ಮಡಿಕೇರಿ, ಜು. ೨೫: ಕೊಡವ ಜನಾಂಗವನ್ನು ರಾಜಕೀಯವಾಗಿ ನಿಷ್ಕಿçಯಗೊಳಿಸುವ ಷಡ್ಯಂತ್ರ ಒಳಗೊಳಗೆ ನಡೆಯುತ್ತಿದ್ದು, ಇತ್ತೀಚೆಗೆ ಪ್ರಕಟಗೊಂಡ ಕೊಡಗು ಜಿ.ಪಂ. ಅಭ್ಯರ್ಥಿಗಳ ಮೀಸಲಾತಿ ಪಟ್ಟಿಯಲ್ಲಿ ಈ ಆಘಾತಕಾರಿ ವಿಷಯ ಹೊರ ಬಿದ್ದಿದೆ. ಚುನಾವಣೆಗೆ ಇನ್ನೂ ಕಾಲಾ ವಕಾಶವಿದ್ದು ಕೂಡಲೇ ಚುನಾವಣಾ ಆಯೋಗ ಈ ಮೀಸಲಾತಿ ಪಟ್ಟಿಯನ್ನು ಹಿಂತೆಗೆದುಕೊAಡು ಮರುಪರಿಶೀಲನೆ ಮಾಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗ ಸಂಸ್ಥೆಗಳು ಒತ್ತಾಯಿಸಿವೆ.

ಈ ಕುರಿತು ವೀರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣ ದಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮೀಸಲಾತಿಯ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ ಮೀಸಲಾತಿಯ ಬಗ್ಗೆ ದ್ವನಿ ಎತ್ತಿದರೆ ಇದಕ್ಕೆ ಧ್ವನಿಗೂಡಿಸಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಈಗಾಗಲೇ ಯೂತ್ ವಿಂಗ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ರಾಜಕೀಯವಾಗಿ ಕೊಡವರನ್ನು ನಿಷ್ಕಿçಯಗೊಳಿಸುವ ಷಡ್ಯಂತ್ರ ಒಳಗೊಳಗೆ ನಡೆಯುತ್ತಿದ್ದು, ನಾವು ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ವೀರಾಜಪೇಟೆ ತಾಲೂಕಿನಲ್ಲಿ ಕೊಡವರು ಹಾಗೂ ಕೊಡವ ಭಾಷಿಕ ಜನಾಂಗದ ಪ್ರಾಬಲ್ಯ ಅಧಿಕವಾಗಿ ದ್ದರೂ ಇಲ್ಲಿಯತನಕ ಕೊಡವ ಅಥವಾ ಕೊಡವ ಭಾಷಿಕ ಜನಾಂಗದ ಶಾಸಕರಿಗೆ ಅವಕಾಶ ನೀಡಲಾಗಿಲ್ಲ. ಇದೀಗ ಜಿ.ಪಂ.ಯಲ್ಲೂ ಕೊಡವರ ಪ್ರಾಬಲ್ಯ ಕುಗ್ಗಿಸುವ ಕೆಲಸವಾಗುತ್ತಿದೆ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ಈ ಬಾರಿ ಜಿ.ಪಂ. ಮೀಸಲಾತಿಯಲ್ಲಿ ಕೊಡವರಿಗೆ ಅನ್ಯಾಯವಾಗಿರುವುದು ವಾಸ್ತವ. ಕೊಡವರಿಗೆ ಸಾಮಾನ್ಯ ಹೊರತುಪಡಿಸಿದರೆ ಬೇರೆ ಮೀಸಲಾತಿ ಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ, ಆದರೆ ಇತರರಿಗೆ ಅವರ ಮೀಸಲಾತಿಯನ್ನು ಹೊರತುಪಡಿಸಿ ಸಾಮಾನ್ಯದಲ್ಲಿಯೂ ಸ್ಪರ್ಧಿಸಬಹುದಾಗಿದೆ. ಕೂಡಲೇ ಮೀಸಲಾತಿಯನ್ನು ಪುನರ್ ಪರಿಶೀಲನೆ ಮಾಡಬೇಕು ಎಂದರು. ಸಭೆಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಕೊಡಗು ಗುಡ್ಡಗಾಡು ಪ್ರದೇಶವಾಗಿರುವ ಕಾರಣ ನಮಗೆ ಎರಡು ಶಾಸಕರು ಸಾಕಾಗುವುದಿಲ್ಲ, ಕೊಡಗನ್ನು ಗುಡ್ಡಗಾಡು ಪ್ರದೇಶ ಎಂದು ಪರಿಗಣಿಸಿ ಐದು ತಾಲೂಕಿಗೂ ತಲಾ ಒಬ್ಬೊಬ್ಬ ಶಾಸಕರನ್ನು ನೀಡಬೇಕಿದೆ. ಇದರಿಂದ ಸ್ಥಳೀಯರಿಗೆ ಅವಕಾಶ ದೊರೆತಂತಾ ಗುತ್ತದೆ ಹಾಗೂ ಆ ಕ್ಷೇತ್ರದ ಬಹುತೇಕ ಸಮಸ್ಯೆಗಳು ಪರಿಹಾರ ವಾಗಲಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮೀಸಲಾತಿಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯಿತು.

ಮೀಸಲಾತಿಯನ್ನು ಸರಿಪಡಿಸ ದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರದಂತಹ ನಿರ್ಣಯಗಳನ್ನು ಕೂಡ ಕೈಗೊಳ್ಳ ಬೇಕಾಗಿರುವುದು ಅನಿವಾರ್ಯ ಎಂಬ ಮಾತು ಸಭೆಯಲ್ಲಿ ಕೇಳಿಬಂತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೂಡ ವಿವಿಧ ರಾಜಕೀಯ ಪಕ್ಷಗಳು ಕೊಡವರ ಹಾಗೂ ಕೊಡವ ಭಾಷಿಕರ ಜನಸಂಖ್ಯೆ ಅಧಿಕವಾಗಿರುವ ಕ್ಷೇತ್ರಕ್ಕೆ ಕೊಡವ ಅಥವಾ ಕೊಡವ ಭಾಷಿಕ ಜನಾಂಗದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು, ವಿಶೇಷವಾಗಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹವೂ ಸಭೆಯಲ್ಲಿ ಕೇಳಿಬಂತು. ಭಾಷಾ ಅಲ್ಪ ಸಂಖ್ಯಾತರಾಗಿರುವ ಕೊಡವರಿಗೆ ಕೊಡಗು ಹೊರತುಪಡಿಸಿ ಬೇರೆ ಎಲ್ಲಿಯೂ ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡು ಕೊಡವರು ಹಾಗೂ ಕೊಡವ ಭಾಷಿಕ ಜನಾಂಗ ಅಧಿಕವಾಗಿರುವ ಭಾಗಕ್ಕೆ ಕೊಡವರನ್ನು ಅಥವಾ ಕೊಡವ ಭಾಷಿಕ ಜನಾಂಗದ ಅಭ್ಯರ್ಥಿಯನ್ನೆ ನೀಡಬೇಕು ಎಂದು ಸಭೆ ಒತ್ತಾಯಿಸಿ ನಿರ್ಣಯ ಕೈಗೊಂಡಿತು. ಈ ಕೂಡಲೇ ಜಿ.ಪಂ. ಮೀಸಲಾತಿ ವಿಷಯದಲ್ಲಿ ಪುನರ್ ಪರಿಶೀಲನೆ ಮಾಡಿ ಕುಟ್ಟ, ಟಿ.ಶೆಟ್ಟಿಗೇರಿ, ಮಾದಾಪುರ ಮಕ್ಕಂದೂರು, ಆರ್ಜಿ ಈ ಭಾಗಗಳಲ್ಲಿ ಕೊಡವರು ಅಥವಾ ಕೊಡವ ಭಾಷಿಕ ಜನಾಂಗಕ್ಕೆ ಸ್ಪರ್ಧಿಸಲು ಅವಕಾಶವಾಗುವಂತೆ ಪುನರ್ ಪರಿಶೀಲನೆ ಮಾಡಬೇಕಿದೆ ಎಂದು ಸಭೆಯಲ್ಲಿ ಒತ್ತಾಯಿಸಿತು. ಕೊಡಗು ಗುಡ್ಡಗಾಡು ಪ್ರದೇಶವಾಗಿ ರುವ ಕಾರಣ ಕೊಡಗಿಗೆ ಪ್ರತ್ಯೇಕವಾದ ಸಂಸದ ಸ್ಥಾನವನ್ನು ನೀಡಬೇಕು ಎಂದು ಸಭೆ ಒತ್ತಾಯಿಸಿ ನಿರ್ಣಯ ಕೈಗೊಂಡಿತು. ಈ ಸಂದರ್ಭ ಆಡಳಿತ ಮಂಡಳಿಯ ಪ್ರಮುಖರಾದ ಮಂಡೇಪAಡ ಸುಗುಣ ಮುತ್ತಣ್ಣ, ನಂದೇಟೀರ ರಾಜ ಮಾದಪ್ಪ, ಐನಂಡ ಪಿ. ಗಣಪತಿ, ಕಾಳಿಮಾಡ ಮೋಟಯ್ಯ, ಚೇಮಿರ ಸಿ. ಅರ್ಜುನ್, ಮೂವೇರ ರೇಖಾ ಪ್ರಕಾಶ್, ಚೇಂದAಡ ವಸಂತ್, ಕೋಲತಂಡ ಸುಬ್ರಮಣಿ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪAಡ ಬಿ. ಮೊಣ್ಣಪ್ಪ, ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಸದಸ್ಯರಾದ ಮುರುವಂಡ ಸುಮಾ ಕುಟ್ಟಪ್ಪ ಹಾಗೂ ಕಾಣತಂಡ ವಿವೇಕ್ ಅಯ್ಯಪ್ಪ ಮೊದಲಾದವರು ಉಪಸ್ಥಿತರಿದ್ದರು.