ಕೂಡಿಗೆ, ಜು. ೨೭: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗಳಿಗೆ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪ್ರಕ್ರಿಯೆ ಕೂಡಿಗೆ ಕ್ರೀಡಾ ಪ್ರೌಢಶಾಲಾ ಮೈದಾನದಲ್ಲಿ ಆರಂಭಗೊAಡಿದೆ.
ರಾಜ್ಯದ ೩೨ ಕ್ರೀಡಾ ಹಾಸ್ಟೆಲ್ಗಳಿಗೆ ೭ನೇ ತರಗತಿಯಲ್ಲಿ ಉತ್ತೀರ್ಣರಾಗಿ ೮ನೇ ತರಗತಿಗೆ ಮತ್ತು ಪದವಿಪೂರ್ವ ತರಗತಿಗೆ ಸೇರಲು ಆಯಾ ವಿದ್ಯಾರ್ಥಿಗಳ ಕಿರಿಯ ಬಾಲಕ, ಬಾಲಕಿಯರ ಮತ್ತು ಹಿರಿಯರ ವಿಭಾಗದ ಆಯ್ಕೆ ಪ್ರಕ್ರಿಯೆ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಮೂರು ಹಂತದಲ್ಲಿ ನಡೆಯಲಿದೆ.
ಮೊದಲು ತಾ. ೨೫ ರಿಂದ ಆಗಸ್ಟ್ ೧ರ ವರೆಗೆ ಕಿರಿಯ ಮತ್ತು ಹಿರಿಯರ ಆಯ್ಕೆ ಪ್ರಕ್ರಿಯೆ ಕೋವಿಡ್ ನಿಯಮಾನುಸಾರವಾಗಿ ನಡೆಸಲಾಗುತ್ತದೆ ಎಂದು ಶಿಬಿರಾಧಿಕಾರಿ ಡಾ. ವಸಂತ್ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆ ಮತ್ತು ವಿಭಾಗದ ಮಟ್ಟದಲ್ಲಿ ಭಾಗವಹಿಸಿ ನಂತರ ಅಂತಿಮ ಮಟ್ಟಿದ ಆಯ್ಕೆಗೆ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ವಿವಿಧ ಕ್ರೀಡೆಗೆ ಸಂಬAಧಿಸಿದ ೪೪ ಕ್ರೀಡಾ ತರಬೇತಿದಾರರು ಭಾಗವಹಿಸಿದ್ದಾರೆ.
ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ವಾಲಿಬಾಲ್, ಅಥ್ಲೆಟಿಕ್ಸ್, ಬಾಸ್ಕೆಟ್ಬಾಲ್, ಫುಟ್ಬಾಲ್, ಜಿಮ್ನಾಸ್ಟಿಕ್, ಕುಸ್ತಿ ಸೇರಿದಂತೆ ಎಂಟು ಕ್ರೀಡೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ವಸಂತ್ಕುಮಾರ್ ತಿಳಿಸಿದ್ದಾರೆ.