ವೀರಾಜಪೇಟೆ, ಜು. ೨೬: ಮಡಿಕೇರಿಯ ಕೋಟೆ, ಅರಮನೆಯ ದುರಸ್ತಿ ಕಾಮಗಾರಿಗೆ ಸಂಬAಧಿಸಿದAತೆ ಆಕ್ಷೇಪಣೆ ಸಲ್ಲಿಸಲು ವಿಭಾಗೀಯ ಪೀಠ ರಿಟ್ ಅರ್ಜಿದಾರರಿಗೆ ಆದೇಶಿಸಿದೆ. ನಿವೃತ್ತ ಆರ್.ಟಿ.ಐ. ಕಮೀಷನರ್ ಜೆ.ಎಸ್. ವಿರುಪಾಕ್ಷಯ್ಯ ಅವರು ಶಿಥಿಲಗೊಂಡಿರುವ ಮಡಿಕೇರಿಯ ಕೋಟೆ ಹಾಗೂ ಹಾಗೂ ಅರಮನೆಯನ್ನು ದುರಸ್ತಿಪಡಿಸಿ ರಕ್ಷಿಸುವಂತೆ ಸಲ್ಲಿಸಿದ ರಿಟ್ ಅರ್ಜಿಯನ್ನು ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

(ಮೊದಲ ಪುಟದಿಂದ) ರಿಟ್ ಅರ್ಜಿದಾರರ ಪರ ವಾದಿಸಿದ ಎನ್.ರವೀಂದ್ರನಾಥ್ ಕಾಮತ್ ಅವರು ಈಗ ಮಡಿಕೇರಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇದರಿಂದ ಅರಮನೆ ಕಟ್ಟಡದೊಳಗೆ ಮಳೆ ನೀರು ಬರುತ್ತಿದೆ. ಕಿಟಕಿ ಬಾಗಿಲುಗಳು ದುರಸ್ತಿಗೊಳ ಪಟ್ಟಿದೆ. ಅರಮನೆಯ ಗಡಿಯಾರದ ಗೋಪುರವು ದುಸ್ಥಿತಿಯಲ್ಲಿದ್ದು, ಕೊಡಗಿನ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ನಿರ್ಲಕ್ಷö್ಯ ವಹಿಸಿ ಕಾಮಗಾರಿಯನ್ನು ಮುಂದೂಡು ತ್ತಿರುವುದರಿಂದ ಅರಮನೆ ಕಟ್ಟಡ ಅಪಾಯದ ಅಂಚಿನಲ್ಲಿದೆ. ರಾಜ್ಯ ಸರಕಾರ ಪುರಾತತ್ವ ಇಲಾಖೆಗೆ ನೀಡಿದ (ಮೊದಲ ಪುಟದಿಂದ) ರಿಟ್ ಅರ್ಜಿದಾರರ ಪರ ವಾದಿಸಿದ ಎನ್.ರವೀಂದ್ರನಾಥ್ ಕಾಮತ್ ಅವರು ಈಗ ಮಡಿಕೇರಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇದರಿಂದ ಅರಮನೆ ಕಟ್ಟಡದೊಳಗೆ ಮಳೆ ನೀರು ಬರುತ್ತಿದೆ. ಕಿಟಕಿ ಬಾಗಿಲುಗಳು ದುರಸ್ತಿಗೊಳ ಪಟ್ಟಿದೆ. ಅರಮನೆಯ ಗಡಿಯಾರದ ಗೋಪುರವು ದುಸ್ಥಿತಿಯಲ್ಲಿದ್ದು, ಕೊಡಗಿನ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ನಿರ್ಲಕ್ಷö್ಯ ವಹಿಸಿ ಕಾಮಗಾರಿಯನ್ನು ಮುಂದೂಡು ತ್ತಿರುವುದರಿಂದ ಅರಮನೆ ಕಟ್ಟಡ ಅಪಾಯದ ಅಂಚಿನಲ್ಲಿದೆ. ರಾಜ್ಯ ಸರಕಾರ ಪುರಾತತ್ವ ಇಲಾಖೆಗೆ ನೀಡಿದ ದೇಶಪಾಂಡೆ ಅವರು ಈಚೆಗೆ ಅಧಿಕಾರಿಗಳ ತಂಡ ಕೋಟೆ ಹಾಗೂ ಅರಮನೆಯನ್ನು ವೀಕ್ಷಿಸಿದ ವಿವರವಾದ ವರದಿಯನ್ನು ಪೀಠದ ಮುಂದೆ ಸಲ್ಲಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರವೀಂದ್ರನಾಥ್ ಕಾಮತ್ ಅವರು ಈಗಿನಂತೆ ಕಳಪೆ ಕಾಮಗಾರಿ ಮುಂದುವರೆದರೆ ಅರಮನೆ ಕುಸಿದು ಬೀಳುವ ಸಾಧ್ಯತೆ ಇದೆ, ಇದರಿಂದ ಅರಮನೆ, ಕೋಟೆ ಕಟ್ಟಡಗಳ ರಕ್ಷಣೆ ಸಾಧ್ಯವಿಲ್ಲ ಎಂದು ದೂರಿದರು.

ನ್ಯಾಯಮೂರ್ತಿಗಳು ಪುರಾತತ್ವ ಇಲಾಖೆ ಈ ತನಕ ಮಾಡಿರುವ ದುರಸ್ತಿ ಕಾಮಗಾರಿಯ ಕುರಿತು ಪೂರ್ಣವಾಗಿ ಆಕ್ಷೇಪಗಳನ್ನು ರಿಟ್ ಅರ್ಜಿದಾರರ ಪರವಾಗಿ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ರವೀಂದ್ರನಾಥ್ ಕಾಮತ್‌ಗೆ ಸೂಚಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್ ೧೧ಕ್ಕೆ ಮುಂದೂಡಿದರು. ವಿಭಾಗೀಯ ಪೀಠದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ಹಾಗೂ ನ್ಯಾಯಮೂರ್ತಿ ಸಂಜಯ್ ಗೌಡ ಅವರು ಉಪಸ್ಥಿತರಿದ್ದರು.