ಮಡಿಕೇರಿ, ಜು. ೨೫: ಕೊರೊನಾ ಪರಿಸ್ಥಿತಿ, ಲಾಕ್ಡೌನ್ ಬಿಗಿನಿಯಮಗಳ ನಡುವೆ ಕ್ರೀಡಾ ತವರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಮೊದಲೆಲ್ಲ ಮಾರ್ಚ್ನಿಂದ ಸೆಪ್ಟೆಂಬರ್ ತನಕ ಜಿಲ್ಲೆಯ ವಿವಿಧೆಡೆ ಕೌಟುಂಬಿಕ ಕ್ರೀಡಾ ಹಬ್ಬಗಳು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಾಟಗಳು ನಡೆಯುತ್ತಿದ್ದವು. ಆದರೆ, ಕೊರೊನಾ ಕರಿನೆರಳಿನಿಂದ ಕಾರ್ಯಕ್ರಮಗಳು ನಡೆಸಲಾಗುತ್ತಿರಲಿಲ್ಲ. ಇದೀಗ ಬಿಗಿನಿಯಮ ಸಡಿಲದಿಂದ ಕೊಡಗಿನಲ್ಲಿ ಕ್ರೀಡಾ ಚಟುವಟಿಕೆಗಳು ಮೆಲ್ಲನೆ ಆರಂಭಗೊAಡಿವೆ. ಅನ್ಲಾಕ್ ಬಳಿಕ ಜಿಲ್ಲೆಯಲ್ಲಿ ಮೊದಲ ಪಂದ್ಯಾಟ ಯಶಸ್ವಿಯಾಗಿ ನಡೆದಿದ್ದು, ದುಗುಡ ದುಮ್ಮಾನ ಮರೆಯಾಗಿ, ಕೆಸರಿನೋಕುಳಿಯಲ್ಲಿ ಆಟಗಾರರು ಸಂಭ್ರಮಿಸಿದ್ದಾರೆ.
ಮಡಿಕೇರಿ ತಾಲೂಕಿನ ಬೆಟ್ಟಗೇರಿ ಸಮೀಪದ ರ್ವತ್ತೊಕ್ಲಿನ ಬೇಕೋಟ್ ಮಕ್ಕ ಯುವಕ ಮಂಡಲದ ವತಿಯಿಂದ ತಳೂರು ಚಂಗಪ್ಪ ಹಾಗೂ ಕುಶಾಲಪ್ಪ ಅವರ ಗದ್ದೆಯಲ್ಲಿ ಲಾಕ್ಡೌನ್ ಬಿಗಿನಿಯಮಗಳ ಸಡಿಲಿಕೆಯ ಬಳಿಕ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.
೨೦೧೮ ರಿಂದ ಜಿಲ್ಲೆಯಲ್ಲಿ ಕ್ರೀಡಾಕೂಟಗಳು ಕಡಿಮೆಯಾಗಿದ್ದವು. ಇದಕ್ಕೆ ಪ್ರಾಕೃತಿಕ ವಿಕೋಪ ಕಾರಣವಾಗಿತ್ತು. ಇದರಿಂದ ವಿವಿಧ ಕೌಟುಂಬಿಕ ಸೇರಿದಂತೆ ನಡೆಯುತ್ತಿದ್ದ ಕ್ರೀಡಾ ಸಂಭ್ರಮ ಮಂಕಾಗಿದ್ದವು. ೨೦೨೦ ರಿಂದ ಕೊರೊನಾ ಕರಿನೆರಳು ಕ್ರೀಡಾ ಕಲರವಗಳ ಮೇಲೆ ಬೀರಿತ್ತು. ಸದ್ಯಕ್ಕೆ ಕೊರೊನಾ ಪರಿಸ್ಥಿತಿಯಿಂದ ಚೇತರಿಕೆ ಕಾಣುತ್ತಿರುವ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಒಂದೊAದೆ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿವೆ.
ಕೆಸರಿನಲ್ಲಿ ಸಂಭ್ರಮ
ಕೊಡಗು ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆಯ ಬಳಿಕ ಆಯೋಜನೆಗೊಂಡ ಮೊದಲ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಸಂಭ್ರಮದಿAದ ಪಾಲ್ಗೊಂಡರು.
ಕ್ರೀಡಾಕೂಟದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬAದರು. ವಿವಿಧ ಕಡೆಗಳಿಂದಲೂ ಸ್ಪರ್ಧಿಗಳು ಬಂದಿದ್ದರು. ವಿಶಾಲವಾದ ಕೆಸರುಗದ್ದೆಯಲ್ಲಿ ಓಟ, ಹಗ್ಗಜಗ್ಗಾಟ ಪೈಪೋಟಿಗಳು ನೋಡುಗರಿಗೂ ಖುಷಿ ತಂದವು. ನೂರಾರೂ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದರು.
ಕೆಸರಿನಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಮಿಂದೆದ್ದು ಸಂಭ್ರಮಿಸಿದರು. ಓಟದ ಸಂದರ್ಭ ಬಿದ್ದು, ಬಿದ್ದು ಓಡುವುದು ಕೂಡ ನೋಡುಗರಿಗೆ ಮನರಂಜನೆ ನೀಡಿತು. ಮಹಿಳೆಯರೂ ನಾವ್ಯಾರಿಗೂ ಕಮ್ಮಿ ಇಲ್ಲ ಎಂಬAತೆ ಓಟದಲ್ಲಿ ಭಾಗವಹಿಸಿದರು. ಪುಟಾಣಿಗಳಿಗಂತೂ ಕೆಸರಿನಲ್ಲಿ ಕುಣಿದು ಕುಪ್ಪಳಿಸಿದರು.
ಮಹಿಳೆಯರು ಹಾಗೂ ಪುರುಷರಿಗೆ ನಡೆದ ಹಗ್ಗಜಗ್ಗಾಟ ಅತ್ಯಂತ ಕುತೂಹಲ ಮೂಡಿಸಿತ್ತು. ಕೆಸರಿನ ನಡುವೆ ಹಗ್ಗ ಹಿಡಿದು ಪೈಪೋಟಿ ನಡೆಸಿದರು. ಕೊನೆಗೆ ಎಲ್ಲರೂ ಒಂದಾಗಿ ಗದ್ದೆಯಲ್ಲಿ ವಾಲಗಕ್ಕೆ ಹೆಜ್ಜೆಹಾಕಿ ಸಂಭ್ರಮಪಟ್ಟರು. ಸದಾ ಜಂಜಾಟದಲ್ಲಿರುವ ಪತ್ರಕರ್ತರು ಕೂಡ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕೊಡಗು ಪ್ರೆಸ್ಕ್ಲಬ್ ತಂಡ ಹಗ್ಗಜಗ್ಗಾಟದಲ್ಲಿ ಸ್ಪರ್ಧಿಸಿ ಸೆಮಿಫೈನಲ್ನಲ್ಲಿ ಪರಾಭವಗೊಂಡಿತು.
ಸಭಾ ಕಾರ್ಯಕ್ರಮ
ಸಂಘಟನೆಯ ಅಧ್ಯಕ್ಷ ಸೂರಿ ಕಾಕೇರಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ, ಮಕ್ಕಳ ತಜ್ಞ ಡಾ.ಕುಶ್ವಂತ್ ಕೋಳಿಬೈಲು, ಶಿಕ್ಷಕ ಕೋಳುಮಾಡನ ರಾಮಚಂದ್ರ, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಗ್ರಾ.ಪಂ. ಸದಸ್ಯ ದಿನೇಶ್ ಕರುಂಬಯ್ಯ, ಪೆರಾತ ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಬಾಲಡಿ ದಿಲೀಪ್ ಕುಮಾರ್, ಬಿಳಿಗೇರಿ ಪ್ಲಾö್ಯಂರ್ಸ್ ಕ್ಲಬ್ ಅಧ್ಯಕ್ಷ ಅರವಿಂದ್ ಕುಡೆಕಲ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂತಿ ಬೋಪಯ್ಯ, ಹಿಂದಿನ ಕಾಲದಲ್ಲಿ ಕೃಷಿ ಸಮಯ ಬಂದಾಗ ಗದ್ದೆಗಳಲ್ಲಿ ಕ್ರೀಡಾಕೂಟಗಳು ನಡೆಯುತ್ತಿದ್ದವು. ಇದು ಗ್ರಾಮಸ್ಥರು ಒಗ್ಗೂಡುವಿಕೆಗೆ ಸಾಕ್ಷಿಯಾಗುತ್ತಿತ್ತು. ಪ್ರಸ್ತುತ ಕಾಲಘಟ್ಟದಲ್ಲಿ ಗದ್ದೆಗಳನ್ನು ಪಾಳು ಬೀಡುತ್ತಿರುವುದು ವಿಷಾದÀನೀಯ ಎಂದರು.
ಡಾ.ಕುಶ್ವಂತ್ ಕೋಳಿಬೈಲು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜನೆಯಿಂದ ಪ್ರತಿಭೆಗಳಿಗೆ ವೇದಿಕೆ ಸಿಕ್ಕಂತಾಗುತ್ತವೆ. ಗ್ರಾಮೀಣ ಪ್ರತಿಭಾನ್ವಿತರು ರಾಜ್ಯ, ರಾಷ್ಟçಮಟ್ಟದಲ್ಲಿ ಸಾಧನೆಗೈದಿದ್ದಾರೆ. ಇದಕ್ಕೆ ಒಲಂಪಿಕ್ಸ್ ಬೆಳ್ಳಿಪದಕ ಗೆದ್ದ ಮೀರಬಾಯಿ ಚಾನು ಉದಾಹರಣೆ ಎಂದ ಅವರು, ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ಧಿಯ ಜೊತೆಗೆ ಸಾಮರಸ್ಯ, ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದು ತಿಳಿಸಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ನಗರಕ್ಕೆ ವಲಸೆ ಹೋಗಿ ಜೀವನ ಕಂಡುಕೊಳ್ಳುತ್ತಿದ್ದಾರೆ. ಕ್ರಮೇಣ ಇಲ್ಲಿನ ಸಂಸ್ಕೃತಿ, ಜೀವನಶೈಲಿ ಮರೆಯುತ್ತಿದ್ದರು. ಆದರೆ, ಕೊರೊನಾ, ಲಾಕ್ಡೌನ್ ಪರಿಸ್ಥಿತಿಯಿಂದ ನಗರದಲ್ಲಿ ನೆಲೆಸಿದ್ದವರು
(ಮೊದಲ ಪುಟದಿಂದ) ಗ್ರಾಮಕ್ಕೆ ಹಿಂತಿರುಗುತ್ತಿದ್ದಾರೆ. ಮರಳಿ ಕೃಷಿ ಕಡೆ ಮುಖ ಮಾಡುತ್ತಿದ್ದಾರೆ. ಇದು ಪ್ರಕೃತಿ ಕಲಿಸಿದ ಪಾಠವಾಗಿದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ದೇಶದ ಆರ್ಥಿಕತೆಯನ್ನು ಕೃಷಿ ನಿರ್ಧಾರ ಮಾಡುವುದಿಲ್ಲ. ಆದರೆ, ನಮ್ಮ ಬದುಕು,ಆಚಾರ-ವಿಚಾರ, ಜೀವನಶೈಲಿಗೆ ಕೃಷಿ ಮೂಲವಾಗಿದೆ ಎಂದರು. - ಹೆಚ್.ಜೆ. ರಾಕೇಶ್