ಮಡಿಕೇರಿ, ಜು. ೨೪ : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಂಡು ಬರುತ್ತಿರುವ ಭಾರೀ ಮಳೆ-ಗಾಳಿಯ ಪ್ರಮಾಣ ಇಂದು ತುಸು ಕಡಿಮೆಯಾದಂತೆ ಕಂಡುಬAದಿತು. ಆದರೂ ಮಳೆಯ ಸನ್ನಿವೇಶ ಮುಂದುವರಿದಿದ್ದು, ಜನರ ಆತಂಕ ದೂರವಾಗಿಲ್ಲ. ನಡು ನಡುವೆ ಬಿರು ಮಳೆಯಾಗುತ್ತಿದ್ದು, ಈಗಾಗಲೇ ನದಿ-ತೊರೆಗಳಲ್ಲಿ ಏರಿಕೆಯಾಗಿರುವ ನೀರಿನ ಮಟ್ಟ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ. ಕೆಲವೆಡೆ ನೀರು ಆವೃತ್ತಗೊಂಡಿದ್ದ ರಸ್ತೆಗಳಲ್ಲಿ ನೀರು ಇಳಿಕೆಯಾಗಿದ್ದು, ಸಂಪರ್ಕ ಕಡಿತವಾಗಿದ್ದ ರಸ್ತೆಗಳು ಮುಕ್ತವಾಗಿವೆ.

ಬರೆ ಕುಸಿತ - ಮಣ್ಣು ಕುಸಿತ, ಮರಬಿದ್ದು ಹಾನಿಯಾಗಿರುವುದನ್ನು ಸರಿಪಡಿಸುವ ಕೆಲಸ ಭರದಿಂದ ಸಾಗಿದೆ. ವಿದ್ಯುತ್ ಸಂಪರ್ಕದಲ್ಲಿ ಆಗಿರುವ ಹಾನಿಯನ್ನೂ ಸರಿಪಡಿಸುವ ನಿಟ್ಟಿನಲ್ಲಿ ಸೆಸ್ಕ್ ಸಿಬ್ಬಂದಿಗಳು ಕಾರ್ಯತತ್ವರರಾಗಿದ್ದಾರೆ.

ರಸ್ತೆಗಳಲ್ಲಿ ನೀರು ಇಳಿಕೆಯಾಗಿದ್ದು, ಸಂಪರ್ಕ ಕಡಿತವಾಗಿದ್ದ ರಸ್ತೆಗಳು ಮುಕ್ತವಾಗಿವೆ.

ಬರೆ ಕುಸಿತ - ಮಣ್ಣು ಕುಸಿತ, ಮರಬಿದ್ದು ಹಾನಿಯಾಗಿರುವುದನ್ನು ಸರಿಪಡಿಸುವ ಕೆಲಸ ಭರದಿಂದ ಸಾಗಿದೆ. ವಿದ್ಯುತ್ ಸಂಪರ್ಕದಲ್ಲಿ ಆಗಿರುವ ಹಾನಿಯನ್ನೂ ಸರಿಪಡಿಸುವ ನಿಟ್ಟಿನಲ್ಲಿ ಸೆಸ್ಕ್ ಸಿಬ್ಬಂದಿಗಳು ಕಾರ್ಯತತ್ವರರಾಗಿದ್ದಾರೆ.

ನಾಪೋಕ್ಲು ೩, ಸಂಜಾಜೆ ೦.೮೦, ಭಾಗಮಂಡಲ ೪, ವೀರಾಜಪೇಟೆ ಕ.ಸ.ಬಾ. ೧.೪೨, ಹುದಿಕೇರಿ ೩.೩೬, ಶ್ರೀಮಂಗಲ ೩.೩೮, ಪೊನ್ನಂಪೇಟೆ ೧.೨೦, ಅಮ್ಮತ್ತಿ ೧.೩೦, ಬಾಳಲೆ ೨.೫೬ ಇಂಚು ಮಳೆಯಾಗಿದೆ.

ಸೋಮವಾರಪೇಟೆ ಕ.ಸ.ಬಾದಲ್ಲಿ ೧.೫೧, ಶನಿವಾರಸಂತೆ ೨.೪೮, ಶಾಂತಳ್ಳಿ ೪.೪೦, ಕೊಡ್ಲಿಪೇಟೆ ೧.೪೩ ಹಾಗೂ ಸುಂಟಿಕೊಪ್ಪ ಹೋಬಳಿಗೆ ೨.೬೪ ಇಂಚು ಮಳೆಯಾಗಿದೆ.

ಮಡಿಕೇರಿ : ಗಾಳಿಬೀಡು ರಸ್ತೆಯಲ್ಲಿನ ಮಹೀಂದ್ರ ರೆಸಾರ್ಟ್ ಬಳಿ ಗಾಳಿ, ಮಳೆಗೆ ಬಿದ್ದ ಮರವನ್ನು ಮಡಿಕೇರಿಸ ವಲಯ ಅರಣ್ಯ ಇಲಾಖೆ ವತಿಯಿಂದ ತೆರವುಗೊಳಿಸಲಾಯಿತು

ವೀರಾಜಪೇಟೆ, ಜು. ೨೪; ಜಿಲ್ಲೆಯಲ್ಲಿ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದ್ದು ನದಿ ಹಳ್ಳ ತೊರೆಗಳು ಉಕ್ಕಿ ಹರಿಯುತ್ತಿವೆ. ಮಳೆಯ ತೀವ್ರತೆ ಹೆಚ್ಚದ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳು ಹಾಗೂ ನದಿ ಪಾತ್ರದ ಭೂಪ್ರದೇಶಗಳು ಜಲಾವೃತಗೊಂಡಿವೆ. ವೀರಾಜಪೇಟೆ ವಿಭಾಗದಲ್ಲಿ ಕಳೆದ ೨೪ ಗಂಟೆಯಲ್ಲಿ ೩೫.೬ ಮಿಲಿ ಮೀಟರ್ ಮಳೆಯಾಗಿದೆ.

ಕಳೆದ ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು ಗುರುವಾರ ಒಂದೇ ದಿನ ದಾಖಲೆಯ ೧೧೦.೪ ಮೀ. ಮೀ. ಮೀಟರ್ ಮಳೆಯಾಗಿದೆ. ಜುಲೈ ತಿಂಗಳ ೧ ರಿಂದ ೨೪ ರವರೆಗೆ ಒಟ್ಟು ೫೫೫.೩ ಮಿಲಿ ಮೀಟರ್ ಮಳೆಯಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಒಟ್ಟು ೪೫೭.೪ ಮಿ.ಮಿ ಮಳೆ ಪ್ರಮಾಣ ದಾಖಲಾಗಿದೆ.

ತಲಕಾವೇರಿ ಭಾಗಮಂಡಲ, ಅಯ್ಯಂಗೇರಿ, ನಾಪೋಕ್ಲು ಭಾಗಗಳಲ್ಲಿ ಅತಿ ಹಚ್ಚು ಮಳೆಯಾಗುತ್ತಿರುವುದರಿಂದ ಕಾವೇರಿ ಹಾಗೂ ಉಪ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿವೆ. ಬೇತ್ರಿಯಿಂದ ಪಾರಾಣೆಗೆ ತೆರಳುವ ಹೆಮ್ಮಾಡು ಸೇತುವೆಯ ಮೇಲೆ ೫ ಅಡಿ ನೀರಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಪಶ್ಚಿಮಘಟ್ಟ ಅರಣ್ಯದ ಅಂಚಿನಲ್ಲಿರುವ ಚೈಯಂಡಾಣೆ, ಚೇಲವಾರ, ತೋರ, ಬೂದಿಮಾಳ, ಹೆಗ್ಗಳ ಭಾಗದಲ್ಲಿ ಅತಿ ಹೆಚ್ಚಾಗಿ ಮಳೆಯಾಗುತ್ತಿರುವುದರಿಮದ ಕಡಂಗಮೂರುರು, ಅರಮೇರಿ, ಮೈತಾಡಿ, ಗ್ರಾಮಗಳ ಗದ್ದೆ ಬಯಲು ತೋಟಗಳು ನೀರಿನಿಂದ ಮುಳುಗಡೆಗೊಂಡಿವೆ.

ಉತ್ತಮ ಮಳೆಯಾಗುತ್ತಿರುವುದರಿಂದ ನದಿ ಪಾತ್ರದ ಭೂಪ್ರದೇಶವನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕೃಷಿ ಆರ್ಜಿ ಬೇಟೋಳಿ, ಬಾಳುಗೋಡು, ಬಿಟ್ಟಂಗಾಲ, ಮಗ್ಗುಲ, ಐಮಂಗಲ ಹಾಗೂ ಬಿಳುಗುಂದ ಕಾವಾಡಿ ಸುತ್ತಮುತ್ತಲ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಮುಂದುವರೆದಿವೆ.

ಬೇತ್ರಿಯ ಬಳಿ ಕಾವೇರಿ ನದಿ ಅಪಾಯ ಮಟ್ಟ ಮೀರುತ್ತಿರುವುದರಿಂದ ಸ್ಥಳಕ್ಕೆ ತಹಶೀಲ್ದಾರ್ ಆರ್ ಯೋಗಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಪರಿಸ್ಥಿತಿ ನಿಭಾಯಿಸಲು ತಾಲೂಕು ಆಡಳಿತದಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಚೆಟ್ಟಳ್ಳಿ: ಚೆಟ್ಟಳ್ಳಿ - ಕತ್ತಲೆಕಾಡು ರಸ್ತೆ ಮಧ್ಯೆ ತಾ. ೨೩ರಂದು ಬರೆಕುಸಿದಿದ್ದು ಜೆಸಿಬಿ ಮುಖಾಂತರ ಮಣ್ಣನ್ನು ತೆರವುಗೊಳಿಸಲಾಗಿ ಸಂಚಾರ ಸುಗಮ ಗೊಳಿಸಲಾಗಿದೆ. ಶುಕ್ರವಾರ ಸಂಜೆ ಚೆಟ್ಟಳ್ಳಿ-ಮಡಿಕೇರಿ ನಡುವಿನ ಕತ್ತಲೆಕಾಡುವಿನಲ್ಲಿ ರಸ್ತೆ ಮಧ್ಯೆ ಬರೆ ಜರಿದ ಪರಿಣಾಮ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಲಘುವಾಹನಗಳು ರಸ್ತೆ ಬದಿಯಿಂದ ದಾಟುತ್ತಿದ್ದವು. ಬೆಳಿಗ್ಗೆ ಜಿಸಿಬಿಯನ್ನು ತರಿಸಲಾಗಿದ್ದರೂ ತಾಂತ್ರಿಕ ತೊಂದರೆಯಿAದ ಸ್ವಲ್ಪ ತಡವಾಯಿತು. ನಂತರ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ರಸ್ತೆ ಬದಿಯ ಮರಗಳು ಬರೆಗಳೆಲ್ಲ ಬೀಳುವ ಹಂತದಲ್ಲಿದ್ದು ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂದು ಸ್ಥಳಿ ಯ ಪೊಲೀಸರು ತಿಳಿಸಿದ್ದಾರೆ.

ಮಡಿಕೇರಿ: ವಿಪರೀತ ಮಳೆಯಿಂದ ಬರೆ ಕುಸಿದು ಮನೆಗೆ ಹಾನಿ ಸಂಭವಿಸಿದ ಘಟನೆ ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬ್ಬೆಟ್ಟಗೇರಿಯಲ್ಲಿ ನಡೆದಿದೆ.

ಗ್ರಾಮದ ಪಾಂಡೀರ ಕಾವೇರಮ್ಮ ಎಂಬವರ ಮನೆ ಮೇಲೆ ತಾ. ೨೪ರ ಮುಂಜಾನೆ ೩ ಗಂಟೆ ಸುಮಾರಿಗೆ ಮನೆಯ ಹಿಂಬದಿಯ ಬರೆ ಕುಸಿದು ಕೋಣೆಯೊಳಗೆ ಮಣ್ಣು ನುಗ್ಗಿದೆ. ಜೊತೆಗೆ ಶೆಡ್ ಶೀಟ್ ಹಾರಿಹೋಗಿದ್ದು, ಮನೆಯೊಳಗೆ ಜಲ ಉಕ್ಕಿ ಬರುತಿತ್ತು.

ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೊಕ್ಕಲೇರ ಅಯ್ಯಪ್ಪ, ಕಂದಾಯ ಪರಿವೀಕ್ಷಕ ಸಣ್ಣರುದ್ರಯ್ಯ ಭೇಟಿ ನೀಡಿ ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಇಳಿಮುಖ - ರಸ್ತೆ ಸಂಚಾರ ಮುಕ್ತ

ನಾಪೋಕ್ಲು : ನಾಪೋಕ್ಲು ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆಯಿAದ ಮಳೆಯ ಆರ್ಭಟ ಕಡಿಮೆಯಾಗಿದ್ದು, ಪ್ರವಾಹ ಉಂಟಾದ ಎಲ್ಲಾ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದೆ.

ಶನಿವಾರ ಈ ವ್ಯಾಪ್ತಿಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿ, ಹೊಳೆ, ಹಳ್ಳ-ಕೊಳ್ಳಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ.

ಮೊರೆ ಹೋಗಿದ್ದಾರೆ. ಇಂದು ಮಳೆಯ ಪ್ರಮಾಣ ತಗ್ಗಿದ್ದರೂ ಸಹ ಪಟ್ಟಣದಲ್ಲಿ ಹೆಚ್ಚಿನ ಜನರ ಸಂಚಾರ ಇರಲಿಲ್ಲ.

ನಿನ್ನೆಯವರೆಗೂ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದ ಐಗೂರು ಚೋರನಹೊಳೆ, ಪಟ್ಟಣದ ದುದ್ದುಗಲ್ಲು, ಕಕ್ಕೆಹೊಳೆ, ಮಾದಾಪುರ, ಹಟ್ಟಿಹೊಳೆ, ಹುದುಗೂರು ಹೊಳೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.

ಕೊಡ್ಲಿಪೇಟೆಯ ಹಂಪಾಪುರದಲ್ಲಿ ಜಯಮ್ಮ ಅವರಿಗೆ ಸೇರಿದ ಮನೆಯ ಗೋಡೆ ಹಾಗೂ ಛಾವಣಿ ಕುಸಿದು ನಷ್ಟಸಂಭವಿಸಿದೆ. ಸೀಗೇಹೊಸೂರು ಗ್ರಾಮದ ಸತೀಶ್ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ೧೧೦ ಮಿ.ಮೀ, ಕೊಡ್ಲಿಪೇಟೆಗೆ ೩೫.೮ ಶನಿವಾರಸಂತೆಗೆ ೬೨, ಸೋಮವಾರಪೇಟೆಗೆ ೩೭.೮ ಮಿ.ಮೀ., ಸುಂಟಿಕೊಪ್ಪಕ್ಕೆ ೬೬ ಹಾಗೂ ಕುಶಾಲನಗರಕ್ಕೆ ೮ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.ಕುಶಾಲನಗರ : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನದಿ ಪ್ರವಾಹ ತಡೆಗಟ್ಟಲು ರೂ ೫ ಕೋಟಿ ವೆಚ್ಚದ ಯೋಜನೆಯೊಂದನ್ನು ರೂಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಅವರು ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ತಟದ ಬಡಾವಣೆಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಕುಶಾಲನಗರ ಪಟ್ಟಣ ವ್ಯಾಪ್ತಿಯ ಕಾವೇರಿ ನದಿ ಹೂಳೆತ್ತುವ ಕಾಮಗಾರಿ ನಡೆದಿದ್ದು ಈ ಮೂಲಕ ಸಮಸ್ಯೆಗೆ ಅಲ್ಪ ಪರಿಹಾರ ಕಂಡುಬAದಿದೆ. ಶಾಶ್ವತ ಪರಿಹಾರ ಕಂಡುಹಿಡಿಯಲು ಕಾವೇರಿ ನದಿಗೆ ತಡೆಗೋಡೆ ನಿರ್ಮಾಣ ಸೇರಿದಂತೆ ನದಿ ನಿರ್ವಹಣೆ ಕಾಮಗಾರಿ ನಡೆಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾವೇರಿ ನದಿಯಲ್ಲಿ ಪ್ರವಾಹವನ್ನು ತಪ್ಪಿಸಲು ಹಾರಂಗಿ ಜಲಾಶಯದಿಂದ ಹಂತ ಹಂತವಾಗಿ ನದಿಗೆ ನೀರು ಹರಿಸಲು ಅಣೆಕಟ್ಟು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾರಣದಿಂದ ನದಿ ಪಾತ್ರದ ಸಂಭಾವ್ಯ ಪ್ರವಾಹ ಸಮಸ್ಯೆ ತಪ್ಪಿದೆ.

ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿ, ಮಾದಾಪಟ್ಟಣ ಬಳಿ ಕಾವೇರಿ ಪ್ರವಾಹ ಪರಿಸ್ಥಿತಿ ಬಗ್ಗೆ ಸ್ಥಳೀಯರೊಂದಿಗೆ ಮಾತನಾಡಿದ ಶಾಸಕರು ಈ ಭಾಗದಲ್ಲಿ ಮಳೆಗಾಲ ಮುಗಿದಂತೆ ನದಿ ನಿರ್ವಹಣೆ ಕೆಲಸ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ, ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಕಾವೇರಿ ನದಿ ಸೇತುವೆ ಬಳಿ ಭೇಟಿ ನೀಡಿದ ಶಾಸಕ ರಂಜನ್ ಈ ಬಾರಿ ಪ್ರವಾಹ ಸಾದ್ಯತೆ ಕಡಿಮೆ ಇರುವುದಾಗಿ ಆಶಾಭಾವನೆ ವ್ಯಕ್ತಪಡಿಸಿದರು.

ನಂತರ ಹಾರಂಗಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ರಂಜನ್ ಜಲಾಶಯದ ನೀರಿನ ಮಟ್ಟ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.ಮದೆನಾಡಿನ ಮುಕ್ಕಾಟಿ ಶೇಷಪ್ಪ ಎಂಬವರಿಗೆ ಸೇರಿದ ಕೋಳಿ ಅಂಗಡಿ ಭಾರೀ ಮಳೆಗೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸೋಮವಾರಪೇಟೆ : ಭಾರೀ ಮಳೆಯಿಂದಾಗಿ ಬಿರುಕು ಬಿಟ್ಟಿರುವ ಮಾದಾಪುರ-ಹಟ್ಟಿಹೊಳೆ ನಡುವಿನ ರಾಜ್ಯ ಹೆದ್ದಾರಿಯನ್ನು ತಕ್ಷಣ ದುರಸ್ತಿಪಡಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಲೋಕೋಪಯೋಗಿ ಇಲಾಖಾ ಅಭಿಯಂತರರಿಗೆ ಸೂಚನೆ ನೀಡಿದರು.

ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಸಮೀಪ ರಸ್ತೆಯ ಒಂದು ಪಾರ್ಶ್ವದಲ್ಲಿ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿ ಎದುರಿಸುತ್ತಿರುವ ಹಿನ್ನೆಲೆ ಶಾಸಕರು ಇಂದು ಸ್ಥಳ ಪರಿಶೀಲನೆ ನಡೆಸಿದರು.

ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಪೂರ್ಣ ಪ್ರಮಾಣದಲ್ಲಿ ಕುಸಿದರೆ ಭಾರೀ ಸಮಸ್ಯೆಯಾಗಲಿದೆ. ಇದರೊಂದಿಗೆ ಭಾರೀ ಪ್ರಮಾಣದ ವಾಹನಗಳು ಸಂಚರಿಸಿದರೆ ರಸ್ತೆ ಕುಸಿಯುವ ಭೀತಿಯೂ ಎದುರಾಗಿದ್ದು, ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ಕುಮಾರ್ ಹಾಗೂ ಅಭಿಯಂತರ ವಿಜಯಕುಮಾರ್ ಅವರುಗಳಿಗೆ ಸೂಚನೆ ನೀಡಿದರು.

ಮಾದಾಪುರ-ಹಟ್ಟಿಹೊಳೆ ನಡುವೆ ಸುಮಾರು ೧೫ ಮೀಟರ್‌ನಷ್ಟು ಉದ್ದಕ್ಕೆ ರಸ್ತೆಯಲ್ಲಿ ಬಿರುಕು ಮೂಡಿದ್ದು, ಮಳೆ ಮುಂದುವರೆದರೆ ರಸ್ತೆ ಸಂಪೂರ್ಣ ಕುಸಿಯಲಿದೆ. ಇದರೊಂದಿಗೆ ಭಾರೀ ವಾಹನಗಳು ಇದರ ಮೇಲೆ ಸಂಚರಿಸಿದರೂ ಅಪಾಯ ಸಂಭವಿಸಲಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ರಂಜನ್ ನಿರ್ದೇಶಿಸಿದರು.