ಮುಂದೆ ಕಾವೇರಿಯು ಧರ್ಮಾಪುರಿ ಜಿಲ್ಲೆಯ ಗಡಿಗಾಗಿ ಹರಿದು ದಕ್ಷಿಣ-ಪಶ್ಚಿಮಾಭಿಮುಖವಾಗಿ ಸಾಗಿ ಸೇಲಂ ಜಿಲ್ಲೆಯ ಮೆಟ್ಟೂರನ್ನು ತಲಪುತ್ತಾಳೆ. ಆಮೇಲೆ ಕೊಯಂಬತ್ತೂರು ಜಿಲ್ಲೆಯಲ್ಲಿ ಕಾವೇರಿಯು ತಿರುಚೆಂಗೋಡು ಮತ್ತು ಭವಾನಿ ತಾಲೂಕುಗಳ ಸರಹದ್ದಾಗಿ ಹರಿಯುತ್ತಾಳೆ. ಆಗ ಕಾವೇರಿಯನ್ನು ರ‍್ಭಾಂಗ ನದಿಯು ಬಂದು ಕೂಡುತ್ತಾಳೆ. ಮುಂದೆ ಭವಾನಿ ಊರನ್ನು ಕಾವೇರಿ ಸೇರುತ್ತಾಳೆ. ಅಲ್ಲಿ ಅವಳೊಡನೆ ಭವಾನಿ ನದಿಯು ಬಂದು ಸಂಗಮವಾಗುತ್ತಾಳೆ. ಭವಾನಿ ನದಿ ದಂಡೆಯಲ್ಲಿ ಭವಾನಿ ಊರು ಇದೆ. ಅಲ್ಲಿ ಕಾವೇರಿಯ ಎಡದಂಡೆಯಲ್ಲಿ ಕುಮಾರಪಾಳ್ಯಂ ಎಂಬ ಊರೂ ಬಲದಂಡೆಯಲ್ಲಿ ಭವಾನಿ ಊರೂ ನೆಲೆನಿಂತಿರುತ್ತದೆ.

ಭವಾನಿ-ಕಾವೇರಿ ಸಂಗಮ ವಾಗುವಲ್ಲಿ ಅಂತರ್ವಾಹಿನಿಯಾಗಿ ಅಮೃತ ನದಿಯೂ ಕಾವೇರಿಯನ್ನು ಕೂಡಿ ತ್ರಿವೇಣಿ ಸಂಗಮ ಆಗಿರು ತ್ತದೆ. ಭವಾನಿ ಕ್ಷೇತ್ರದಲ್ಲಿ ಶ್ರೀ ಸಂಗಮೇಶ್ವರ ದೇವಾಲಯವಿದೆ.

ಕಾವೇರಿಯು ಮುಂದೆ ಪಶ್ಚಿಮವಾಹಿನಿಯಾಗಿ ಹರಿದು ಸಾಗುತ್ತಾಳೆ. ಹರಿಯುತ್ತಾ ಕರುಂಗಲ್ ಪಾಳ್ಯಂಗಾಗಿ ಈರೋಡು ಪಟ್ಟಣವನ್ನು ತಲಪುತ್ತಾಳೆ. ಈರೋಡಿನಲ್ಲಿ ಪ್ರಸಿದ್ಧವಾದ ಶಿವ ಮತ್ತು ವಿಷ್ಣು ಆಲಯಗಳಿವೆ. ಈರೋಡಿನಿಂದ ಮುಂದೆ ಚಾವಡಿ ಪಾಳ್ಯಂಅನ್ನು ಸೇರುತ್ತಾಳೆ. ಅಲ್ಲಿ ಕಾವೇರಿ ನದಿ ಮಧ್ಯೆ ಬಂಡೆ ಗುಡ್ಡವೊಂದಿದೆ. ಅದರ ಮೇಲೆ ಶ್ರೀ ನಟಾಧೀಶ್ವರ ಸ್ವಾಮಿ ದೇವಾಲಯವಿದೆ. ಚಾವಡಿಪಾಳ್ಯಂನಿAದ ಮುಂದೆ ಹರಿದು ಬಾಸೂರು, ಊಂಜಲೂರುಗಳನ್ನು ದಾಟಿ ಪ್ರಸಿದ್ಧ ಶೈವಕ್ಷೇತ್ರವಾದ ಕೊಡುಮುಡಿಯನ್ನು ಕಾವೇರಿ ತಲಪುತ್ತಾಳೆ. ಈರೋಡಿಗೂ ಕೊಡುಮುಡಿಗೂ ಇರುವ ದೂರ ಸುಮಾರು ನಲವತ್ತು ಕಿಲೋಮೀಟರುಗಳು. ಕೊಡುಮುಡಿ ಕೊಯಂಬತ್ತೂರು ಜಿಲ್ಲೆಗೆ ಸೇರಿದ ಊರಾಗಿದೆ.

ಕೊಡುಮುಡಿಯಿಂದ ಕಾವೇರಿಯು ಪೂರ್ವಾಭಿಮುಖವಾಗಿ ಹರಿದುಹೋಗಿ ಮುಂದೆ ಸುಮಾರು ಮೂವತ್ತೆöÊದು ಕಿಲೋಮೀಟರ್ ದೂರವಿರುವ ಕರೂರು ಪಟ್ಟಣಕ್ಕೆ ಸಮೀಪ ಪ್ರದೇಶವನ್ನು ಹಾದು ಎಂಟು ಕಿಲೋಮೀಟರ್ ದೂರವಿರುವ ನೆರೂರನ್ನು ತಲಪುತ್ತಾಳೆ. ನೆರೂರು ಪವಿತ್ರ ಪ್ರಸಿದ್ಧಿಯ ಶ್ರೀ ಸದಾಶಿವ ಬ್ರಹ್ಮೇಂದ್ರಸ್ಮಾಮಿಗಳವರ ಮಹಾಸಮಾಧಿ ಆಧಿಷ್ಠಾನ ಇರುವ ಪುಣ್ಯಕ್ಷೇತ್ರ. ನೆರೂರಿನಿಂದ ಮುಂದೆ ಸುಮಾರು ಐದು ಕಿಲೋಮೀಟರು ದೂರದಲ್ಲಿ ತಿರುಮಕೂಡಲ್ ಎಂಬ ಊರಿದ್ದು ಅಲ್ಲಿಗೆ ಕಾವೇರಿ ತಲಪಿದಾಗ ಅಲ್ಲಿ ಅಮರಾವತಿ ಎಂಬ ನದಿಯು ಬಂದು ಕಾವೇರಿಯೊಡನೆ ಸಂಗಮವಾಗುತ್ತದೆ. ಅಲ್ಲಿಂದ ಕಾವೇರಿಯು ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಹರಿಯತೊಡಗುತ್ತಾಳೆ. ತಿರುಚಿ ಜಿಲ್ಲೆಯಲ್ಲಿ ಮುಸಿರಿ, ಪೆರುಂಬಲೂರು ಮೊದಲಾದ ಊರುಗಳನ್ನು ದಾಟಿ ಕುಳಿತಳೈ ಎಂಬ ಪ್ರಸಿದ್ಧ ಶಿವಕ್ಷೇತ್ರಕ್ಕೆ ತಲಪುತ್ತಾಳೆ. ಅಲ್ಲಿಂದ ಮುಂದೆ ಹರಿಯುತ್ತಾ ಕಾವೇರಿಯು ತಿರುಪ್ಪರಾÊತುರೈ ಎಂಬ ಊರನ್ನು ಸೇರುತ್ತಾಳೆ. ತಿರುಪ್ಪರಾÊತುರೈಯಲ್ಲಿ ಒಂದು ಭವ್ಯವಾದ ಶಿವಮಂದಿರವಿದೆ. ಇದೊಂದು ಪವಿತ್ರ ಕ್ಷೇತ್ರ. ಇಲ್ಲಿ ಕಾವೇರಿಯ ನದಿ ಪಾತ್ರ ಬಹಳ ವಿಸ್ತಾರವಿದೆ. ಹಾಗಾಗಿ ಇಲ್ಲಿ ಕಾವೇರಿ ಅಖಂಡ ಕಾವೇರಿ ಎಂದು ಪ್ರಖ್ಯಾತಳಾಗಿದ್ದಾಳೆ. ತಿರುಪ್ಪರಾÊತುರೈಗೆ ಎದುರಾಗಿ ಕಾವೇರಿಯ ಆಚೆದಡದಲ್ಲಿ ಮುಕ್ಕುಂ ಎಂಬ ಸ್ಥಳವಿದೆ. ಅಲ್ಲಿ ಕಾವೇರಿ ಎರಡು ಕವಲಾಗಿ ಹರಿಯತೊಡಗುತ್ತಾಳೆ. ಒಂದು ಕವಲಿಗೆ ಕಾವೇರಿ ಎಂದೇ ಹೆಸರು. ಇನ್ನೊಂದು ಕವಲಿಗೆ ಕೊಲ್ಲಡಂ ಎಂದು ಹೆಸರು. ಕಾವೇರಿ-ಕೊಲ್ಲಡಂಗಳು ಹರಿದು ಸಾಗಿದಂತೆ ಮಧ್ಯೆ ಇರುವ ಪ್ರದೇಶವೇ ಸುಪ್ರಸಿದ್ಧವಾದ ಶ್ರೀರಂಗA. ಶ್ರೀರಂಗA ಮುಕ್ಕುಂನಿAದ ಹದಿನೈದು ಕಿಲೋಮೀಟರ್ ದೂರದಲ್ಲಿದೆ. ತಿರುಚಿರಾಪಳ್ಳಿ ಕಾವೇರಿಯ ಬಲದಂಡೆಯಲ್ಲಿರುವ ಒಂದು ಪ್ರಸಿದ್ಧ ಪಟ್ಟಣ. ತಿರುಪ್ಪರಾÊತುರೈಗೂ ತಿರುಚಿರಾಪಳ್ಳಿಗೂ ಇರುವ ದೂರ ಹದಿನಾರು ಕಿಲೋಮೀಟರ್ ಕಾವೇರಿಯು ತಿರುಚಿರಾಪಳ್ಳಿ-ಶ್ರೀರಂಗAನ್ನು ಬೇರ್ಪಡಿಸುವಂತೆ ಹರಿದು ಸಾಗಿದ್ದು ಆ ಮಧ್ಯೆ ಕಾವೇರಿಗೆ ಬೃಹತ್ತಾದ ಸೇತುವೆಗಳನ್ನು ಅಡ್ಡಲಾಗಿ ಕಟ್ಟಿದ್ದಾರೆ. ಶ್ರೀರಂಗAಗೂ ತಿರುಚಿಗೂ ಇರುವ ಅಂತರ ಐದು ಕಿಲೋಮೀಟರ್.

ಶ್ರೀರಂಗA ಸುಪ್ರಸಿದ್ಧವಾದ ಶ್ರೀವೈಷ್ಣವ ಕ್ಷೇತ್ರ. ಇಲ್ಲಿ ಶ್ರೀರಂಗನಾಥ ಸ್ವಾಮಿಯ ದೇವಾಲಯವಿದೆ. ಇದು ಕಾವೇರಿ ತೀರದಲ್ಲಿರುವ ರಂಗನಾಥ ಮಂದಿರಗಳಲ್ಲಿ ಕೊನೆಯದು ಹಾಗೂ ಮಹತ್ಪçಸಿದ್ಧಿಯನ್ನು ಪಡೆದಿರುವ ಪುಣ್ಯ ಕ್ಷೇತ್ರ. ಇದು ಅಂತ್ಯರAಗವೆAದು ಪ್ರಸಿದ್ಧವಾಗಿದೆ. ಶ್ರೀರಂಗAಗೂ ತಿರುಚಿಗೂ ಮಧ್ಯೆ ಕಾವೇರಿ ಹರಿದಂತೆ ಅವಳ ಎಡದಂಡೆಯಲ್ಲಿ ತಿರುವಾಣೆಕ್ಕಾವಲ್ ಎಂಬ ಪ್ರಸಿದ್ಧ ಶಿವಶಕ್ತಿ ಕ್ಷೇತ್ರವಿದೆ. ತಿರುಚಿರಾಪಳ್ಳಿ ಅರ್ಥಾತ್ ತಿರುಚಿಯಲ್ಲಿ ಹೆಸರುವಾಸಿಯಾದ ರಾಕ್‌ಫೋರ್ಟ್ ಟೆಂಪಲ್, ತಾಯು ಮಾನವರ ಮಂದಿರಗಳಿವೆ.

ತಿರುಚಿ-ಶ್ರೀರAಗA ಪಟ್ಟಣಗಳಿಂದ ಮುಂದೆ ಹರಿಯುತ್ತಾ ಕಾವೇರಿಯು ಹದಿನೈದು ಕಿಲೋಮೀಟರುಗಳಷ್ಟು ದೂರ ಸಾಗುತ್ತಾಳೆ. ಶ್ರೀರಂಗAನ ಎಡಭಾಗದಲ್ಲಿ ಹರಿದು ಸಾಗುವ ಕೊಲ್ಲಡಂ ಕವಲು ಕೂಡ ಅಷ್ಟೇ ದೂರ ಸಾಗಿ ಕೊನೆಗೆ ಕಾವೇರಿಯನ್ನು ಕೂಡುತ್ತದೆ. ಅಲ್ಲಿ ಕಾವೇರಿಗೆ ಆಡ್ಡಲಾಗಿ ಭರ್ಜರಿಯಾದ ಒಂದು ಅಣೆಕಟ್ಟು. ಅದೇ ಇತಿಹಾಸ ಪ್ರಸಿದ್ಧವಾದ ಕಲ್ಲಣೆ. ಗ್ರಾಂಡ್ ಅಣೆಕಟ್ಟು ಎನ್ನುವುದು ಅದರ ಇನ್ನೊಂದು ಹೆಸರು. ಅಲ್ಲಿಂದ ಮುಂದೆ ಕಾವೇರಿಯು ಕವಲಾಗಿ ಹರಿಯ ತೊಡಗುತ್ತಾಳೆ. ಒಂದು ಕವಲಿಗೆ ಕೊಲ್ಲಡಂ ಎಂದು ಹೆಸರು. ಕೊಲ್ಲಡಂ ಮುಂದೆ ಹರಿದು ತಂಜಾವೂರು ಜಿಲ್ಲೆಯ ಎಲ್ಲೆಯಾಗಿ ಸಾಗಿ ಕೊನೆಗೆ ಚಿಂಗಲ್‌ಪೆಟ್ ಬಳಿ ದೇವಿಕೋಟೆ ಎಂಬಲ್ಲಿ ಬಂಗಾಳ ಸಮುದ್ರವನ್ನು ಸೇರುತ್ತದೆ.

ಕಲ್ಲಣೆಯಿಂದ ಹೊರಟ ಕಾವೇರಿ ಮತ್ತೆ ಪುನಃ ಕವಲೊಡೆಯುತ್ತಾಳೆ. ಅವಳ ಇನ್ನೊಂದು ಕವಲಿನ ಹೆಸರು ವೆಣ್ಣಾರು. ಹೀಗೆ ಮುಂದೆ ಅವಳು ತಂಜಾವೂರು ಜಿಲ್ಲೆಯನ್ನು ಪ್ರವೇಶಿಸುತ್ತಾಳೆ. ತಂಜಾವೂರು ತಮಿಳುನಾಡಿನ ಭತ್ತದ ಕಣಜ. ಕಾವೇರಿ ಹರಸಿರುವ ಹೊನ್ನಿನ ನಾಡು. ಕಾವೇರಿ ಈ ಜಿಲ್ಲೆಯಲ್ಲಿ ಅನೇಕ ಕವಲುಗಳಾಗಿ ರೂಪು ತಳೆದು ಹರಿಯುತ್ತಾಳೆ. ಅವುಗಳಲ್ಲಿ ವೆಣ್ಣಾರು, ಕೊಡುಮುರುಟಿ ಮತ್ತು ಅರಸಲಾರು ಮುಖ್ಯವಾದ ಕವಲುಗಳು. ಈ ನಾಲ್ಕು ಪ್ರಧಾನವಾದ ಕವಲುಗಳು ಅಲ್ಲದೆ ಕಾವೇರಿ ಎಂಬ ತನ್ನ ಹೆಸರನ್ನು ಉಳಿಸಿಕೊಂಡು ಪ್ರತ್ಯೇಕವಾಗಿ ಅವಳು ಮುಂದಕ್ಕೆ ಹರಿಯುತ್ತಾಳೆ.

ಕಲ್ಲಣೆಯನ್ನು ಬಿಟ್ಟು ಮುಂದೆ ಸಾಗಿದಂತೆ ಕಾವೇರಿ ಹರಿದು ಸಾಗುವ ಪ್ರಸಿದ್ಧವಾದ ಸನಿಹದ ಸ್ಥಳವೆಂದರೆ ತಿರುವೈಯ್ಯಾರು. ಕಲ್ಲಣೆಗೂ ಇಲ್ಲಿಗೂ ಸುಮಾರು ಐವತ್ತು ಕಿಲೋಮೀಟರ್ ತಿರುವೈಯಾರಿಗೆ ಸಮೀಪದಲ್ಲಿಯೇ ಅಂದರೆ ಒಂಬತ್ತು ಕಿಲೋಮೀಟರ್ ದೂರದಲ್ಲಿ ತಂಜಾವೂರು ನಗರವಿದೆ. ತಿರುವೈಯಾರಿನಲ್ಲಿ ಸಂಗೀತ ಪಿತಾಮಹ ಸಂತ ಶ್ರೀ ತ್ಯಾಗರಾಜರ ಸಮಾಧಿ ಮಂದಿರವಿದೆ. ಪಂಚನದೇಶ್ವರ ಸ್ವಾಮಿಯ ದೇಗುಲವಿದೆ.

ತಿರುವೈಯ್ಯಾರಿನಿಂದ ಮುಂದೆ ಕಾವೇರಿ ಹರಿದು ಸುಮಾರು ಮೂವತ್ತು ಕಿಲೋಮೀಟರು ದೂರ ಸಾಗುವುದರ ಒಳಗೆ ಈಶನ್ ಗುಡಿ, ಗಣಪತಿ ಅಗ್ರಹಾರ, ಗಭಿಸ್ಥಲಮ್, ತ್ಯಾಗಸಮುದ್ರಮ್, ಗಂಗಾಧರಪುರA, ಸ್ವಾಮಿಮಲೈ ಮೊದಲಾದ ಸ್ಥಳಗಳನ್ನು ದಾಟಿ ಹರಿಯುತ್ತಾಳೆ. ಕೊನೆಗೆ ಸುಪ್ರಸಿದ್ಧವಾದ ಕುಂಭಕೋಣA ಮಹಾಕ್ಷೇತ್ರವನ್ನು ತಲಪುತ್ತಾಳೆ. ಪುರಾಣಪ್ರಸಿದ್ಧವಾದ ಈ ಪವಿತ್ರ ಕ್ಷೇತ್ರದಲ್ಲಿ ನೂರಾರು ಶಿವ-ವಿಷ್ಣು ದೇಗುಲಗಳಿವೆ. ಪ್ರಖ್ಯಾತವಾದ ಮಹಾಮುಖ ಸರೋವರ ಇರುವದೂ ಇಲ್ಲಿಯೇ.

ಕುಂಭಕೋಣAನಿAದ ಕಾವೇರಿ ಮುಂದೆ ಸಾಗುತ್ತಾಳೆ. ಸುಮಾರು ನಲ್ವತ್ತು ಕಿಲೋ ಮೀಟರ್ ದೂರ ಹರಿದು ಮಾಯೂರಂ ಕ್ಷೇತ್ರವನ್ನು ತಲಪುತ್ತಾಳೆ. ಮಾಯೂರಂ ಕ್ಷೇತ್ರವನ್ನು ತಲಪುವ ಮುನ್ನ ಕಾವೇರಿಯು ಮುಖ್ಯವಾದ ಸ್ಥಳಗಳಾದ ತಿರುವಡೈ ಮರುತ್ತೂರು, ಗೋವಿಂದಪುರ ಗಳನ್ನು ದಾಟುತ್ತಾಳೆ. ಮಾಯೂರಂನ ಇನ್ನೊಂದು ಹೆಸರು ಮಾಯಾವರಂ. ಮಾಯಾವರಂಅಲ್ಲಿ ಪುರಾಣಪ್ರಸಿದ್ಧಿಯ ಮಯೂರನಾಥ ದೇವಾಲಯವಿದೆ. ಮಾಯೂರಂನಿAದ ಮುಂದೆ ಹರಿದು ಹೋಗಿ ಕಾವೇರಿಯು ಛಾಯಾವನಂನ್ನು ತಲಪುತ್ತಾಳೆ. ಛಾಯಾವನಂ ಒಂದು ಪ್ರಸಿದ್ಧ ಶಿವಕ್ಷೇತ್ರ. ಇಲ್ಲಿಂದ ಕಾವೇರಿ ಸಮುದ್ರವನ್ನು ಸೇರುವ ಸ್ಥಳ ಬಹುದೂರವಿಲ್ಲ. ಛಾಯಾವನಂನಿAದ ಮುಂದೆ ಹರಿದ ಕಾವೇರಿ ಪಲ್ಲವನೀಶಮ್ ಎಂಬ ಸ್ಥಳವನ್ನು ತಲಪುತ್ತಾಳೆ. ಅಲ್ಲಿಂದ ಮುಂದೆ ಸುಮಾರು ನಾಲ್ಕು ಮೀಟರ್ ಸಾಗಿ ಕಾವೇರಿ ಬಂಗಾಳ ಕಡಲಿನ ದಡದಲ್ಲಿರುವ ಕಾವೇರಿ ಪೂಂಪಟ್ಟಣವನ್ನು ತಲಪುತ್ತಾಳೆ. ಮಾಯೂರಂಗೂ ಕಾವೇರಿ ಪೂಂಪಟ್ಟಣಕ್ಕೂ ಇರುವ ದೂರ ಇಪ್ಪತ್ತೊಂಬತ್ತು ಕಿಲೋಮೀಟರ್. ಕಾವೇರಿ ಪೂಂಪಟ್ಟಣ ಪ್ರಾಚೀನ ಕಾಲದ ಸಂಗಮ ಚೋಳ ಅರಸರ ರಾಜಧಾನಿಯಾಗಿದ್ದು ಮಹಾವೈಭವದ ರೇವುಪಟ್ಟಣವಾಗಿತ್ತು. ಕಾವೇರಿ ಪೂಂಪಟ್ಟಣಕ್ಕೆ ಪೂಂಪುಹಾರ್ ಎಂಬ ಇನ್ನೊಂದು ಪ್ರಸಿದ್ಧವಾದ ಹೆಸರೂ ಇದೆ.

ಹೀಗೆ ಕಾವೇರಿಯು ಕರ್ನಾಟಕದ ಬೆಟ್ಟ ಪ್ರದೇಶವಾದ ತಲಕಾವೇರಿಯಲ್ಲಿ ಉದ್ಭವಿಸಿ ಕರ್ನಾಟಕ ರಾಜ್ಯದಲ್ಲಿ ಹರಿದು ತಮಿಳುನಾಡನ್ನು ಪ್ರವೇಶಿಸಿ ಒಟ್ಟಾಗಿ ಏಳುನೂರ ಅರುವತ್ತೆöÊದು ಕಿಲೋಮೀಟರ್‌ಗಳಷ್ಟು ದೂರ ಸಾಗಿಬಂದು ಕೊನೆಗೆ ಕಾವೇರಿ ಪೂಂಪಟ್ಟಣದಲ್ಲಿ ಶಾಂತಳಾಗಿ ಬಂಗಾಳ ಕೊಲ್ಲಿಯಲ್ಲಿ ಸಂಗಮ ವಾಗುತ್ತಾಳೆ. ಕೋಟ್ಯಂತರ ಜನರನ್ನು ಪಾವನಗೊಳಿಸಿ, ಅವರ ತೃಷೆಯಡಗಿಸಿ, ಕೃಷಿ ಹಸನಾಗಿಸಿ ವಿಶಾಲ ಸಮುದ್ರದಲ್ಲಿ ಮಿಳಿತಗೊಳ್ಳುತ್ತದೆ. (ಮುಗಿಯಿತು)

(ಸಂಗ್ರಹ) : ಎಸ್. ಎಸ್. ಸಂಪತ್‌ಕುಮಾರ್, ಭಾಗಮಂಡಲ.