೦೨೦-೨೧ರ ಸಾಲಿನಲ್ಲೂ ಅಂದರೆ ಪ್ರಸಕ್ತ ಸಾಲಿನಲ್ಲಿ ಶುಂಠಿ ಬೆಳೆಯಲು ಮುಂದಾಗಿದ್ದರು. ಆದರೆ ಈ ಬಾರಿಯು ಶುಂಠಿಯ ದರ ಸಾವಿರಕ್ಕೂ ಮುಟ್ಟದೇ ರೂ. ೯೦೦ ರ ಗಡಿಯಲ್ಲಿರುವುದು ಬೆಳೆಗಾರರಲ್ಲಿ ಈ ಬಾರಿಯೂ ಆತಂಕವನ್ನು ಉಂಟುಮಾಡಿದೆ.

ಮುಂದಿನ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಾದರೂ ಶುಂಠಿ ಫಸಲಿಗೆ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಬೆಲೆ ಜಿಗಿತಗೊಂಡಲ್ಲಿ ಬೆಳೆಗಾರರು ನಿಟ್ಟುಸಿರು ಬಿಡಬಹುದು.

ಒಂದುವೇಳೆ ಈಗಿನ ದರಕ್ಕಿಂತಲೂ ಕುಸಿತವಾದರೆ ಬೆಳೆಗಾರರ ಕಣ್ಣು ಹಾಗೂ ಮೂಗಿನಲ್ಲಿ ಶುಂಠಿ ಘಾಟು ಭಾರೀ ಪರಿಣಾಮ ಬೀರುವುದಂತು ನಿಶ್ಚಿತ. - ಕೆ.ಎಸ್. ಮೂರ್ತಿ