ನಾಪೋಕ್ಲು, ಜು. ೨೮: ಕೊಟ್ಟಮುಡಿಯ ಮರ್ಕಝ್ ಶಾಲೆಯ ಸಮೀಪದಲ್ಲಿ ಹಾದುಹೋಗುವ ಮುಖ್ಯ ರಸ್ತೆಯಲ್ಲಿ ಚರಂಡಿ ಇಲ್ಲದಿರುವುದರಿಂದ ಮಳೆಯ ನೀರು ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಪ್ರವಾಹ ನೀರು ಸಹ ಬರುತ್ತಿದ್ದು, ಈ ರಸ್ತೆಗೆ ಇತ್ತೀಚೆಗೆ ಡಾಂಬರೀಕರಣ ಮಾಡಿದ್ದರೂ ರಸ್ತೆಯಲ್ಲಿ ಚರಂಡಿಯನ್ನು ನಿರ್ಮಾಣ ಮಾಡದೇ ಇರುವುದರಿಂದ ರಸ್ತೆಯಲ್ಲಿ ನಡೆದಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಲೋಕೊಪಯೋಗಿ ಇಲಾಖೆ ಖುದ್ದು ಪರಿಶೀಲಿಸಿ ಇಲ್ಲಿಗೆ ಸುಸಜ್ಜಿತವಾದ ಚರಂಡಿಯನ್ನು ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.