ಮಡಿಕೇರಿ, ಜು. ೨೪: ೨೦೨೧-೨೨ನೇ ಸಾಲಿಗೆ ಮಡಿಕೇರಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನಟರಾಜ್ ಕೆಸ್ತೂರು ಸಿ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪಿ.ಪಿ. ಸೋಮಣ್ಣ, ಖಜಾಂಚಿಯಾಗಿ ದಾಮೋದರ್ ಕೆ.ಕೆ. ಅವರುಗಳು ನೇಮಕವಾಗಿದ್ದಾರೆ. ಲಯನ್ಸ್ನ ಪ್ರಾಂತೀಯ ಮಾರ್ಗದರ್ಶಕರಾಗಿ ಉದ್ಯಮಿ ನವೀನ್ ಅಂಬೆಕಲ್ ಅವರು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾ. ೨೮ ರಂದು ಸಂಜೆ ೬.೩೦ಕ್ಕೆ ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ಜರುಗಲಿದೆ. ಸಂಸ್ಥೆಯ ಪ್ರಥಮ ರಾಜ್ಯಪಾಲರಾದ ಸಂಜಿತ್ ಶೆಟ್ಟಿ ಅವರು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ