ಸೋಮವಾರಪೇಟೆ, ಜು. ೨೭: ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಜಿಲ್ಲೆಯೊಳಗೆ ಬಾಂಗ್ಲಾ ವಲಸಿಗರು ಅಕ್ರಮವಾಗಿ ನುಸುಳುತ್ತಿದ್ದು, ಇವರುಗಳ ಬಗ್ಗೆ ಎನ್‌ಐಎಯಿಂದ ಸಮಗ್ರ ತನಿಖೆ ನಡೆಸಬೇಕೆಂದು ವಿವಿಧ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

ಪಟ್ಟಣದ ಪತ್ರಿಕಾಭವನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಬೇಳೂರು ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಜಿ. ಪ್ರಶಾಂತ್, ನಿನ್ನೆ ರಾತ್ರಿ ೧೦ ಗಂಟೆ ಸುಮಾರಿಗೆ ಸೋಮವಾರಪೇಟೆ ಪಟ್ಟಣದಲ್ಲಿ ನಕಲಿ ದಾಖಲಾತಿಗಳನ್ನು ಹೊಂದಿದ್ದ ೫೭ ಮಂದಿ ಕಂಡುಬAದಿದ್ದು, ಇವರಲ್ಲಿ ಅಸ್ಸಾಂ ರಾಜ್ಯದ ಗುರುತಿನ ಚೀಟಿಗಳು ದೊರಕಿವೆ. ಒಂದೇ ವ್ಯಕ್ತಿಗೆ ಸೇರಿದ ದಾಖಲಾತಿಗಳಲ್ಲಿ ನಮೂದಾಗಿರುವ ವಿವರಗಳು ಸಂಶಯ ಮೂಡಿಸುತ್ತಿವೆ ಎಂದರು.

ಬೆAಗಳೂರಿನಿAದ ಬಸ್ ಮೂಲಕ ರಾತ್ರಿ ೧೦ ಗಂಟೆ ಸುಮಾರಿಗೆ ಆಗಮಿಸಿರುವ ಇವರು, ಟಾಟಾ ಕಾಫಿ ಸಂಸ್ಥೆ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟಕ್ಕೆ ಬಂದಿರುವುದಾಗಿ ಹೇಳಿದ್ದರು. ಟಾಟಾ ಎಸ್ಟೇಟ್‌ನವರನ್ನು ವಿಚಾರಿಸಿದರೆ ನಮ್ಮ ತೋಟಕ್ಕೆ ಕರೆಸಿಲ್ಲ ಎಂದಿದ್ದಾರೆ. ರಾತ್ರಿ ಪೊಲೀಸ್ ಸಮಕ್ಷಮ ಮಾಹಿತಿ ಕಲೆ ಹಾಕಿ ಇವರುಗಳನ್ನು ಜಿಲ್ಲೆಯ ಗಡಿ ದಾಟಿಸಲು ಕೊಪ್ಪಕ್ಕೆ ತೆರಳಿದ ಸಂದರ್ಭ ಸ್ಥಳೀಯ ಕಾಫಿ ತೋಟ ಮಾಲೀಕರು ಆಗಮಿಸಿ ವಲಸಿಗರನ್ನು ತಮ್ಮ ತೋಟಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದರು.

ವಲಸಿಗರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿಯೂ ಇಲ್ಲ. ಅಸ್ಸಾಮಿಗರ ಹೆಸರಿನಲ್ಲಿ ಬಾಂಗ್ಲಾ ದೇಶದ ಪ್ರಜೆಗಳನ್ನು ಅಕ್ರಮವಾಗಿ ಕರೆತಂದು ಕೊಡಗಿನ ಕಾಫಿ ತೋಟದಲ್ಲಿ ಆಶ್ರಯ ಕಲ್ಪಿಸುವ ಮಾಫಿಯಾ ಒಂದು ಕಾರ್ಯಾಚರಿಸುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ ಎಂದು ಪ್ರಶಾಂತ್ ಆಗ್ರಹಿಸಿದರು.

೫೭ ಮಂದಿಯ ಪೈಕಿ ೨೦ ಮಕ್ಕಳೂ ತಂಡದಲ್ಲಿದ್ದು, ಇವರುಗಳಿಗೆ ಕೋವಿಡ್ ಲಸಿಕೆ ಹಾಕಿಸಿರುವ ಪ್ರಮಾಣ ಪತ್ರಗಳು ಕಂಡುಬAದಿವೆ. ಒಂದು ವೇಳೆ ಇವರುಗಳು ಅಸ್ಸಾಮಿಗರೇ ಆಗಿದ್ದಲ್ಲಿ ಸಣ್ಣ ಮಕ್ಕಳನ್ನು ಕಾಫಿ ತೋಟದಲ್ಲಿ ಬಾಲಕಾರ್ಮಿಕರಾಗಿ ದುಡಿಸಿಕೊಳ್ಳಲು ಅವಕಾಶವಿಲ್ಲ. ಈ ಮಕ್ಕಳು ಶಿಕ್ಷಣದಿಂದ

(ಮೊದಲ ಪುಟದಿಂದ) ವಂಚಿತರಾಗುತ್ತಿದ್ದು, ಇವರನ್ನು ಕರೆಸಿಕೊಂಡ ತೋಟ ಮಾಲೀಕರೇ ಈ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಿ ಎಂದರು.

ಹಿAದೂ ಜಾಗರಣಾ ವೇದಿಕೆ ಅಧ್ಯಕ್ಷ ಎಂ.ಬಿ. ಉಮೇಶ್ ಮಾತನಾಡಿ, ಕೋವಿಡ್‌ನಿಂದಾಗಿ ಸ್ಥಳೀಯ ಕಾರ್ಮಿಕರು ಕೆಲಸವಿಲ್ಲದೇ ತೊಂದರೆ ಅನುಭವಿಸಿದ್ದು, ಇದೀಗ ಕೆಲಸ ಕಾರ್ಯಗಳು ಪ್ರಾರಂಭವಾಗಿವೆ. ಇಂತಹ ಸಂದರ್ಭದಲ್ಲಿ ಬಾಂಗ್ಲಾ ದೇಶದವರನ್ನು ಅಕ್ರಮವಾಗಿ ಕರೆತಂದು ಕೆಲಸ ನೀಡಲಾಗುತ್ತಿದೆ. ತೋಟದ ಮಾಲೀಕರು ಸ್ಥಳೀಯ ಕಾರ್ಮಿಕರ ಹಿತ ಕಾಪಾಡಬೇಕು ಎಂದರು.

ಈ ಹಿಂದೆಯೂ ಅಕ್ರಮ ವಲಸಿಗರದಿಂದ ತಾಲೂಕಿನಲ್ಲಿ ಅಹಿತಕರ ಘಟನೆ ನಡೆದಿವೆ. ಕೆಲ ತಿಂಗಳ ಹಿಂದಷ್ಟೇ ಐಗೂರಿನ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ಜಾನುವಾರುಗಳ ಮಾರಣಹೋಮ ನಡೆದಿದ್ದು, ಬೇಳೂರಿನಲ್ಲೂ ಸ್ಥಳೀಯರ ಮೇಲೆ ಹಲ್ಲೆಗಳಾಗಿವೆ. ಸೋಮವಾರಪೇಟೆ ವ್ಯಾಪ್ತಿಯ ಹಲವಷ್ಟು ಕಾಫಿ ತೋಟದಲ್ಲಿ ಅಕ್ರಮ ವಲಸಿಗರು ನೆಲೆಸಿದ್ದು, ಗೋಹತ್ಯೆ, ಅಕ್ರಮ ಗೋ ಸಾಗಾಟ ನಿರಂತರವಾಗಿದೆ. ಸಮಾಜಘಾತುಕ ಕಾರ್ಯಗಳನ್ನು ತಡೆಯಬೇಕಾದರೆ ತಕ್ಷಣ ಬಾಂಗ್ಲಾ ವಲಸಿಗರನ್ನು ಜಿಲ್ಲೆಯಿಂದ ಹೊರಗಟ್ಟಬೇಕಾಗಿದೆ ಎಂದು ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್ ಸರೋಜಿನಿ ಮಹಿಷಿ ವರದಿ ಅನ್ವಯ ಕನ್ನಡಿಗರಿಗೆ ಶೇ.೭೫ ಉದ್ಯೋಗವಕಾಶ ಮೀಸಲಿಡ ಬೇಕೆಂದು ತಿಳಿಸಿದೆ. ಆದರೆ ಹೊರ ಭಾಗದ ಮಂದಿಯೇ ಎಲ್ಲಾ ತೋಟಗಳಲ್ಲಿ ತುಂಬಿಹೋಗಿದ್ದಾರೆ. ಇದರಿಂದಾಗಿ ಸ್ಥಳೀಯ ಕಾರ್ಮಿಕರ ಬದುಕಿಗೆ ಸಮಸ್ಯೆಯಾಗಿದೆ. ಇದರೊಂದಿಗೆ ಸಾಮರಸ್ಯವೂ ಹಾಳಾಗುತ್ತಿದ್ದು, ಅಸ್ಸಾಮಿಗರ ಹೆಸರಲ್ಲಿ ಅಕ್ರಮವಾಗಿ ನೆಲೆಸಿರುವ ವ್ಯಕ್ತಿಗಳ ವಿರುದ್ಧ ಎನ್‌ಐಎ ತನಿಖೆಯಾಗಲೇ ಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್. ದೀಪಕ್ ಆಗ್ರಹಿಸಿದರು.

ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಅವರುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಮುಂದಾಗಬೇಕು ಎಂದು ಗೋಷ್ಠಿಯಲ್ಲಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಹೇಳಿದರು.