ಗೋಣಿಕೊಪ್ಪಲು, ಜು. ೨೭: ಸರ್ಕಾರ ನಿರ್ಮಿಸಿದ್ದ ಇಂಗು ಗುಂಡಿಯನ್ನು ಹಾನಿಪಡಿಸಿ ಆ ಜಾಗದಲ್ಲಿ ಮನೆ ನಿರ್ಮಿಸಿ ಕೊಂಡಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ಪಂಚಾಯಿತಿ ಮುಂದೆ ಏಕಾಂಗಿಯಾಗಿ ಪ್ರತಿಭಟಿಸಿದಲ್ಲದೆ, ಗೋಣಿಕೊಪ್ಪದಿಂದ ಪೊನ್ನಂಪೇಟೆಗೆ ಕಾಲ್ನಡಿಗೆಯಲ್ಲಿ ನಡೆದು ಅಲ್ಲಿನ ತಾಲೂಕು ಆಡಳಿತದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಗೋಣಿಕೊಪ್ಪಲುವಿನ ೧ನೇ ವಿಭಾಗದ ಸರ್ಕಾರಿ ಶಾಲಾ ಮೈದಾನದ ಒಂದು ಬದಿಯಲ್ಲಿ ಈ ಹಿಂದೆ ಪಂಚಾಯಿತಿ ವತಿಯಿಂದ ಸರಕಾರದ ಅನುದಾನದಲ್ಲಿ ಇಂಗು ಗುಂಡಿಯನ್ನು ನಿರ್ಮಿಸಲಾಗಿತ್ತು. ಈ ಜಾಗದಲ್ಲಿ ವ್ಯಕ್ತಿಯೋರ್ವ ಇಂಗು ಗುಂಡಿಯನ್ನು ಮುಚ್ಚಿ ಸುತ್ತಮುತ್ತಲಿನ ಜಾಗವನ್ನು ಅತಿಕ್ರಮಿಸಿ ಮನೆ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಇದೇ ವಿಭಾಗದ ನಿವಾಸಿ ಕುಮಾರಪ್ಪ ಎಂಬವರು ಸರ್ಕಾರಿ ಆಸ್ತಿಯನ್ನು ನಷ್ಟಪಡಿಸಿ ಕಾನೂನು ಬಾಹಿರವಾಗಿ ಮನೆ ನಿರ್ಮಿಸಿಕೊಂಡಿರುವುದಾಗಿ ಆರೋಪಿಸಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದಾರೆ. ನಂತರ ಕಾಲ್ನಡಿಗೆ ಮೂಲಕ ಪೊನ್ನಂಪೇಟೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸರ್ಕಾರಿ ರಜಾ ದಿನದಂದು ಈ ಜಾಗದಲ್ಲಿ ಮನೆ ನಿರ್ಮಾಣಗೊಂಡಿದೆ. ಭ್ರಷ್ಟ ವ್ಯವಸ್ಥೆಗೆ ಅಧಿಕಾರಿಗಳು, ಕೆಲವು ಜನಪ್ರತಿನಿಧಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಕಾನೂನು ಬಾಹಿರವಾಗಿ ನಿರ್ಮಿಸಿ ಮನೆಯನ್ನು ತೆರವುಗೊಳಿಸುವಂತೆ ಕುಮಾರಪ್ಪ ಒತ್ತಾಯಿಸಿದರು.

ವ್ಯಕ್ತಿಗೆ ಪಂಚಾಯಿತಿ ವತಿಯಿಂದ ಮನೆ ಮಂಜೂರಾಗಿದ್ದು, ಹಕ್ಕುಪತ್ರವನ್ನು ಹೊಂದಿದ್ದಾರೆ. ಈತ ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿವಾಸಿಯಾಗಿದ್ದು, ಅಲ್ಲಿಯ ಮತದಾರನಾಗಿದ್ದಾರೆ. ಕರ್ನಾಟಕ ಗಡಿ ಭಾಗದಲ್ಲಿ ಈತನಿಗೆ ಮನೆ ಕೂಡ ಸರ್ಕಾರದಿಂದ ಮಂಜೂರಾಗಿದೆ.

ಕೆಲವು ವರ್ಷಗಳಿಂದ ಈತ ಇಲ್ಲಿಗೆ ಆಗಮಿಸಿ ಇಲ್ಲಿಯೂ ಕೂಡ ಹಕ್ಕು ಪತ್ರ ಪಡೆಯುವ ಮೂಲಕ ಮನೆ ನಿರ್ಮಿಸಿಕೊಂಡಿದ್ದಾನೆ. ಇದೀಗ ಮತ್ತೊಂದು ಮನೆ ನಿರ್ಮಾಣಕ್ಕೆ ಮುಂದಾಗಿದ್ದು ಸರ್ಕಾರಿ ಇಂಗು ಗುಂಡಿಯನ್ನು ಮುಚ್ಚಿಮಾತನಾಡಿ, ಕಳೆದೆರಡು ವರ್ಷಗಳಿಂದ ಜನಸಾಮಾನ್ಯರು ಪ್ರವಾಹಕ್ಕೆ ಸಿಲುಕಿ ಹಾಗೂ ಕೊರೊನಾ ಪರಿಸ್ಥಿತಿ ಲಾಕ್‌ಡೌನ್‌ನಿಂದ ಕೆಲಸಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಆದರೆ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರವು ಇದೀಗ ಕೆಲವು ಅನಗತ್ಯ ಮಾನದಂಡಗಳನ್ನು ಜಾರಿಗೆ ತರುವ ಮೂಲಕ ಬಡ ವರ್ಗದ ಬಿಪಿಎಲ್ ಪಡಿತರ ಚೀಟಿಗಳನ್ನು ಏಕಾಏಕಿ ರದ್ದುಗೊಳಿಸುವ ಮೂಲಕ ಜನ ಸರ್ಕಾರಿ ಆಸ್ತಿಯನ್ನು ತನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾನೆAದು ಆರೋಪಿಸಿರುವ ಕುಮಾರಪ್ಪ ಈ ಕೆಲಸಕ್ಕೆ ಕುಮ್ಮಕ್ಕು ನೀಡಿ ಸರ್ಕಾರಿ ಆಸ್ತಿ ಹಾಳು ಗೆಡವಲು ಪರೋಕ್ಷವಾಗಿ ಸಹಕರಿಸಿದವರ ಮೇಲೆಯೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.