ಕುಶಾಲನಗರ, ಜು. ೨೬: ಕೋಳಿಮೊಟ್ಟೆ ಸಾಗಿಸುತ್ತಿದ್ದ ವಾಹನವೊಂದರಿAದ ಸಾವಿರಾರು ಮೊಟ್ಟೆಗಳು ರಸ್ತೆಗೆ ಬಿದ್ದು ನಾಶವಾದ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಅಂದಾಜು ೧೨ ಸಾವಿರ ಮೊಟ್ಟೆಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭ ಕಾರ್ಯಪ್ಪ ವೃತ್ತದಲ್ಲಿ ಎದುರು ಬಂದ ವಾಹನವನ್ನು ತಪ್ಪಿಸಲು ಯತ್ನಿಸಿದಾಗ ವಾಹನದಿಂದ ಮೊಟ್ಟೆಗಳ ಕ್ರೇಟ್‌ಗಳು ರಸ್ತೆಗೆ ಬಿದ್ದು ಸಂಪೂರ್ಣ ನಾಶಗೊಂಡಿವೆ. ಸುಮಾರು ೬೦ ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ವಾಹನ ಚಾಲಕ ಮಾಹಿತಿ ನೀಡಿದರು.