ಬೆಂಗಳೂರು, ಜು. ೨೨: ಟೋಕಿಯೊದಲ್ಲಿ ಇಂದಿನಿAದ ಆರಂಭವಾಗಲಿರುವ ೨೦೨೦ರ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಮತ್ತು ಮಹಿಳಾ ಹಾಕಿ ಟೂರ್ನಿಗಳ ಪಂದ್ಯದ ವಿವರಗಳು ಇಂತಿವೆ.

ಈ ಪಂದ್ಯಗಳ ನೇರ ಪ್ರಸಾರವನ್ನು ಸೋನಿ ಟೆನ್-೧ ಎಚ್‌ಡಿ ಅಥವಾ ಎಸ್‌ಡಿ ಚಾನಲ್ ಟೆಲಿವಿಷನ್ ಮೂಲಕ ಪಂದ್ಯಗಳನ್ನು ವೀಕ್ಷಿಸಬಹುದು. ಪಂದ್ಯಗಳ ವಿವರ ಭಾರತೀಯ ಕಾಲಮಾನದಲ್ಲಿ ಇವೆ.

ಪುರುಷರ ವಿಭಾಗ: ಪೂಲ್ ‘ಎ’ ಭಾರತ-ನ್ಯೂಜಿಲೆಂಡ್: ಕಾಲ ಬೆಳಿಗ್ಗೆ ೬.೩೦ ರಿಂದ (ಜುಲೈ ೨೪). ಭಾರತ-ಆಸ್ಟೆçÃಲಿಯ: ಮಧ್ಯಾಹ್ನ ೩ ರಿಂದ (ಜುಲೈ ೨೫), ಭಾರತ-ಸ್ಪೇನ್: ಬೆಳಿಗ್ಗೆ ೬.೩೦ ರಿಂದ (ಜುಲೈ ೨೭); ಭಾರತ-ಅರ್ಜೆಂಟಿನಾ: ಬೆಳಿಗ್ಗೆ ೬ ರಿಂದ (ಜುಲೈ ೨೯), ಭಾರತ-ಜಪಾನ್: ಮಧ್ಯಾಹ್ನ ೩ ರಿಂದ (ಜುಲೈ ೩೦), ಕ್ವಾರ್ಟರ್ ಫೈನಲ್ ಪಂದ್ಯ ಬೆಳಿಗ್ಗೆ ೬ಕ್ಕೆ (ಆಗಸ್ಟ್ ೧). ಸೆಮಿ ಫೈನಲ್ ಪಂದ್ಯಗಳು: ಬೆಳಿಗ್ಗೆ ೭ ಹಾಗೂ ಮಧ್ಯಾಹ್ನ ೩.೩೦ಕ್ಕೆ (ಆಗಸ್ಟ್ ೩), ಕಂಚು ಮತ್ತು ಬಂಗಾರಕ್ಕಾಗಿ ಪಂದ್ಯಗಳು ಬೆಳಿಗ್ಗೆ ೭ ಹಾಗೂ ಮಧ್ಯಾಹ್ನ ೩.೩೦ ರಿಂದ.

ಮಹಿಳೆಯರ ವಿಭಾಗ: ಪೂಲ್ ‘ಎ’ ಭಾರತ-ಹಾಲೆಂಡ್: ಸಂಜೆ ೪.೧೫ ರಿಂದ (ಜುಲೈ ೨೪), ಭಾರತ-ಜರ್ಮನಿ: ಸಂಜೆ ೫.೪೫ ರಿಂದ (ಜುಲೈ ೨೬), ಭಾರತ-ಇಂಗ್ಲೆAಡ್: ಬೆಳಿಗ್ಗೆ ೬.೩೦ ರಿಂದ (ಜುಲೈ ೨೮), ಭಾರತ-ಐರ್ಲೆಂಡ್: ಬೆಳಿಗ್ಗೆ ೮.೧೫ ರಿಂದ (ಜುಲೈ ೩೦), ಭಾರತ-ದಕ್ಷಿಣ ಆಫ್ರಿಕಾ: ಬೆಳಿಗ್ಗೆ ೮.೪೫ ರಿಂದ (ಜುಲೈ ೩೧).

ಆಗಸ್ಟ್ ೨ ಕ್ವಾರ್ಟರ್ ಫೈನಲ್ ಪಂದ್ಯ: ಬೆಳಿಗ್ಗೆ ೬ ರಿಂದ ಆಗಸ್ಟ್ ೪. ಸೆಮಿಫೈನಲ್ ಪಂದ್ಯ ಬೆಳಿಗ್ಗೆ ೭ ರಿಂದ ಆಗಸ್ಟ್ ೬. ಕಂಚು ಮತ್ತು ಬಂಗಾರಕ್ಕಾಗಿ ಪಂದ್ಯಗಳು ಬೆಳಿಗ್ಗೆ ೭ ಹಾಗೂ ಮಧ್ಯಾಹ್ನ ೩.೩೦ ರಿಂದ.

ತಿದ್ದುಪಡಿ: ಗುರುವಾರ ಪ್ರಕಟವಾದ ‘ನಾಳೆಯಿಂದ ಒಲಿಂಪಿಕ್ ಜಾಗತಿಕ ಹಬ್ಬ’ ಅಂಕಣದಲ್ಲಿ ಭಾರತ ತಂಡದವರು ೧೯೫೦ರ ಮಾಸ್ಕೋ ಒಲಿಂಪಿಕ್ಸ್ ಬದಲು ೧೯೮೦ ಮತ್ತು ಗುಡಂಡ ಜಿ. ಪ್ರಮೀಳಾ ಬದಲು ಗುಡ್ಡಂಡ ಜಿ. ಪ್ರಮೀಳಾ ಎಂದು ಓದಿಕೊಳ್ಳಬೇಕು.