ಮಡಿಕೇರಿ, ಜು. ೨೪: ಐ.ಸಿ.ಎಸ್.ಇ ೧೦ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಗೋಣಿಕೊಪ್ಪ ಕಾಪ್ಸ್ ಶಾಲೆ ಉತ್ತಮ ಫಲಿತಾಂಶ ಪಡೆದಿದೆ. ೯೩ ವಿದ್ಯಾರ್ಥಿಗಳ ಪೈಕಿ ೯೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ಶೇ.೯೮.೫ ಅಂಕಗಳನ್ನು ಪಡೆದ ಇಶಾನ ಪೂಣಚ್ಚ ಕೆ ಶಾಲೆಗೆ ಮೊದಲನೆಯ ಸ್ಥಾನ ಪಡೆದುಕೊಂಡಿದ್ದಾರೆ. ಶೇ.೯೮ ಅಂಕ ಪಡೆದ ಯುವಿಕ ಅಪ್ಪಯ್ಯ ದ್ವಿತೀಯ, ಶೇ.೯೭.೬ ಅಂಕ ಪಡೆದ ಶ್ರೀಹರಿ ಬಿ.ಪಿ, ಹಿರೇನ್ ಎಂ.ಪಿ, ಅನನ್ಯ ಹಿರೇಮಠ್ ಹಾಗೂ ಪ್ರಾರ್ಥನಾ ಹೆಚ್.ಎಂ ಅವರುಗಳು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.