ಕರಿಕೆ, ಜು. ೨೭: ಕೊರೊನಾ ಲಾಕ್ಡೌನ್ ಹಿನೆÀ್ನಲೆಯಲ್ಲಿ ಸ್ಥಗಿತಗೊಂಡಿದ್ದ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಸಾರಿಗೆ ಇಲಾಖೆ ಇನ್ನೂ ಪ್ರಾರಂಭಿಸದೆ ಇರುವ ಹಿನ್ನೆಲೆ ಕರಿಕೆ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮದ ಜನರು ತಮ್ಮ ದೈನಂದಿನ ಕಚೆೆÃರಿ ಕೆಲಸಕ್ಕೆ, ಕೂಲಿ ಕೆಲಸಕ್ಕೆ ಭಾಗಮಂಡಲಕ್ಕೆ - ಮಡಿಕೇರಿಗೆ ತೆರಳಲು ಖಾಸಗಿ ಹಾಗೂ ಸಾರಿಗೆ ಬಸ್ ಅವಲಂಬಿಸಿದ್ದು, ಖಾಸಗಿಯವರು ಈ ಮಾರ್ಗದ ಬಸ್ ಸ್ಥಗಿತಗೊಳಿಸಿದ್ದು, ಈ ಬಾರಿಯ ಲಾಕ್ಡೌನ್ ತೆರವಾಗಿ ಹಲವು ದಿನ ಕಳೆದರೂ ಸಾರಿಗೆ ಇಲಾಖೆ ಬಸ್ ಆರಂಭಿಸಲು ಗಮನ ಹರಿಸದಿರುವುದು ಗ್ರಾಮಸ್ಥರನ್ನು ಸಂಕಷ್ಟಕ್ಕೀಡುಮಾಡಿದೆ. ಕೂಡಲೇ ಸಾರಿಗೆ ಇಲಾಖೆ ಬಸ್ ಪ್ರಾರಂಭಿಸಲು ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಳೆ ಹಾಗೂ ಪ್ರಯಾಣಿಕರ ಕೊರತೆಯಿಂದ ಬಸ್ ಆರಂಭಿಸಿಲ್ಲ, ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಮಡಿಕೇರಿ ಸಾರಿಗೆ ಘಟಕ ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ. -ಸುಧೀರ್ ಹೊದ್ದೆಟ್ಟಿ