ಗೋಣಿಕೊಪ್ಪ ವರದಿ, ಜು. ೨೨ : ಕಕೂನ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷರಾಗಿ ತೀತಮಾಡ ನೀತಾ ಕಾವೇರಮ್ಮ, ಕಾರ್ಯದರ್ಶಿಯಾಗಿ ಜೆ. ಕೆ. ಶುಭಾಷಿಣಿ ನಿರ್ಗಮಿತ ಅಧ್ಯಕ್ಷೆ ಮೂಕಳೇರ ಬೀಟಾ ಲಕ್ಷö್ಮಣ್ ಅವರಿಂದ ಅಧಿಕಾರ ಸ್ವೀಕರಿಸಿದರು. ಕ್ಲಬ್ ಸರ್ವಿಸ್, ಸಮುದಾಯ ಸೇವೆ, ಕಾರ್ಯಕ್ರಮ, ಅಂತರಾಷ್ಟಿçÃಯ ಸೇವೆ, ಯುವ ಸಬಲೀಕರಣ, ಪಲ್ಸ್ ಪೋಲಿಯೋ, ಸದಸ್ಯತ್ವ ಅಭಿವೃದ್ಧಿ ಸೇವಾ ನಿರ್ದೇಶಕರುಗಳಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಅಧಿಕಾರ ನೀಡಲಾಯಿತು. ಡಾ. ಎಚ್. ಆರ್. ಯತಿರಾಜ್, ಡಾ. ಮುಕ್ಕಾಟಿರ ಸೌಮ್ಯ ನಾಣಯ್ಯ ಗೌರವ ಸದಸ್ಯರಾಗಿ ಪದಗ್ರಹಣ ಸ್ವೀಕರಿಸಿದರು.
ಕಾರ್ಯದರ್ಶಿ ಕಳ್ಳಿಚಂಡ ಸಿ. ಮುತ್ತಪ್ಪ ವರದಿ ವಾಚಿಸಿದರು. ರೋಟರಿ ವಲಯ ಸಹಾಯಕ ಗವರ್ನರ್ ಎಚ್. ಟಿ. ಅನಿಲ್ ರೋಟರಿ ಬುಲೆಟಿನ್ ಬಿಡುಗಡೆಗೊಳಿಸಿದರು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಪದಗ್ರಹಣ ಬೋಧಿಸಿ ಮಾತನಾಡಿ, ರೋಟರಿ ಕ್ಲಬ್ ವಿಶ್ವಮಟ್ಟದಲ್ಲಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದರಿAದ ನಂಬಿಕೆ ಹೆಚ್ಚಿಸಿಕೊಂಡಿದೆ ಎಂದರು. ಇಮ್ಮಿ ಉತ್ತಪ್ಪ, ದೀನಾ ಕುಶಾಲಪ್ಪ, ದಿಲನ್ ಚಂಗಪ್ಪ, ಮಚ್ಚಮಾಡ ವಿಜಯ, ಮೇಕೇರಿರ ಮೀನಾಕ್ಷಿ, ಲತಾ ಬೋಪಣ್ಣ ಕಾರ್ಯಕ್ರಮ ನಿರೂಪಿಸಿದರು. ರೋಟರಿ ವಲಯ ಕಾರ್ಯದರ್ಶಿ ಎಚ್. ಎಸ್. ವಸಂತಕುಮಾರ್, ವಲಯ ಸೇನಾನಿ ಕೆ. ಎಚ್. ಆದಿತ್ಯ ಇದ್ದರು.