ಸೋಮವಾರಪೇಟೆ, ಜು. ೨೬: ಇಲ್ಲಿನ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ಶಾಸಕರ ಅನುದಾನ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾದ ಸಿಲಿಕಾನ್ ಚೇಂಬರ್‌ನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಲೋಕಾರ್ಪಣೆಗೊಳಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ಗ್ರಾಮದಲ್ಲಿರುವ ರುದ್ರಭೂಮಿಯನ್ನು ಲಯನ್ಸ್ ಸಂಸ್ಥೆಯ ಮೂಲಕ ಅಭಿವೃದ್ಧಿಪಡಿ ಸಲಾಗಿದ್ದು, ಮೂಲಭೂತ ಸೌಕರ್ಯಗಳೊಂದಿಗೆ ಶವಸಂಸ್ಕಾರಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸಲಾಗಿದೆ.

ಕೋವಿಡ್ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿದ್ದು, ಅಂತ್ಯ ಸಂಸ್ಕಾರಕ್ಕೆ ಅನಾನುಕೂಲ ವಾಗಿದ್ದನ್ನು ಮನಗಂಡು ಸಾರ್ವಜನಿಕ ರುದ್ರಭೂಮಿಯ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಇದರೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಹೆಚ್ಚಿನ ಸಹಕಾರ ನೀಡಿದ್ದು, ಲಯನ್ಸ್ ಸಂಸ್ಥೆಯ ಮೂಲಕ ಉತ್ತಮ ಕಾರ್ಯ ನಡೆದಿದೆ ಎಂದು ಶಾಸಕರು ಶ್ಲಾಘಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಂಜೀವ, ಲಯನ್ಸ್ ಅಧ್ಯಕ್ಷ ಎಸ್.ಎನ್. ತೇಜಸ್ವಿ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಲಯನ್ಸ್ ಸಂಸ್ಥೆಯ ಜಗದೀಶ್, ಡಾ. ಜೀತ್‌ಪ್ರಕಾಶ್, ಕಾರ್ಯದರ್ಶಿ ಸಿ.ಕೆ. ರೋಹಿತ್, ಖಜಾಂಚಿ ಎಸ್.ಎನ್. ಯೋಗೇಶ್, ಬೇಳೂರು ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.