ಪೊನ್ನಂಪೇಟೆ, ಜು. ೨೭: ಕೊಡಗಿನ ದಕ್ಷಿಣ ಭಾಗದಲ್ಲಿ ಕೆಲವು ದಿನಗಳಿಂದ ವಿಪರೀತ ಮಳೆ ಸುರಿದ ಪರಿಣಾಮ ಶ್ರೀಮಂಗಲ ಸಮೀಪದ ಇರ್ಪು ಜಲಪಾತ ಭೋರ್ಗರೆಯುತ್ತಾ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ನೀರಿನ ಪ್ರಮಾಣ ಅಧಿಕವಾಗಿದ್ದು ರಭಸವಾಗಿ ಹರಿಯುತ್ತಿರುವುದರಿಂದ, ಸಾರ್ವಜನಿಕರು ಜಲಪಾತದ ತಳ ಭಾಗಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಜಲಪಾತದ ಸ್ವಲ್ಪ ಕೆಳಭಾಗದಲ್ಲಿರುವ ವೀಕ್ಷಣಾ ಸ್ಥಳದಲ್ಲಿ ನಿಂತು ಜಲ ಧಾರೆಯ ಸೊಬಗನ್ನು ನೋಡಬಹುದು.

ಲಾಕ್‌ಡೌನ್ ತೆರವುಗೊಂಡ ನಂತರ ಜಲಪಾತ ವೀಕ್ಷಣೆಗೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

-ಚನ್ನನಾಯಕ