ಮಡಿಕೇರಿ, ಜು. ೨೪: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಜೂನ್ ತಿಂಗಳಿನಿAದ ಸಂಭವಿಸಿರುವ ಮಳೆ-ಗಾಳಿಯ ತೀವ್ರತೆಯ ಪ್ರಾಕೃತಿಕ ವಿಕೋಪದಿಂದಾಗಿ ಈ ತನಕ ರೂ. ೫೨.೩೯ ಕೋಟಿಯಷ್ಟು ನಷ್ಟ ಉಂಟಾಗಿದೆ. ಗಾಳಿ - ಮಳೆಯಿಂದ ವಿವಿಧ ಮೂಲಭೂತ ಸೌಕರ್ಯಗಳು ಸೇರಿದಂತೆ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಪರಿಣಾಮವಾಗಿ ರೂ. ೫೨.೩೯ ಕೋಟಿಯಷ್ಟು ಹಾನಿ ಸಂಭವಿಸಿರುವ ಕುರಿತು ಜಿಲ್ಲಾಡಳಿತ ವರದಿ ಸಂಗ್ರಹಿಸಿದೆ.

ಲೋಕೋಪಯೋಗಿ ಇಲಾಖೆಗೆ ಸಂಬAಧಿಸಿದAತೆ ರೂ. ೧೭.೬೧ ಕೋಟಿ, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗಕ್ಕೆ ಸೇರಿದಂತೆ ರೂ. ೨.೭೯ ಕೋಟಿ, ವಿದ್ಯುತ್ ಇಲಾಖೆಯ ಹಾನಿಗೆ ಸಂಬAಧಿಸಿದAತೆ ರೂ. ೨.೨೯ ಕೋಟಿಗಳಷ್ಟು ನಷ್ಟ ಉಂಟಾಗಿದೆ.

ರಾಷ್ಟಿçÃಯ ಹೆದ್ಚಾರಿ ಹಾನಿಯಿಂದ ರೂ. ೧.೭೫ ಕೋಟಿ, ಸಣ್ಣ ನೀರಾವರಿ ಅಂತರ್‌ಜಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ರೂ. ೨೧.೪೦ ಕೋಟಿ, ಪಿ.ಎಂ.ಜಿ.ಎಸ್.ವೈ.ಯಲ್ಲಿ ರೂ. ೫ ಲಕ್ಷ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬAಧಿಸಿದAತೆ ರೂ. ೬.೫೦ ಕೋಟಿ ಸೇರಿದಂತೆ ಈ ತನಕದ ಗಾಳಿ - ಮಳೆಗೆ ಒಟ್ಟು ರೂ. ೫೨.೩೯ ಕೋಟಿಗಳಷ್ಟು ನಷ್ಟ ಜಿಲ್ಲೆಯಲ್ಲಿ ಉಂಟಾಗಿದೆ.

ವಿವರಗಳು :

ಲೋಕೋಪಯೋಗಿ ಇಲಾಖೆಗೆ ಸಂಬAಧಿಸಿದAತೆ ೧೬.೫೫ ಕಿ.ಮೀ.ನಷ್ಟು ರಾಜ್ಯ ಹೆದ್ದಾರಿ, ೯.೮೯ ಕಿ.ಮೀ. ಹಾಗೂ ಜಿಲ್ಲಾ ಮುಖ್ಯ ರಸ್ತೆ ಹಾನಿಯಿಂದ ರೂ. ೧೫.೭೧ ಕೋಟಿ, ಸೇತುವೆ ಮೋರಿ (೪) ಹಾನಿಯಿಂದ ರೂ. ೧.೭೪ ಕೋಟಿ ಹಾಗೂ ಕಟ್ಟಡ ಹಾನಿಯಿಂದ ರೂ. ೧೫.೫೦ ಲಕ್ಷದಷ್ಟು ನಷ್ಟ ಸಂಭವಿಸಿದೆ.

ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದಲ್ಲಿ ೨೧೫ ಕಿ.ಮೀ. ರಸ್ತೆ, ೪ ಸೇತುವೆ, ೨ ಮೋರಿ, ೯ ತಡೆಗೋಡೆ ಹಾನಿಯಿಂದ ರೂ. ೨.೭೯ ಕೋಟಿ ನಷ್ಟದ ಅಂದಾಜು ಮಾಡಲಾಗಿದೆ.

ವಿದ್ಯುತ್ ಇಲಾಖೆ

ವಿದ್ಯುತ್ ಇಲಾಖೆಯಲ್ಲಿ ೧೩೫೮ ಕಂಬಗಳು, ೮೫ ಟ್ರಾನ್ಸ್ ಫಾರ್ಮರ್‌ಗಳು, ೨೦.೨೬ ಕಿ.ಮೀ.ನಷ್ಟು ವಿದ್ಯುತ್ ವಾಹಕಗಳ ಹಾನಿಯಿಂದ ರೂ. ೨.೨೯ ಕೋಟಿ ನಷ್ಟವಾಗಿದೆ.

ಎರಡು ಕಿ.ಮೀ.ನಷ್ಟು ರಾಷ್ಟಿçÃಯ ಹೆದ್ದಾರಿ ಹಾನಿಯಿಂದ ರೂ. ೧.೭೫ ಕೋಟಿ, ಸಣ್ಣ ನೀರಾವರಿ ಮತ್ತು ಅಂತರ್‌ಜಲ ಅಭಿವೃದ್ಧಿ ವಿಭಾಗದಲ್ಲಿ ಒಟ್ಟು ೫೩, ನಾಲೆ, ಏರಿ, ಕೆರೆ ಹಾನಿಯಿಂದ ರೂ. ೨೧.೪೦ ಕೋಟಿ, ಪಿ.ಎಂ.ಜಿ.ಎಸ್.ವೈ ರಸ್ತೆ ಹಾನಿ (೦-೧೦ ಕಿ.ಮೀ.) ರೂ. ೫ ಲಕ್ಷ ಹಾನಿಯಾಗಿದೆ.

ನಗರಾಭಿವೃದ್ಧಿ ಇಲಾಖೆ

ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಮಡಿಕೇರಿ ನಗರಸಭೆ, ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಒಟ್ಟು ರೂ. ೬.೫೦ ಕೋಟಿಯಷ್ಟು ನಷ್ಟ ಉಂಟಾಗಿದೆ.

ಒAದು ಮಾನವ ಪ್ರಾಣ ಹಾನಿ

ಮಡಿಕೇರಿ ತಾಲೂಕಿನಲ್ಲಿ ಪ್ರವಾಹದಿಂದ ಒಬ್ಬರು ಬಲಿಯಾಗಿದ್ದು, ಇವರ ಕುಟುಂಬದವರಿಗೆ ರೂ. ೭ ಲಕ್ಷ ನೀಡಲಾಗಿದೆ.

ಒಟ್ಟು ೫ ಜಾನುವಾರುಗಳು ಸಾವಿಗೀಡಾಗಿವೆ. ೨ ಮನೆಗಳು ಪೂರ್ಣ ಜಖಂ ೧೧ ಮನೆಗಳಿಗೆ ಭಾಗಶಃ ಹಾನಿ ಹಾಗೂ ೩೪ ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದ್ದು, ಇದರಿಂದ ರೂ. ೧೩.೫೦ ಲಕ್ಷ ನಷ್ಟವಾಗಿದೆ.