ಮಡಿಕೇರಿ, ಜು. ೨೬: ೧೦ನೇ ತರಗತಿ ವಾರ್ಷಿಕ ಪರೀಕ್ಷೆ ೨೦೨೦-೨೧ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾದ ೩೧ ವಿದ್ಯಾರ್ಥಿಗಳಲ್ಲಿ ೮ ವಿದ್ಯಾರ್ಥಿಗಳು ಶೇ. ೯೦ಕ್ಕಿಂತ ಆಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಕುಮಾರಿ ಹೆನ್ಯ ಕಾವೇರಪ್ಪ ಬಿ. ಶೇ. ೯೪.೬ ಅಂಕ ಗಳಿಸಿದ್ದಾರೆ. ಇಂಗ್ಲೀಷ್ ಲಿಟರೇಚರ್‌ನಲ್ಲಿ ೪ ವಿದ್ಯಾರ್ಥಿಗಳು, ಕಲೆ ಹಾಗೂ ದ್ಯೆಹಿಕ ಶಿಕ್ಷಣದಲ್ಲಿ ಕ್ರಮವಾಗಿ ಇಬ್ಬರು ವಿದ್ಯಾರ್ಥಿಗಳು ೧೦೦ ಅಂಕಗಳನ್ನು ಗಳಿಸಿದ್ದಾರೆ.
ಇದೇ ಶಾಲೆಯ ಹಳೆ ವಿದ್ಯಾರ್ಥಿನಿ ಅಂಕಿತಾ ಸುರೇಶ್ ಅವರು ಟೊಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ನಲ್ಲಿ ಭಾರತೀಯ ಹಿರಿಯ ಮಹಿಳಾ ತಂಡದ ತರಬೇತುದಾರರಾಗಿ ತೆರಳಿದ್ದಾರೆ.