ಮಡಿಕೇರಿ, ಜು. ೨೬: ಮಡಿಕೇರಿಯ ಹಿರಿಯ ವಕೀಲ ಪಿ.ಎಂ. ಜಕರಿಯ (೭೯) ತಾ. ೨೬ರಂದು ಮೃತಪಟ್ಟಿದ್ದಾರೆ. ನಿಧನ ಹಿನ್ನೆಲೆ ಜಿಲ್ಲಾ ನ್ಯಾಯಾಲಯದಲ್ಲಿ ಸಂತಾಪ ಸಭೆ ಜರುಗಿತು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ, ವಕೀಲ ಜಕರಿಯ ಎಲ್ಲಾ ವಕೀಲರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಕಾನೂನಿನ ಬಗ್ಗೆ ಅಪಾರವಾದ ಜ್ಞಾನವಿತ್ತು ಎಂದು ಶ್ಲಾಘಿಸಿದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿನರಾಲ್‌ಕರ್ ಭೀಮರಾವ್ ಲಗಮಪ್ಪ, ನ್ಯಾಯಾಧೀಶರಾದ ಪಿ.ಎಸ್. ಚಂದ್ರಶೇಖರ್, ಸುಬ್ರಮಣ್ಯ, ಕೆ. ರೂಪ, ಮನು, ಸ್ಮಿತಾ, ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್. ರತನ್ ತಮ್ಮಯ್ಯ, ಕಾರ್ಯದರ್ಶಿ ಎಂ.ಕೆ. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸಂಜಯ್ ರಾವ್, ಖಚಾಂಚಿ ಬಿ.ಸಿ. ದೇವಿಪ್ರಸಾದ್, ಪದಾಧಿಕಾರಿಗಳು, ವಕೀಲರ ಸಂಘದ ಸದಸ್ಯರು, ನ್ಯಾಯಾಂಗ ಇಲಾಖೆ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಮೃತರ ಗೌರವಾರ್ಥ ಮೌನಾಚರಣೆ ನಡೆಯಿತು.