(ವರದಿ ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜು. ೨೭: ಗಜ ಮಂದೆಯೊAದಿಗೆ ತನ್ನ ತಾಯಿಯೊಡನೆ ಸಾಗುತ್ತಿದ್ದ ಮರಿಯಾನೆಯೊಂದು ಆಕಸ್ಮಿಕವಾಗಿ ಮಾನವ ನಿರ್ಮಿತ ಗುಂಡಿಯೊAದಕ್ಕೆ ಬಿದ್ದು ಅಪಾಯಕ್ಕೆ ಸಿಲುಕಿದ ಘಟನೆ ನಡೆಯಿತು. ಪ್ರಾಣಾಪಾಯದಲ್ಲಿ ಸಿಲುಕಿದ ಈ ಮರಿಯಾನೆಯ ಬಗ್ಗೆ ಗಮನಕ್ಕೆ ಬರದೆ ತಾಯಿಯೂ ಸೇರಿದಂತೆ ಗಜಗಳ ಹಿಂಡು ಸನಿಹದ ದೇವರಕಾಡು ಪ್ರವೇಶಿಸಿದವು. ಮರಿಯಾನೆ ತನ್ನ ಪ್ರಾಣ ರಕ್ಷಣೆಗಾಗಿ ಘೀಳಿಟ್ಟು ಆಕ್ರಂದನಗೈದಿತು ತಕ್ಷಣ ಸ್ಪಂದಿಸಿದ ಸ್ಥಳೀಯ ಗ್ರಾಮಸ್ಥರು, ಅರಣ್ಯ ಇಲಾಖಾ ಸಿಬ್ಬಂದಿಯ ಮಾನವೀಯತೆಯ ಕಾರ್ಯಾಚರಣೆಯಿಂದ ಗುಂಡಿಗೆ ಬಿದ್ದ ಮರಿಯಾನೆ ಮೇಲೇಳುವಂತಾಗಿ ರಕ್ಷಿಸಲ್ಪಟ್ಟಿ ಸಾಕಾನೆಯೊಂದು ರಕ್ಷಣಾ ತಂಡಕ್ಕೆ ನೆರವಾಯಿತು.

ತಮ್ಮ ಮನೆಯ ಸಮೀಪದಲ್ಲಿ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದ ಗುಂಡಿಯೊಳಗೆ ಮರಿಯಾನೆಯೊಂದು ಬಿದ್ದಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ತಿತಿಮತಿ ಸಮೀಪದ ಭದ್ರಗೋಳ ಗ್ರಾಮದ ನಿವಾಸಿ ಎಂ.ಎA. ಸುಬ್ರಮಣಿ ಎಂಬವರು ಕಳೆದ ಕೆಲವು ಸಮಯಗಳಿಂದ ತಮ್ಮ ಮನೆಯ ಸಮೀಪ ಸೆಪ್ಟಿಕ್ ಟ್ಯಾಂಕ್ ತೆಗೆದಿದ್ದರು. ನಂತರ ಇದನ್ನು ಬಳಕೆ ಮಾಡದೇ ಹಾಗೆಯೇ ಬಿಟ್ಟಿದ್ದರು. ಇತ್ತೀಚಿನ ಮಳೆಯಿಂದಾಗಿ ಈ ಟ್ಯಾಂಕ್‌ನಲ್ಲಿ ನೀರು ತುಂಬಿತ್ತು.

ಮAಗಳವಾರ ಮುಂಜಾನೆಯ ವೇಳೆ ಈ ಭಾಗದಲ್ಲಿ ಕಾಡಾನೆಗಳು ಸಂಚಾರ ಮಾಡುವ ಸಮಯದಲ್ಲಿ ಗುಂಪಿನಲ್ಲಿದ್ದ ಮರಿಯಾನೆಯು ಈ ಟ್ಯಾಂಕ್‌ಗೆ ಬಿದ್ದಿದೆ. ಮೇಲೆಳೆಲು ಸಾಧ್ಯವಾಗದೇ ಘೀಳಿಡುತ್ತಿದ್ದ ಶಬ್ಧ ಕೇಳಿದ ನಾಗರಿಕರು ಸ್ಥಳಕ್ಕೆ ಬಂದು ನೋಡಿದಾಗ ಮರಿಯಾನೆ ಟ್ಯಾಂಕ್‌ನಲ್ಲಿ ಸಿಲುಕಿ ಮೇಲೆ ಬರಲು ಕಷ್ಟಪಡುತ್ತಿರುವುದನ್ನು ಗಮನಿಸಿ ಸಮೀಪದ ತಿತಿಮತಿ ಅರಣ್ಯ ಇಲಾಖೆಯ ಆರ್.ಎಫ್.ಓ. ಅಶೋಕ್ ಹುನಗುಂದ ಅವರ ಗಮನಕ್ಕೆ ತಂದಿದ್ದಾರೆ.

ಸುದ್ದಿ ತಿಳಿದ ಆರ್.ಎಫ್.ಓ. ಅಶೋಕ್ ಹಾಗೂ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ,

(ಮೊದಲ ಪುಟದಿಂದ) ಟ್ಯಾಂಕ್ ಅನ್ನು ಒಡೆಯುವ ಮೂಲಕ ಮರಿಯಾನೆ ರಕ್ಷಿಸುವ ಪ್ರಯತ್ನ ಮಾಡಿದರು. ಬಳಿಕ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ಮೈಸೂರು ದಸರಾದ ಜಂಬು ಸವಾರಿಯಲ್ಲಿ ಭಾಗವಹಿಸುವ ಕೃಷ್ಣ ಎಂಬ ಆನೆಯನ್ನು ಬಳಸಿಕೊಂಡು ಕಂದಕಕ್ಕೆ ಬಿದ್ದಿದ್ದ ಮರಿಯಾನೆಯನ್ನು ಹೊರತೆಗೆಯಲಾಯಿತು. ಸಾಕಾನೆ ಕೃಷ್ಣನ ದೇಹಕ್ಕೆ ಕಟ್ಟಿದ ಹಗ್ಗದ ಒಂದು ಬದಿಯನ್ನು ಕಂದಕಕ್ಕೆ ಬಿದ್ದಿದ್ದ ಮರಿಯಾನೆಗೆ ಕಟ್ಟಲಾಗಿತ್ತು. ಕೃಷ್ಣ ಮರಿಯಾನೆಯನ್ನು ಎಳೆದು ಮೇಲೆತ್ತುವ ದೃಶ್ಯ ರೋಚಕವಾಗಿತ್ತು.

ಗೋಣಿಕೊಪ್ಪ - ಮೈಸೂರು ಮುಖ್ಯ ರಸ್ತೆಯ ಬದಿಯಲ್ಲಿ ಈ ಘಟನೆ ನಡೆದ ಕಾರಣ ದಾರಿಯಲ್ಲಿ ಸಾಗುವ ವಾಹನ ಸವಾರರು, ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಸತತ ಒಂದು ಗಂಟೆಯ ಕಾರ್ಯಾಚರಣೆ ನಂತರ ಮರಿಯಾನೆಯನ್ನು ಟ್ಯಾಂಕ್‌ನಿAದ ಹೊರ ತೆಗೆಯಲಾಯಿತು.

ನಂತರ ಸಮೀಪದ ದೇವರ ಕಾಡಿನಲ್ಲಿರುವ ಕಾಡಾನೆಗಳ ಹಿಂಡಿನ ಜೊತೆಯಲ್ಲಿ ತಾಯಿಯೊಂದಿಗೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಶೋಧ ಕೈಗೊಂಡಿದೆ.