ಕೂಡಿಗೆ, ಜು. ೨೨ : ಇಲ್ಲಿಗೆ ಸಮೀಪದ ೭ನೇ ಹೊಸಕೋಟೆಯ ತೊಂಡೂರಿನ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೂಲಕ ವಿಶೇಷಚೇತನರಿಗೆ ಸಹಾಯಕ ಸಾಧನಗಳನ್ನು ಉದಾರವಾಗಿ ನೀಡಲಾಯಿತು. ಟ್ರಸ್ಟ್ನ ಗೌರವಾಧ್ಯಕ್ಷ ಹಾಗೂ ಉದ್ಯಮಿ ಶುಭಕರನ್ ಅವರು ವಿಶೇಷಚೇತನರಿಗೆ ೭ ವೀಲ್ ಚೇರ್, ೫ ಸ್ಟಿಕ್ ಮತ್ತು ೪ ವಾಕರ್‌ಗಳನ್ನು ಕೊಡುಗೆ ನೀಡಿದರು.
೭ನೆ ಹೊಸಕೋಟೆ ಸರಕಾರಿ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಶೇಷಚೇತನರಿಗೆ ಸಹಾಯಕ ಸಾಧನಗಳನ್ನು ಹಸ್ತಾಂತರ ಮಾಡಲಾಯಿತು. ಇದರೊಂದಿಗೆ ದಾನಿ ಶುಭಕರನ್ ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ದಾಸಂಡ ರಮೇಶ್ ಅವರು ಅಂಗನವಾಡಿ, ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕರಿಗೆ ವೈಯಕ್ತಿಕವಾಗಿ ಪ್ರೋತ್ಸಾಹ ಧನ ವಿತರಣೆ ಮಾಡಿದರು. ಕಾರ್ಯಕ್ರಮವು ೭ನೇ ಹೊಸಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ನವರ ಅಧ್ಯಕ್ಷತೆಯಲ್ಲಿ ನಡೆಯಿತು
ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ದಿಲೀಪ್, ಕಾರ್ಯದರ್ಶಿ ಶಿವನ್, ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಸೇರಿದಂತೆ ಟ್ರಸ್ಟ್ನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಹಾಗೂ ಸದಸ್ಯರು ಇದ್ದರು.