ಕಣಿವೆ, ಜು. ೨೮: ಜಲಜೀವನ್ ಮಿಷನ್ ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ಶುದ್ಧ ನೀರು ಪೂರೈಸಲು ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗಿದೆ.

ಈಗಾಗಲೇ ಕೂಡಿಗೆ ಕುಶಾಲನಗರ ಹೆದ್ದಾರಿಯ ಕೂಡ್ಲೂರು ಗ್ರಾಮದಿಂದ ಗುಮ್ಮನಕೊಲ್ಲಿ ಹಾಗೂ ಮುಳ್ಳುಸೋಗೆ ಗ್ರಾಮದವರೆಗೆ ನಾಲ್ಕು ಅಡಿಗಳಷ್ಟು ಆಳದಲ್ಲಿ ಹೊಸ ಪೈಪ್‌ಗಳನ್ನು ಅಳವಡಿಸಿಕೊಂಡು ಬರಲಾಗುತ್ತಿದ್ದು, ಅಂದಾಜು ೫ ಕೋಟಿ ವೆಚ್ಚದಲ್ಲಿ ರೂಪಿಸಲಾಗುತ್ತಿದೆ.