ವೀರಾಜಪೇಟೆ, ಜು. ೨೭: ಲಾಕ್‌ಡೌನ್ ನಂತರದಲ್ಲಿ ಯಾವುದೇ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತರ್ಮೆಮೊಟ್ಟೆ ಗ್ರಾಮದಲ್ಲಿ ನಡೆದಿದೆ.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಮೆಮೊಟ್ಟೆ ನಿವಾಸಿ ಬಿ. ಚಂದ್ರ ಅವರ ಪುತ್ರ ಬಿ.ಸಿ. ಅರುಣ್ ಕುಮಾರ್ ಅಲಿಯಾಸ್ ಪವನ್ (೩೦) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೃತ ಪವನ್ ಕಾಫಿ ತೋಟ ಮತ್ತು ಇತರ ಕೂಲಿ ಕೆಲಸಗಳಿಗೆ ತೆರಳುತಿದ್ದ. ಆದರೆ ಲಾಕ್‌ಡೌನ್ ವೇಳೆಯಲ್ಲಿ ಕೆಲಸ ಇಲ್ಲದಾಗಿತ್ತು ಮದ್ಯಕ್ಕೆ ದಾಸನಾಗಿದ್ದ ಪವನ್ ಈ ನಡುವೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿತ್ತು. ಕೆಲ ದಿನಗಳ ಹಿಂದೆ ಸಂಜೆ ವೇಳೆಯಲ್ಲಿ ತೋಟಕ್ಕೆ ಬಳಸುವ ಕ್ರಿಮಿ ನಾಶಕವನ್ನು ಮದ್ಯದೊಂದಿಗೆ ಬೆರೆಸಿ ಕುಡಿದಿದ್ದಾನೆ. ತಕ್ಷಣವೇ ಪೋಷಕರು ಆತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತನ ತಂದೆ ಚಂದ್ರ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಮೃತ ಅರುಣ್ ಕುಮಾರ್ ಈ ಹಿಂದೆ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದ ನಡುವೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿತ್ತು. ಕೆಲ ದಿನಗಳ ಹಿಂದೆ ಸಂಜೆ ವೇಳೆಯಲ್ಲಿ ತೋಟಕ್ಕೆ ಬಳಸುವ ಕ್ರಿಮಿ ನಾಶಕವನ್ನು ಮದ್ಯದೊಂದಿಗೆ ಬೆರೆಸಿ ಕುಡಿದಿದ್ದಾನೆ. ತಕ್ಷಣವೇ ಪೋಷಕರು ಆತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತನ ತಂದೆ ಚಂದ್ರ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಮೃತ ಅರುಣ್ ಕುಮಾರ್ ಈ ಹಿಂದೆ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದ