*ಗೋಣಿಕೊಪ್ಪ, ಜು. ೨೮: ಆಮಿಷಕ್ಕೆ ಒಳಗಾಗಿ ಮತಾಂತರಗೊAಡು ತಮ್ಮ ಮೂಲ ಸಂಸ್ಕöÈತಿಯನ್ನು ಕಳೆದುಕೊಂಡು ಬುಡಕಟ್ಟು ಸಮುದಾಯ ಅತಂತ್ರ ಸ್ಥಿತಿಗೆ ತಲುಪಬಾರದು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಸಲಹೆ ನೀಡಿದರು.

ನಿಟ್ಟೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ತಾಲೂಕು ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಬುಡಕಟ್ಟು ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಸಮುದಾಯದ ನಾಯಕರುಗಳು ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಮತ್ತು ಸರಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕೆಂದರು.

ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ನಾಗರಹೊಳೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಗೋಪಾಲ್, ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಸೂರ್ಯಅಯ್ಯಪ್ಪ, ಗ್ರಾ.ಪಂ ಉಪಾಧ್ಯಕ್ಷ ಪಡಿಜ್ಞಾರಂಡ ಕವಿತಪ್ರಭು, ಸದಸ್ಯರುಗಳಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಆರ್. ಪವಿತಾ, ಟಿ.ಆರ್. ಅಮ್ಮುಣ್ಣಿ, ಎ. ಅಮ್ಮಯ್ಯ, ಪಣಿಯರ ರಾಜು, ಜೆ.ಕೆ. ವಾಸು, ಜೆ.ಎ. ಸುಮತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನ್‌ಮೋಹನ್, ಆರ್.ಎಂ.ಸಿ. ಸದಸ್ಯ ಮಾಚಂಗಡ ಸುಜಾಪೂಣಚ್ಚ, ಆದೇಂಗಡ ವಿನು, ರಾಜ್ಯ ಕೃಷಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಮಾಪಂಗಡ ಯಮುನಾಚಂಗಪ್ಪ, ಬಾಳೆಲೆ ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್‌ಮಂದಣ್ಣ, ಕೊಡವ ಅಕಾಡೆಮಿ ಸದಸ್ಯ ಪಡಿಜ್ಞಾರಂಡ ಪ್ರಭು ಉಪಸ್ಥಿತರಿದ್ದರು.