ನಾಪೋಕ್ಲು, ಜು. ೨೨: ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಚೆಗೆ ಸುಮಾರು ೫೦ ಕ್ಕೂ ಅಧಿಕ ಕೂಲಿ ಕಾರ್ಮಿಕರ ಬಿ.ಪಿ.ಎಲ್ ಪಡಿತರ ಕಾರ್ಡ್ಗಳು ಎ.ಪಿ.ಎಲ್ ಕಾರ್ಡುಗಳಾಗಿ ಬದಲಾವಣೆಗೊಂಡಿರುವುದನ್ನು ಖಂಡಿಸಿದ್ದಲ್ಲದೇ ಕೂಡಲೇ ಅರ್ಹ ಫಲಾನುಭವಿಗಳಿಗೆ ಬಿ.ಪಿ.ಎಲ್. ಕಾರ್ಡ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಯನ್ನು ಮಾಡಲಾಗಿತ್ತು.ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕೂಡಲೇ ಬಿಪಿಎಲ್ ಕಾರ್ಡ್ಗಳನ್ನು ಒದಗಿಸಿ ಕೊಡುವಂತೆ ಗ್ರಾಮದ ನಿವಾಸಿಗಳು ಇಂದು ನಾಪೋಕ್ಲು ನಾಡಕಚೇರಿಯಲ್ಲಿ ಕಂದಾಯ ಪರೀವಿಕ್ಷಕ ರವಿ ಕುಮಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮತ್ತು ಆಹಾರ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಗ್ರಾಮಪಂಚಾಯಿತಿ ಸದಸ್ಯ ಇಸ್ಮಾಯಿಲ್ ಮಾತನಾಡಿ, ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ರುವುದರಿಂದ ಎಮ್ಮೆಮಾಡು ಗ್ರಾಮ ದಲ್ಲಿನ ಹಲವು ಮಂದಿ ಪಡಿತರ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. ಎಮ್ಮೆಮಾಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಬಿಪಿಎಲ್ ಕಾರ್ಡುಗಳು ಎಪಿಎಲ್ ಕಾರ್ಡುಗಳಾಗಿ ಪರಿವರ್ತನೆಯಾಗಿದೆ. ಈ ಕುರಿತು ಈ ಹಿಂದೆಯೇ ಗ್ರಾಮಸ್ಥರು ಸಂಬAಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಡು ಬಡವರಿದ್ದು ಅವರ ಬಿ.ಪಿ.ಎಲ್ ಕಾರ್ಡನ್ನು ಬದಲಿಸಿರುವುದು ಖಂಡನೀಯ ಕೂಡಲೇ ಅವರಿಗೆ ಬಿ.ಪಿ.ಎಲ್ ಕಾರ್ಡು ನೀಡಬೇಕು. ತಪ್ಪಿದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗೃಹ ನಡೆಸುವುದಾಗಿ ಎಚ್ಚರಿಸಿದರು.

ಗ್ರಾಮಸ್ಥ ಚೆಂಬಾರAಡ ಮೊಯಿದು, ಕಂಬೇರ ಆಲಿ, ಚೆಂಬಾರAಡ ಅಬ್ದುಲ್ ಖಾದರ್, ಚೆಂಬಾರAಡ ಮೂಸೆ ಹಾಜಿ, ಉಮ್ಮರ್ ಮಂಜೇರಿ, ಶಬಾನಾ ಚೆಂಬಾರAಡ, ಕುಲ್ಸಾ, ಹಲೀಮ ಸೇರಿದಂತೆ ಬಿ.ಪಿ.ಎಲ್ ಕಾರ್ಡ್ ವಂಚಿತ ಕುಟುಂಬದವರು ಇದ್ದರು.