ಮಡಿಕೇರಿ, ಜು. ೨೩: ಜಾಗತಿಕ ಮಟ್ಟದ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್ಗೆ ಇಂದು ಜಪಾನ್‌ನ ಟೋಕಿಯೋದಲ್ಲಿ ಚಾಲನೆ ದೊರೆಯಿತು. ಜಗತ್ತಿನ ೨೦೬ ರಾಷ್ಟçಗಳು ಈ ಬಾರಿಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ. ಭಾರತದ ಪರವಾಗಿ ಕೊಡಗಿನವರಾದ ಸೇಯ್ಲಿಂಗ್ ಕ್ರೀಡಾ ಸ್ಪರ್ಧಾಳು ಕೇಳಪಂಡ ಸಿ. ಗಣಪತಿ, ಬಾಕ್ಸಿಂಗ್ ಮುಖ್ಯ ಕೋಚ್ ಆಗಿ ಚೇನಂಡ ವಿಶು ಕುಟ್ಟಪ್ಪ ಹಾಗೂ ಮಹಿಳಾ ಹಾಕಿ ಸಹಾಯಕ ಕೋಚ್ ಆಗಿ ಬಿ.ಎಸ್. ಅಂಕಿತಾ ಅವರುಗಳು ತೆರಳಿದ್ದಾರೆ. ಕೊಡಗಿನವರಾದ ಕುಟ್ಟಪ್ಪ ಹಾಗೂ ಗಣಪತಿ ಟೋಕಿಯೋದ ಕ್ರೀಡಾ ಗ್ರಾಮದಲ್ಲಿ ಸಮ್ಮಿಲನಗೊಂಡ ಸಂತಸದ ಕ್ಷಣವಿದು.

ಟೋಕಿಯೋದಲ್ಲಿನ ವ್ಯವಸ್ಥೆಗಳೆಲ್ಲವೂ ಅಚ್ಚುಕಟ್ಟಾಗಿದೆ. ಆದರೆ ಕೋವಿಡ್ ಕಾರಣದಿಂದಾಗಿ ಹಲವು ನಿರ್ಬಂಧಗಳಿದ್ದು, ಎಲ್ಲಾ ಕ್ರೀಡಾಪಟುಗಳು ಇದನ್ನು ಪಾಲಿಸಬೇಕಾಗಿದೆ ಎಂದು ಕುಟ್ಟಪ್ಪ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ತಾ. ೨೪ರಿಂದ ವಿವಿಧ ಸ್ಪರ್ಧೆಗಳು ಆರಂಭವಾಗಲಿದ್ದು, ಭಾರತ ಉತ್ತಮ ಪ್ರದರ್ಶನ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.