ಮಡಿಕೇರಿ, ಜು. ೨೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯದ ಬೆಟ್ಟಗೇರಿ ಕಾರ್ಯಕ್ಷೇತ್ರ ಅಪ್ಪಂಗಳದ, ಅಣ್ಣಪ್ಪ ಸ್ವಸಹಾಯ ಸಂಘದವರಿಗೆ ಬೆಟ್ಟಗೇರಿ ಗ್ರಾಮ ಪಂ. ಸದಸ್ಯರಾದ ಬಿ.ಕೆ. ಗೋಪಾಲ ಪೂಜಾರಿ ಲಾಭಾಂಶವನ್ನು ವಿತರಿಸಿದರು. ಈ ಸಂದರ್ಭ ಬೆಟ್ಟಗೇರಿ ಸೇವಾ ಪ್ರತಿನಿಧಿ ಕೆ.ಯಂ. ಗೌರಮ್ಮ ಮತ್ತು ಅಣ್ಣಪ್ಪ ತಂಡದ ಸದಸ್ಯರು ಹಾಜರಿದ್ದರು.