ನಾಪೋಕ್ಲು, ಜು. ೨೭: ಸ್ಥಳೀಯ ಸಸ್ಯಕ್ಷೇತ್ರದಲ್ಲಿ ೨೦ ಸಾವಿರ ಕಿತ್ತಳೆ ಗಿಡಗಳನ್ನು ಬೆಳೆಸಲಾಗಿದ್ದು, ರೈತರಿಗೆ ವಿತರಣೆಗೆ ಸಿದ್ಧವಾಗಿವೆ. ಅದರಂತೆ ೧.೭೫ ಲಕ್ಷ ಕಾಳುಮೆಣಸಿನ ಬಳ್ಳಿಗಳನ್ನು ಬೆಳೆಸಲಾಗಿದೆ. ತೋಟಗಾರಿಕೆ ಇಲಾಖಾ ವತಿಯಿಂದ ನಾಪೋಕ್ಲು ಸೇರಿದಂತೆ ತೋಟಗಾರಿಕೆ ಇಲಾಖೆಯ ನರ್ಸರಿಗಳಾದ ಕೂಡಿಗೆ, ಬಿಳುಗುಂದ, ಮಾದಾಪುರ, ಮದಲಾಪುರ, ಹಾರಂಗಿ, ಪೊನ್ನಂಪೇಟೆ, ಅರ್ವತ್ತೋಕ್ಲುಗಳಲ್ಲಿ ಸಸಿಗಳು ರೈತರಿಗೆ ವಿತರಿಸಲು ತಯಾರಾಗಿವೆ. ನಾಪೋಕ್ಲು ಸಸ್ಯಕ್ಷೇತ್ರದಲ್ಲಿನ ಗಿಡಗಳನ್ನು ಆಗಸ್ಟ್ ಮೂರನೇ ವಾರದಲ್ಲಿ ರೈತರಿಗೆ ವಿತರಿಸಲು ತೀರ್ಮಾನಿಸಲಾಗಿದೆ. ರೈತರು ಆರ್ಟಿಸಿ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ ಗಿಡಗಳನ್ನು ಪಡೆದುಕೊಳ್ಳಬಹುದಾಗಿದೆ.