ವೀರಾಜಪೇಟೆ, ಜು. ೨೪: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಐದನೇ ಬ್ಲಾಕ್‌ನÀ ಮೊಗರಗಲ್ಲಿಯಲ್ಲಿರುವ ನಿವಾಸಿಗಳಿಗೆ ನೀರು ಹರಿಯುವ ತೋಡಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಯಲ್ಲಿ ಮೈಸೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿ ರೂ. ೪೬ ಲಕ್ಷ ಹಣವನ್ನು ಮಂಜೂರು ಮಾಡಿ ಕಾಮಗಾರಿಗಳಿಗೆ ಚಾಲನೆ ನೀಡಲು ಸೂಚನೆ ನೀಡಿರುವುದಾಗಿ ಬ್ಲಾಕ್‌ನ ಸದಸ್ಯ ಎಸ್.ಎಚ್.ಮತೀನ್ ವೀರಾಜಪೇಟೆ, ಜು. ೨೪: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಐದನೇ ಬ್ಲಾಕ್‌ನÀ ಮೊಗರಗಲ್ಲಿಯಲ್ಲಿರುವ ನಿವಾಸಿಗಳಿಗೆ ನೀರು ಹರಿಯುವ ತೋಡಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಯಲ್ಲಿ ಮೈಸೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿ ರೂ. ೪೬ ಲಕ್ಷ ಹಣವನ್ನು ಮಂಜೂರು ಮಾಡಿ ಕಾಮಗಾರಿಗಳಿಗೆ ಚಾಲನೆ ನೀಡಲು ಸೂಚನೆ ನೀಡಿರುವುದಾಗಿ ಬ್ಲಾಕ್‌ನ ಸದಸ್ಯ ಎಸ್.ಎಚ್.ಮತೀನ್ ಈ ಕೊಳಚೆ ಪ್ರದೇಶದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಮೂಲಕ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ಶಾಸಕ ಬೋಪಯ್ಯ ಅವರು ಈ ಮನವಿಗೆ ಶಿಫಾರಸು ಮಾಡಿದ್ದರಿಂದ ಕೊಳಚೆ ಪ್ರದೇಶದ ಅಭಿವೃದ್ಧಿಗೆ ಮಂಡಳಿ ತೀರ್ಮಾನಿಸಿದೆ,

ಮೈಸೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿ, ಮೊಗರಗಲ್ಲಿಯ ಕೊಳಚೆ ಪ್ರದೇಶದ ನೀರು ಹರಿಯುವ ತೋಡಿನ ಅಭಿವೃದ್ಧಿ ಸೇರಿದಂತೆ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಟ್ಟಣ ಪಂಚಾಯಿತಿ ನಿರ್ದೇಶನದಂತೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಮುಂದಿನ ಸೆಪ್ಟಂಬರ್ ಮೊದಲ ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದು, ನವೆಂಬರ್ ತಿಂಗಳ ಅಂತ್ಯಕ್ಕೆ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗುವುದು. ಇದರಿಂದ ಮೊಗರಗಲ್ಲಿಯ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಮತೀನ್ ತಿಳಿಸಿದ್ದಾರೆ ನೀಡಲಿದ್ದು, ನವೆಂಬರ್ ತಿಂಗಳ ಅಂತ್ಯಕ್ಕೆ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗುವುದು. ಇದರಿಂದ ಮೊಗರಗಲ್ಲಿಯ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಮತೀನ್ ತಿಳಿಸಿದ್ದಾರೆ.