ಸಿದ್ದಾಪುರ, ಜು. ೨೮: ಬ್ಯಾಂಕಿನಲ್ಲಿ ಪಿಗ್ಮಿ ಹಣ ಸಂಗ್ರಹಣೆ ಮಾಡುತ್ತಿದ್ದ ವ್ಯಕ್ತಿಯೋರ್ವ ಗ್ರಾಹಕರ ಹೆಸರಿನಲ್ಲಿ ಬ್ಯಾಂಕ್ ಮೂಲಕ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಸಾರ್ವಜನಿಕರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಿದ್ದಾಪುರ ಪಟ್ಟಣದಲ್ಲಿರುವ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಕಳೆದ ಸುಮಾರು ವರ್ಷಗಳಿಂದ ಪಿಗ್ಮಿ ಹಣ ಸಂಗ್ರಹಣೆ ಮಾಡುತ್ತಿದ್ದ ಕೆ.ಎನ್. ತಿಮ್ಮಯ್ಯ ಎಂಬವರು ೨೦ಕ್ಕೂ ಅಧಿಕ ಮಂದಿಯ ಹೆಸರಿನಲ್ಲಿ ತಮ್ಮ ಕೈಚಳಕದಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ಗ್ರಾಹಕರಿಗೆ ವಂಚನೆ ಮಾಡಿರುತ್ತಾನೆ. ಕೆಲವು ಗ್ರಾಹಕರು ತಿಮ್ಮಯ್ಯನ ಮುಖಾಂತರ ಪಿಗ್ಮಿ ಖಾತೆಯ ಮೂಲಕ ಬ್ಯಾಂಕ್‌ನಿAದ ಪಡೆದುಕೊಂಡಿರುವ ಸಾಲದ ಮೊತ್ತವನ್ನು ಸಕಾಲಕ್ಕೆ ಪಾವತಿಸಿರುತ್ತಾರೆ. ಅವರುಗಳು ನೀಡಿರುವ ದಾಖಲಾತಿಗಳನ್ನು ಬಳಸಿಕೊಂಡು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಹಲವಾರು ಗ್ರಾಹಕರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲವನ್ನು ತಿಮ್ಮಯ್ಯ ಪಡೆದು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈತನಕ ವಂಚನೆ ಬಗ್ಗೆ ಸಿದ್ದಾಪುರದ ಡಿ.ಸಿ.ಸಿ. ಬ್ಯಾಂಕ್‌ನವರಿಗೆ ತಡವಾಗಿ ತಿಳಿದುಬಂದ ಬಳಿಕ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆದರೆ ಈ ಹಿಂದೆ ಕರ್ತವ್ಯನಿರ್ವಹಿಸಿದ ಬ್ಯಾಂಕ್‌ನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ತಿಮ್ಮಯ್ಯ ಅವರ ಬಗ್ಗೆ ನಿರ್ಲಕ್ಷö್ಯ ತೋರಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿರುವ ಸಾರ್ವಜನಿಕರು, ಈ ಹಿಂದಿನ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕೂಡ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದಲ್ಲದೇ ಬಡವರ್ಗದ ಮಂದಿ ತಾವು ಪಡೆಯುವ ಸಾಲವನ್ನು ಮರುಪಾವತಿ ಮಾಡುವಂತೆ ಸಿದ್ದಾಪುರ ಡಿ.ಸಿ.ಸಿ. ಬ್ಯಾಂಕ್‌ನಿAದ ನೋಟೀಸ್ ಜಾರಿ ಮಾಡುತ್ತಿದ್ದಾರೆ. ಕೊರೊನಾದಿಂದ ಕೆಲಸ ಕಾರ್ಯಗಳು ಇಲ್ಲದೇ ಸಂಕಷ್ಟದಲ್ಲಿರುವAತ ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಎಲ್ಲಿಂದ ಪಾವತಿಸುವುದು ಎಂದು ಚಿಂತಾಕ್ರಾAತರಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಪೊಲೀಸರು ಸೇರಿ ನ್ಯಾಯ ದೊರಕಿಸಿಕೊಡಬೇಕೆಂದು ಗ್ರಾಹಕರು ಮನವಿ ಮಾಡಿದ್ದಾರೆ.

- ವಾಸು.