ಭಾಗಮಂಡಲ, ಜು. ೨೨: ಭಾಗಮಂಡಲ ವಲಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ನಿಡ್ಯಮಲೆ ಕುಟುಂಬ ಸದಸ್ಯರು ಹಾಗೂ ಅರಣ್ಯ ಇಲಾಖೆ ಜಂಟಿ ಯಾಗಿ ಪರಿಸರ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿ ದ್ದರು.

ಭಾಗಮಂಡಲ ನಿಡ್ಯಮಲೆ ಭಾಗಮಂಡಲ, ಜು. ೨೨: ಭಾಗಮಂಡಲ ವಲಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ನಿಡ್ಯಮಲೆ ಕುಟುಂಬ ಸದಸ್ಯರು ಹಾಗೂ ಅರಣ್ಯ ಇಲಾಖೆ ಜಂಟಿ ಯಾಗಿ ಪರಿಸರ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿ ದ್ದರು.

ಭಾಗಮಂಡಲ ನಿಡ್ಯಮಲೆ ಮಂಜುನಾಥ ನಾಯಕ್ ಜನರು ಪರಿಸರದ ವಿಷಯದಲ್ಲಿ ಜಾಗೃತರಾಗಬೇಕೆಂದರು. ಮನೆಗೊಂದು ಮರ, ದೇಶದ ಹಿತಕ್ಕೊಂದು ವರ ಎನ್ನುವ ಘೋಷಣೆಯ ಅರ್ಥ ಎಲ್ಲರಲ್ಲಿಯೂ ಮೂಡಬೇಕು ಎನ್ನುವುದನ್ನು ತಿಳಿಸಿದರು. ನಿಡ್ಯಮಲೆ ಕುಟುಂಬಸ್ಥರಾದ ನಿವೃತ್ತ ಮೆರೈನ್ ಇಂಜಿನಿಯರ್ ಮಾಧವ ಎನ್.ಸಿ. ಹಾಗೂ ತೇಜಸ್ ಎನ್.ಬಿ. ಇವರು ಈ ವನಮಹೋತ್ಸವ ಕಾರ್ಯಕ್ರಮ ಗಳು ಜನರಲ್ಲಿ ಮರಗಳ ಬಗ್ಗೆ ಅರಿವು ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಹಾಗೂ ಮಾಲಿನ್ಯವನ್ನು ಕಡಿಮೆ ಮಾಡಲು ಅತ್ಯುತ್ತಮ ದಾರಿ ಎಂದು ತಿಳಿಸುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿಗಳನ್ನು ನೆಡುವು ದರ ಮೂಲಕ ಸಹಕಾರ ತೋರಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹೆಚ್.ಜಿ. ದೇವರಾಜು, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್, ಅರಣ್ಯ ರಕ್ಷಕ ನಾಗರಾಜು, ಅರಣ್ಯ ವೀಕ್ಷಕ ಓ.ಡಿ. ರವಿ, ವಾಸುದೇವ ಇತ್ಯಾದಿ ಹಾಗೂ ನಿಡ್ಯಮಲೆ ಕುಟುಂಬ ಸದಸ್ಯರಾದ ತೇಜಸ್ ಎನ್.ಬಿ, ಮಾಧವ ಎನ್.ಸಿ, ಚಲನ್, ಮಂಜುನಾಥ, ದೇವಾನಂದ ಹಾಗೂ ಮತ್ತಿತರರು ಹಾಜರಿದ್ದರು.