ಮಡಿಕೇರಿ, ಜು. ೨೨: ಇತ್ತೀಚಿಗೆ ನಡೆದ ರಾಜ್ಯಮಟ್ಟದ ಬ್ರೆöÊನೋಬ್ರೆöÊನ್ ಅಬಾಕಸ್ ಆನ್‌ಲೈನ್ ಸ್ಪರ್ಧೆಯಲ್ಲಿ ಮಡಿಕೇರಿ ಕೇಂದ್ರದ ೩೨ ವಿದ್ಯಾರ್ಥಿಗಳು ಭಾಗವಹಿಸಿ ೩ ಚಾಂಪಿಯನ್ ಪ್ರಶಸ್ತಿ, ೧೩ ಚಿನ್ನ ಹಾಗೂ ೧೫ ಬೆಳ್ಳಿಯ ಪದಕಗಳನ್ನು ಗಳಿಸಿ ಉತ್ತಮ ಸಾಧನೆಗೈದಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ತಿಳಿಸಿದ್ದಾರೆ.

ಚಾಂಪಿಯನ್ ಪ್ರಶಸ್ತಿಯನ್ನು ಜನರಲ್ ತಿಮ್ಮಯ್ಯ ಶಾಲೆಯ ಲಿಖಿತ್ ಜಿ.ವಿ,ಕುಶಲ್ ರೈ ಜೆ ಹಾಗೂ ಸಂತ ಜೋಸೆಫರ ಶಾಲೆಯ ಆನ್ಶೀಲ್ ಲೋಬೊ ಪಡೆದುಕೊಂಡರು. ಚಿನ್ನದ ಪದಕಗಳನ್ನು ಆಶ್ರಿತ್ ಹೆಚ್.ಎಲ್., ಧನ್ವಿತ್ ಎಂ.ಜಿ., ಗೌರವ್ ಎಂ.ಸಿ., ಹೊನಲು ಕೆ.ಜಿ., ಖ್ಯಾತಿ ಕಾವೇರಮ್ಮ, ಕೃಪಾ ಎಸ್.ಪಿ., ನೀಲ್ ಎಂ.ಎನ್, ಮೊಹಮ್ಮದ್ ಫೌಝಾನ್, ರೇಬೆನ್ ಜೆಸ್ವಿನ್ ಸೆಲ್ವನ್, ತನ್ಮಯಿ ಎಂ.ಎನ್.,ತನ್ಮಯಿ, ಡಿ.ಮಹೇಶ್, ವಂಶಿತ್ ಎ.ಆರ್. ಹಾಗೂ ಯಶಸ್ ಕೆ.ಜಿ. ಪಡೆದುಕೊಂಡಿದ್ದಾರೆ.