ಶನಿವಾರಸAತೆ, ಜು. ೨೭: ಮಾದ್ರೆ ಗ್ರಾಮದ ಮುಗಿಲು ಹೋಂ ಸ್ಟೇಗೆ ಶನಿವಾರಸಂತೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ೮ ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದುAಡಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾದೆ ಗ್ರಾಮದ ದಿನೇಶ್ ಎಂಬವರ ಮಾಲೀಕತ್ವದ ಮುಗಿಲು ಹೋಂಸ್ಟೇಯಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಶನಿವಾರಸಂತೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಪರಶಿವಮೂರ್ತಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆ ಪೊಲೀಸ್ ಅಧೀಕ್ಷಕ ಕ್ಷಮಾಮಿಶ್ರ ಮತ್ತು ಸೋಮವಾರಪೇಟೆ ಪೊಲೀಸ್ ಉಪಾಧೀಕ್ಷಕ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ತಾ. ೨೬ ಸಂಜೆ ಪೊಲೀಸರು ಹೋಂಸ್ಟೇಗೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳಾದ ಹಿತ್ತಲಕೇರಿ ಗ್ರಾಮದ ಯತೀಶ್, ಹಾಸನದ ಅರುವನಹಳ್ಳಿಯ ಶಿವು, ತಾಳೂರು ಗ್ರಾಮದ ಪುನೀತ್, ಶನಿವಾರಸಂತೆಯ ಶೇಷಗಿರಿ, ಚಂಗಡಹಳ್ಳಿಯ ಬಸವರಾಜ್, ಗೋಪಾಲಪುರದ ರೋಹಿತ್, ಹಂಡ್ಲಿ ಗ್ರಾಮದ ಹರೀಶ್, ಗೋಪಾಲಪುರದ ಪವನ್ ೮ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೋಂ ಸ್ಟೇ ಮಾಲೀಕ ದಿನೇಶ್ ತಲೆಮರೆಸಿಕೊಂಡಿದ್ದಾರೆ. ಕಣದಲ್ಲಿದ್ದ ರೂ ೭೭,೩೦೦, ೩ ಕಾರು, ೧ ಸ್ಕೂಟರ್ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಠಾಣಾ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಿಬ್ಬಂದಿಗಳಾದ ಲೋಕೇಶ್, ಹರೀಶ್, ಬೋಪಣ್ಣ, ಧನಂಜಯ, ಪ್ರಶಾಂತ್ ಪಾಟೀಲ್, ಷಣ್ಮುಖನಾಯಕ್, ಚಾಲಕ ಕುಮಾರ್ ಭಾಗವಹಿಸಿದ್ದು, ಕಾರ್ಯಾಚರಣೆಯನ್ನು ಅಧೀಕ್ಷಕರು ಶ್ಲಾಘಿಸಿದ್ದಾರೆ.