ಮಡಿಕೇರಿ, ಜು. ೨೬: ರಾಜ್ಯ ಸರಕಾರದ ವತಿಯಿಂದ ಇಂದು ಪದವಿ ಕಾಲೇಜುಗಳ ಪುನರಾರಂಭಕ್ಕೆ ಅನುಮತಿ ದೊರೆತಿದ್ದು, ಜಿಲ್ಲೆಯ ಹಲವು ಕಾಲೇಜುಗಳು ಕೋವಿಡ್ ಮಾರ್ಗಸೂಚಿ ಪಾಲಿಸಿ ಕಾರ್ಯಾರಂಭಗೊAಡವು. ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಕಾರ್ಯಕ್ಕೆ ಸರಕಾರ ಮುಂದಾಗಿದ್ದು, ಕಳೆದ ಒಂದು ತಿಂಗಳಿನಿAದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಯಿತು. ಕೊರೊನಾ ಹಿನ್ನೆಲೆ ಪ್ರಥಮ, ತೃತೀಯ ಹಾಗೂ ಐದನೆಯ ಸಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರಲಿಲ್ಲ. ಪರೀಕ್ಷೆ ಬರೆಯದೆಯೇ ಮುಂದಿನ ಸೆಮಿಸ್ಟರ್‌ನ ತರಗತಿಗಳು ಆನ್‌ಲೈನ್ ಮೂಲಕ ನಡೆಯುತ್ತಿದ್ದವು. ಇದೀಗ ಈ ಮೂರು ಸೆಮಿಸ್ಟರ್‌ಗಳ ಪರೀಕ್ಷೆ ಆಗಸ್ಟ್ ೨ ರಿಂದ ೧೭ರ ವರೆಗೆ ನಡೆಯಲಿವೆ. ಆಗಸ್ಟ್ ೨ ರಿಂದ ಪರೀಕ್ಷೆ ನಡೆಯಲಿರುವ ಕಾರಣ, ಇಂದಿನಿAದ ಪ್ರಾರಂಭವಾದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಸಂಬAಧ ‘ರಿವಿಷನ್’ ಮಾಡಲಾಯಿತು.
ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ೧೫೦ ವಿದ್ಯಾರ್ಥಿಗಳ ಪೈಕಿ ಇಂದು ೫೦ ಮಂದಿ ಕಾಲೇಜಿಗೆ ಆಗಮಿಸಿದ್ದರು. ಪ್ರಥಮ ದರ್ಜೆ ಕಾಲೇಜಿನಲ್ಲಿಯು ಕ್ಷೀಣ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದು, ಪರೀಕ್ಷೆಗೆ ‘ರಿವಿಷನ್’ ಮಾಡಿಸಿದ್ದಾಗಿ ಉಪನ್ಯಾಸಕ ಕೂಡಕಂಡಿ ದಯಾನಂದ ಅವರು ತಿಳಿಸಿದರು. ಇದೀಗ ಎಲ್ಲಾ ಕಾಲೇಜುಗಳಲ್ಲಿ ಪರೀಕ್ಷೆ ಸಂಬAಧ ರಿವಿಷನ್ ನಡೆಯುತ್ತಿದ್ದು, ಆಗಸ್ಟ್ ಹದಿನೆಂಟರಿAದ ಎರಡನೆಯ, ನಾಲ್ಕನೆಯ ಹಾಗೂ ಆರನೆಯ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗಲಿವೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಮಡಿಕೇರಿಯ ಎಫ್.ಎಮ್.ಸಿ ಕಾಲೇಜಿನಲ್ಲಿ ತರಗತಿಗಳು ಆಗಸ್ಟ್ ೧೮ ರಂದು ಪ್ರಾರಂಭವಾಗಲಿವೆ.
(ಮೊದಲ ಪುಟದಿಂದ)
ಸAಭ್ರಮದಿAದ ಆಗಮಿಸಿದ ವಿದ್ಯಾರ್ಥಿಗಳು
ಸೋಮವಾರಪೇಟೆ: ಕೊರೊನಾ ಲಾಕ್‌ಡೌನ್ ನಂತರ ಆರಂಭಗೊAಡ ಪದವಿ ಕಾಲೇಜಿಗೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಸಂಭ್ರಮದಿAದ ಆಗಮಿಸಿದರು.
ಇಂದಿನಿAದ ಪದವಿ ಕಾಲೇಜುಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು, ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಚಾಣಕ್ಯ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸಿದರು. ಸಂತ ಜೋಸೆಫರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಇದ್ದು ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಸೂಚಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಆಗಮಿಸಲಿಲ್ಲ.
ಲಾಕ್‌ಡೌನ್ ನಂತರ ಇಂದು ಆರಂಭಗೊAಡ ತರಗತಿಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರಿಂದ ಬಹುತೇಕ ತರಗತಿಗಳು ನಡೆಯಲಿಲ್ಲ. ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟರು.
ಕಳೆದ ೩ ತಿಂಗಳ ಹಿಂದೆ ಪರೀಕ್ಷೆ ನಡೆಯುತ್ತಿದ್ದ ಸಂದರ್ಭವೇ ಬಸ್ ಚಾಲಕರ ಮುಷ್ಕರ ಹಾಗೂ ನಂತರದ ಕೊರೊನಾ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಪರೀಕ್ಷೆಗಳನ್ನು ಮುಂದಿನ ತಿಂಗಳ ೨ನೇ ತಾರೀಕಿನಿಂದ ಪ್ರಾರಂಭಿಸಲು ಇಲಾಖೆ ಸಿದ್ಧತೆ ಕೈಗೊಂಡಿದ್ದು, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಗೊಳಿಸಲು ಉಪನ್ಯಾಸಕ ವರ್ಗ ಮುಂದಾಗಿದೆ.
ಕೊರೊನಾ ಹಿನ್ನೆಲೆ ಪದವಿ ತರಗತಿಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದು, ಇದೀಗ ಮತ್ತೆ ಪರೀಕ್ಷೆಗೆ ತಯಾರಿ ನಡೆದಿದೆ. ಇಂದಿನಿAದ ಎಂದಿನAತೆ ತರಗತಿಗಳು ನಡೆಯಲಿದ್ದು, ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ ಎಂದು ಕಾಲೇಜು ಆಡಳಿತ ಮಂಡಳಿಗಳು ಅಭಿಪ್ರಾಯಿಸಿವೆ.
ಚಾಣಕ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಭೆ ನಡೆಸಲಾಗಿದ್ದು, ತರಗತಿಗಳಿಗೆ ಬರಲು ಅಸಾಧ್ಯವಾಗುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಪಾಠಗಳು ನಡೆಯಲಿವೆ. ಮುಂದಿನ ವಾರ ನಡೆಯಲಿರುವ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸಿಹಿ ಹಂಚಿ ವಿದ್ಯಾರ್ಥಿಗಳಿಗೆ ಸ್ವಾಗತ
ಚೆಟ್ಟಳ್ಳಿ: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಲ್ಲಾ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗ ಪಾಲಿಸಿ ಕಾಲೇಜನ್ನು ಪುನರಾರಂಭಗೊಳಿಸಲಾಯಿತು. ಹಲವು ತಿಂಗಳ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ಉತ್ಸಾಹದಿಂದ ಬರುತ್ತಿರುವ ದೃಶ್ಯ ಕಂಡು ಬಂತು.
ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಕಾಲೇಜಿಗೆ ಸ್ವಾಗತ ಕೋರಿದರು.
ಈ ಸಂದರ್ಭ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ರುದ್ರ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ನಾಗರಾಜ್ ಮೂರ್ತಿ, ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ದಿವ್ಯ ಹಾಗೂ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶೃತಿ ಪಾರ್ವತಿ ಇದ್ದರು.