ಮಡಿಕೇರಿ, ಜು. ೨೪: ಮೂಲತಃ ಭಾಗಮಂಡಲ ನಿವಾಸಿ ಪಾಣತ್ತಲೆ ದೇವಯ್ಯ ಅವರ ಪುತ್ರ ಪಾಣತ್ತಲೆ ಪೊನ್ನಪ್ಪ ರಮೇಶ (೫೮) ಕೇರಳದ ಕಣ್ಣನೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಡಿಕೇರಿ ಸಮೀಪದ ಮೇಕೇರಿಯಲ್ಲಿ ಕುಟುಂಬ ದೊಂದಿಗೆ ನೆಲೆಸಿದ್ದ ಅವರು ಮಂಗಳೂರಿನಲ್ಲಿರುವ ಎಟಿಎಂಗೆ ಹಣ ಪೂರೈಸುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕರ್ತವ್ಯ ನಿಮಿತ್ತ ಕಣ್ಣನೂರುವಿಗೆ ತೆರಳಿದ್ದ ವೇಳೆ ರಮೇಶ್ ಇದ್ದ ವಾಹನ ಲಾರಿಯೊಂದಕ್ಕೆ ಡಿಕ್ಕಿಹೊಡೆದು ದುರ್ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಂತ್ಯಸAಸ್ಕಾರ ಮಡಿಕೇರಿಯ ಗೌಡ ರುದ್ರಭೂಮಿಯಲ್ಲಿ ಶನಿವಾರ ನಡೆಯಿತು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.