ಮಡಿಕೇರಿ, ಜು. ೨೩ : ಪ್ರಸಕ್ತ ವರ್ಷದ ಮುಂಗಾರು ಮಳೆಯ ಪರ್ವಕಾಲ ಇದಾಗಿದ್ದು, ಜಿಲ್ಲೆಯಲ್ಲಿ ಈ ತನಕದ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ಕಳೆದ ವರ್ಷಕ್ಕಿಂತಲೂ ಅಧಿಕ ಮಳೆಯಾಗಿರುವುದು ಕಂಡುಬAದಿದೆ. ಜನವರಿ ತಿಂಗಳ ಆರಂಭದಿAದ ಈ ತನಕ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿಯೂ ಮಳೆಯ ಪ್ರಮಾಣ ಅಧಿಕವಾಗಿದೆ.
ಜನವರಿ ಆರಂಭದಿAದ ಜುಲೈ ತಿಂಗಳ ಈತನಕ ಮಡಿಕೇರಿ ನಗರಕ್ಕೆ ೮೧.೪೪ ಇಂಚು ಮಳೆಯಾಗಿದೆ. ಅದೇ ಮಡಿಕೇರಿ ತಾಲೂಕಿನಲ್ಲಿ ೮೦.೦೫ ಇಂಚು, ವೀರಾಜಪೇಟೆಯಲ್ಲಿ ೪೬.೦೭ ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೪೩.೭೪ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಜಿಲ್ಲಾ ಸರಾಸರಿ ೫೬.೬೨ ಇಂಚಿನಷ್ಟಾಗಿದೆ.
೨೦೨೦ರಲ್ಲಿ ಇದೇ ಅವಧಿಯಲ್ಲಿ ಜಿಲ್ಲಾ ಸರಾಸರಿ ೩೫.೩೬ ಇಂಚು, ಮಡಿಕೇರಿ ತಾಲೂಕಿನಲ್ಲಿ ೫೧.೬೪, ವೀರಾಜಪೇಟೆಯಲ್ಲಿ ೩೩.೧೬ ಹಾಗೂ ಸೋಮವಾರಪೇಟೆಯಲ್ಲಿ ೨೧.೨೮ ಇಂಚು ಮಳೆಯಾಗಿತ್ತು.
ಮಡಿಕೇರಿ ನಗರದ ವಿವರ : ಮಡಿಕೇರಿ ನಗರದಲ್ಲಿ ೨೦೨೦ರ ಇಡೀ ವರ್ಷದಲ್ಲಿ ೧೪೪.೯೦ ಇಂಚು ಮಳೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈ ತನಕವೇ ೮೧.೪೪ ಇಂಚು ಮಳೆಯಾಗಿದೆ. ಜಿಲ್ಲಾ ಕೇಂದ್ರವೂ
(ಮೊದಲ ಪುಟದಿಂದ) ಆಗಿರುವ ಮಡಿಕೇರಿ ನಗರಕ್ಕೆ ೨೦೧೯ರಲ್ಲಿ ವರ್ಷದಲ್ಲಿ ೧೩೦.೯೫ ಇಂಚು ಹಾಗೂ ಭಾರೀ ದುರಂತ ಸಂಭವಿಸಿದ ೨೦೧೮ರ ವರ್ಷದಲ್ಲಿ ಒಟ್ಟು ೨೩೨.೮೦ ಇಂಚಿನಷ್ಟು ಭಾರೀ ಮಳೆಯಾಗಿತ್ತು.
ಈ ವರ್ಷ (೨೦೨೧)ದ ಮೇ ತಿಂಗಳಿನಲ್ಲಿ ನಗರಕ್ಕೆ ೧೧.೬೧ ಇಂಚು, ಜೂನ್ನಲ್ಲಿ ೨೫.೩೬ ಹಾಗೂ ಜುಲೈನಲ್ಲಿ ಈ ತನಕ ೩೬.೫೪ ಇಂಚು ಮಳೆ ಬಿದ್ದಿದೆ.
ಆಗಸ್ಟ್ನ ಆತಂಕ : ೨೦೧೮ರಲ್ಲಿ ಕೇವಲ ಆಗಸ್ಟ್ ತಿಂಗಳೊAದರಲ್ಲಿಯೇ ನಗರಕ್ಕೆ ೯೧.೪೪ ಇಂಚು, ೨೦೧೯ರಲ್ಲಿ ೫೨.೪೭ ಇಂಚು ಹಾಗೂ ೨೦೨೦ರಲ್ಲಿ ೫೫.೮೦ ಇಂಚು ಮಳೆಯಾಗಿರುವುದು ಅಂಕಿ-ಅAಶಗಳಿAದ ತಿಳಿದುಬಂದಿದೆ. ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಲ್ಲಿ ಯಾವ ರೀತಿಯ ವಾತಾವರಣ ಕಂಡುಬರಲಿದೆ ಎಂಬ ಆತಂಕ ಇದೀಗ ನಗರದ ಜನತೆಯಲ್ಲಿದೆ.