ಸೋಮವಾರಪೇಟೆ, ಜು. ೨೭: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ಸಹಯೋಗದಲ್ಲಿ ಸ್ಥಳೀಯ ಜಾನಕಿ ಸಭಾಂಗಣದಲ್ಲಿ ಸಂಸ್ಥೆಯ ವಲಯ ೧೪ರ ಮಧ್ಯಂತರ ಸಮ್ಮೇಳನ ಸಂಭ್ರಮದಿAದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಸೀ ವಲಯ ೧೪ರ ಅಧ್ಯಕ್ಷ ಭರತ್ ಎನ್. ಆಚಾರ್ಯ ಅವರು, ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಜೇಸೀ ಸಂಸ್ಥೆಯು ಉತ್ತಮ ವೇದಿಕೆಯಾಗಿದೆ ಎಂದರು.

ದೇಶವನ್ನೇ ಸಮಸ್ಯೆಗೆ ಸಿಲುಕಿಸಿದ ಕೊರೊನಾ ವೈರಸ್ ಅಲೆಯ ಸಂದರ್ಭ ಜೇಸೀ ಪದಾಧಿಕಾರಿಗಳು ಸಾಕಷ್ಟು ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆಹಾರ, ವೈದ್ಯಕೀಯ ಕ್ಷೇತ್ರದಲ್ಲಿ ಸಂಸ್ಥೆಯ ಸೇವೆ ಮಹತ್ತರವಾದುದು. ಜೇಸೀ ವಲಯ ೧೪ ಇದೀಗ ೩೦ನೇ ವರ್ಷದ ಸಂಭ್ರಮದಲ್ಲಿದ್ದು, ಎಲ್ಲಾ ಸದಸ್ಯರು ಇನ್ನಷ್ಟು ಸಕ್ರಿಯರಾಗಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ವಲಯ ಉಪಾಧ್ಯಕ್ಷ ಎಂ. ಬಾಬು ವಹಿಸಿ ಮಾತನಾಡಿ, ವಲಯ ವ್ಯಾಪ್ತಿಯಲ್ಲಿ ಸಂಸ್ಥೆಯ ಮೂಲಕ ಕೈಗೊಂಡ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಬಿ.ಎಸ್. ಸುಂದರ್ ಮಾತನಾಡಿ, ಜೇಸೀ ಸಂಸ್ಥೆಯು ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಿದ್ದು, ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುತ್ತಿದೆ. ನನ್ನಿಂದ ಸಾಧ್ಯ ಎಂಬ ಧ್ಯೇಯ ವಾಕ್ಯದಂತೆ ಎಲ್ಲರೂ ಪ್ರಯತ್ನಿಸಿದರೆ ಜೀವನದಲ್ಲೂ ಯಶಸ್ಸು ಲಭಿಸುತ್ತದೆ ಎಂದರು.

ವೇದಿಕೆಯಲ್ಲಿ ನಿಕಟಪೂರ್ವ ರಾಷ್ಟಿçÃಯ ನಿರ್ದೇಶಕ ಟಿ.ಎನ್. ದೇವರಾಜ್, ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಸಂದೀಪ್, ನಿಕಟಪೂರ್ವ ಅಧ್ಯಕ್ಷೆ ಸಮತ, ಕಾರ್ಯದರ್ಶಿ ಗುರುಮೂರ್ತಿ, ನಿಕಟಪೂರ್ವ ವಲಯ ಅಧಿಕಾರಿ ಸಂಪಾಜೆ, ಜು. ೨೭: ಸಂಪಾಜೆ ಲಯನ್ಸ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ತಾ.೨೪ರಂದು ಜ್ಯೂನಿಯರ್ ಕಾಲೇಜು ಸಂಪಾಜೆಯಲ್ಲಿ ನಡೆಯಿತು.

ಜಿಲ್ಲೆ ೩೧೭ರಡಿಯ ೨ನೇ ಉಪರಾಜ್ಯಪಾಲರಾದ ಡಾ. ಮೆಲ್ವಿನ್ ಡಿಸೋಜ ಅವರು ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಿ.ಆರ್.ಓ. ಜಯರಾಮ ದೇರಪ್ಪಜ್ಜಮನೆ, ವಲಯ ಅಧ್ಯಕ್ಷ ವೆಂಕಪ್ಪ ಕೇನಾಜೆ, ನಿರ್ಗಮಿತ ಅಧ್ಯಕ್ಷ ವಾಸುದೇವ ಕಟ್ಟೆಮನೆ, ನಿಯೋಜಿತ ಅಧ್ಯಕ್ಷ ಟೀನಾಚರಣ್, ಕಾರ್ಯದರ್ಶಿ ಕಿಶೋರ್‌ಕುಮಾರ್ ಕೆ, ಕೋಶಾಧಿಕಾರಿ ಧನಲಕ್ಷಿö್ಮ ನವೀನ್ ಉಪಸ್ಥಿತರಿದ್ದರು. ಸುಳ್ಯ, ಗುತ್ತಿಗಾರು, ಕಡಬ, ಪಂಜ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ವಾಸುದೇವ ಸ್ವಾಗತಿಸಿ, ಪ್ರಾರ್ಥನೆಯನ್ನು ಅಕ್ಷರ ಅಪ್ಪಣ್ಣ, ವಂದನಾರ್ಪಣೆಯನ್ನು ಧನಲಕ್ಷಿö್ಮ ನವೀನ್ ಹಾಗೂ ಕಾರ್ಯಕ್ರಮವನ್ನು ಅಮೃತಾ ಅಪ್ಪಣ್ಣ ಅವರು ನಿರೂಪಿಸಿದರು.

ಕೆ.ಜೆ. ಗಿರೀಶ್, ಉದ್ಯಮಿ ಬಿ.ಎಸ್. ಸುಂದರ್, ಪುಷ್ಪಗಿರಿ ಜೇಸೀ ಸಂಸ್ಥೆ ಅಧ್ಯಕ್ಷೆ ಮಾಯಾ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.