“ಚಕ್ರವರ್ತಿ’’
ಮಡಿಕೇರಿ, ಜು. ೨೨: ಕೊಡಗಿನಲ್ಲಿ ಮಳೆೆ ನಕ್ಷತ್ರಗಳ ಪ್ರಭಾವದ ಮೇಲೆ ಜಿಲ್ಲೆಯ ಅನೇಕರಿಗೆ ನಂಬಿಕೆಯಿದೆ. ಅದಕ್ಕೆ ಪೂರಕವೆಂಬAತೆ ೨೦೧೮ ರಲ್ಲಿ ಜಿಲ್ಲೆಯಲ್ಲಿ ಘಟಿಸಿದ ಮಳೆ ಅನಾಹುತ, ಸಾವು ನೋವು, ಭೂ ಕುಸಿತ, ಮೇಘ ಸ್ಫೋಟ ಎಲ್ಲವೂ ಬಹುತೇಕ ಸಂಭವಿಸಿದುದು ಆಶ್ಲೇಷ ಮಳೆ ಸಂದರ್ಭವೇ ಆಗಿದೆ. ಒಂದು ವರ್ಷ ಮಾತ್ರ ಈ ಘಟನೆ ನಡೆಯಿತು ಎಂದು ಜನತೆ ಸಂಕಷ್ಟದಿAದ ಮೇಲೆದ್ದು ಬಂದಾಗ ಮತ್ತೆ ಎರಡು ವರ್ಷಗಳೂ ಇದೇ ಸನ್ನಿವೇಶ ಮುಂದುವರಿದುದು ವಿಚಿತ್ರ ಎನಿಸಿದರೂ ಸತ್ಯ. ಪ್ರತಿ ವರ್ಷವೂ ಸಾವು, ನೋವು, ಅನಾಹುತ ಭಾರೀ ನಷ್ಟ, ಮನೆ ಹಾನಿ ಆಸ್ತಿ ಪಾಸ್ತಿ ನಾಶವಾದುದೆಲ್ಲ ಆಶ್ಲೇಷ ನಕ್ಷತ್ರ ಸಂದರ್ಭವೇ ಎನ್ನುವದು ಅತ್ಯಾಶ್ಚರ್ಯಕರ. ಪ್ರಸ್ತುತ ವರ್ಷ ಆಗಸ್ಟ್ ೨ ಕ್ಕೆ ಆಶ್ಲೇಷ ನಕ್ಷತ್ರÀ ಪ್ರವೇಶಿಸುತ್ತಿದೆ. ಈಗ ಪುಷ್ಯ ಮಳೆಯಾಗುತ್ತಿದೆ. ಜುಲೈ ೧೯ ರಂದು ಪುಷ್ಯ ಪ್ರಾರಂಭವಾಗಿದ್ದು ಆ. ೧ ರವರೆಗಿರುತ್ತದೆ. ಆ.೨ ರಿಂದ ಆ.೧೫ ಸ್ವಾತಂತ್ರö್ಯ ದಿನದವರೆಗೆ ಆಶ್ಲೇಷ ನಕ್ಷತ್ರದ ಪ್ರಭಾವವಿರುತ್ತದೆ. ಪುಷ್ಯ ಮಳೆÉಯಲ್ಲಿ ಈಗ ಕಾಣುತ್ತಿರುವಂತೆಯೇ ಮಳೆಯೊಂದಿಗೆ ಭಾರೀ ಗಾಳಿಯಿರುತ್ತದೆ.
ಕೊಡಗಿನ ಮಟ್ಟಿಗೆ ಈ ಬಾರಿ ಆ. ೨ ರಿಂದ ಪ್ರಾರಂಭಗೊAಡು ಆ. ೧೫ ರ ವರೆಗೆ ಮುಂದುವರಿಯುವ ಆಶ್ಲೇಷ ನಕ್ಷತ್ರ ಏನೂ ಹಾನಿ ಮಾಡದಿರಲಿ ಎಂದು ಪ್ರಕೃತಿ ಮಾತೆಯಲ್ಲಿ ಪ್ರಾರ್ಥಿಸೋಣವೇ? ಜೊತೆಗೆ ಜಿಲ್ಲಾಡಳಿತ, ಎನ್.ಡಿ.ಆರ್.ಎಫ್ ತಂಡಗಳು ಸಕಾಲಿಕ ಸನ್ನದ್ಧವಾಗಿರಲಿ ಎಂದು ಆಶಿಸೋಣವೇ?
(ಮೊದಲ ಪುಟದಿಂದ) ಆದರೆ, ಕಳೆÉದ ವರ್ಷಗಳಿಗೂ ಈ ವರ್ಷಕ್ಕೂ ಮತ್ತೊಂದು ವ್ಯತ್ಯಾಸವಿದೆ. ಅದೇನೆಂದರೆ, ಕಳೆದ ವರ್ಷಗಳಲ್ಲಿ ಮುಂಗಾರುವಿನಲ್ಲಿ ಪ್ರಾರಂಭಿಕ ಮಳೆ ಅತಿ ಕ್ಷೀಣವಾಗಿದ್ದು ಒಮ್ಮೆಲೇ ಆಶ್ಲೇಷ ನಕ್ಷತ್ರದಲ್ಲಿ ಅಬ್ಬರಿಸಿದೆ. ಆದರೆ, ಈ ವರ್ಷ ಮೃಗಶಿರ ಮಧ್ಯಾವಧಿ ಅಂದರೆ ಆ.೧೩ ರಿಂದಲೇ ಮಳೆ ತಲೆಯಿಕ್ಕಿದೆ. ಕೃಷಿ ಚಟುವಟಿಕೆಗೆ ಅಗತ್ಯವಾದಷ್ಟು ಬಿದ್ದಿದೆ. ಆದರೆ, ಮಧ್ಯದಲ್ಲಿ ಸುಮಾರು ೧೫ ದಿನಗಳ ಕಾಲ ಮಳೆ ಕಾಣೆಯಾಗಿ ಬಿಸಿಲಿನ ವಾತಾವರಣ ಮೂಡಿತ್ತು. ಆರ್ದ್ರಾ ನಕ್ಷತ್ರದ ಕೊನೆ ವಾರವಾದ ಜು. ೧೧ ರ ಬಳಿಕ ಮಳೆ ಮರು ಆರಂಭಗೊAಡಿತು, ತಾ. ೧೯ ರ ಬಳಿಕÀ ಪುನರ್ವಸು ನಕ್ಷತ್ರದಲ್ಲಿಯೂ ಸಾಕಷ್ಟು ಮಳೆಯಾಗಿ ಈಗ ಪುಷ್ಯದಲ್ಲಿ ಮುಂದುವರಿದಿದೆ. ಆದರೆ, ಇತ್ತೀಚೆಗೆ ಕೊಡಗಿನಲ್ಲಿ ಮಳೆಯಾಗುತ್ತಿರುವುದಕ್ಕೂ ಕರ್ನಾಟಕದ ಕರಾವಳಿ ಪ್ರದೇಶಗಳ ಸಮುದ್ರಗಳಲ್ಲಿನ ವಾಯುಭಾರ ಕುಸಿತವೇ ಹೆಚ್ಚು ಕಾರಣವಾಗಿದೆ ಎನ್ನುವದು ವಾತಾವರಣ ತಜ್ಞರ ಅಭಿಮತ. ಮುಂಗಾರು ಒಮ್ಮೊಮ್ಮೆ ಸೇರಿಕೊಳ್ಳುತ್ತಿದೆಯಷ್ಟೆ! ಈಗಾಗಲೇ ಹವಾಮಾನ ಇಲಾಖಾ ಮುನ್ಸೂಚನೆಯೂ ಇದನ್ನು ಸ್ಪಷ್ಟಪಡಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಇದೀಗ ಮಳೆಯಾಗುತ್ತಿದೆ. ಇನ್ನೊಂದೆರಡು ದಿನ ಈ ಮಳೆ ಬೀಳಲಿದ್ದು ಮತ್ತೆ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ, ವಾಯುಭಾರ ಕುಸಿತವುಂಟಾದಾಗ ಮಳೆಗಿಂತಲೂ ಗಾಳಿಯ ರಭಸ, ಒತ್ತಡ ಅಧಿಕವಿರುವದು ಗಮನಾರ್ಹ. ಇದರಿಂದಾಗಿಯೇ ಇತ್ತೀಚೆಗೆ ಜಿಲ್ಲೆಯ ಅಲ್ಲಲ್ಲಿ ಮರ ಬೀಳುವಿಕೆ, ವಿದ್ಯುತ್ ತಂತಿ, ಕಂಬ, ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿಯುಂಟಾಗಿ ವಿದ್ಯುತ್ ಸಂಪರ್ಕಕ್ಕೆ ಧಕ್ಕೆಯುಂಟಾಗಿದೆ.
ಕಳೆದ ಮೂರು ವರ್ಷಗಳ ಘಟನೆÀಗಳ ಬಗ್ಗೆ ಈ ಸಂದರ್ಭ ಕಿರು ಅವಲೋಕನÀ ಅಗತ್ಯ.
೨೦೧೮ ರಲ್ಲಿ ಆ. ೨ ರಿಂದ ಪ್ರಾರಂಭಗೊAಡ ಆಶ್ಲೇಷ ಆ.೧೬ ಕ್ಕೆ ಮುಕ್ತಾಯಗೊಂಡಿತು. ಈ ಅವಧಿಯಲ್ಲಿನ ಮಳೆಯೊಂದಿಗೆ ಆಶ್ಲೇಷ ನಕ್ಷತ್ರದ ಮುಕ್ತಾಯದ ದಿನವಾದ ಆ.೧೬ ರಂದು ಅತಿವೃಷ್ಟಿ. ಪ್ರವಾಹ, ಭೂಕುಸಿತಗಳಿಂದ ಇಡೀ ಜಿಲ್ಲೆ ನಡುಗಿಹೋಯಿತು. ಆಶ್ಲೇಷ ಮಳೆ-ಗಾಳಿ ಭೂಕುಸಿತ, ಪ್ರವಾಹಗಳಿಂದ ೨೦ ಮಂದಿ ಅಸು ನೀಗಿದರು. ೨೬೮ ಜಾನುವಾರುಗಳು ಸಾವಿಗೀಡಾದವು. ೪೦೫೬ ಮನೆಗಳು ಹಾನಿಗೀಡಾದವು, ನೂರಾರು ಮಂದಿಯ ತೋಟ, ಕೃಷಿ ಭೂಮಿಗಳು ಮಣ್ಣು ಪಾಲಾದವು. ೨೦೧೮ ರ ಆಗಸ್ಟ್ ತಿಂಗಳಿನಲ್ಲಿ ಬಿದ್ದ ಆಶ್ಲೇಷ ಮಳೆಯ ಪ್ರಮಾಣ ಜಿಲ್ಲೆಯಲ್ಲಿ ಸರಾಸರಿ ೯೧.೪೪ ಇಂಚು ಎಂದರೆ ನಿಜಕ್ಕೂ ಹೇಗಿತ್ತು ಎಂಬದರ ನೆನಪಾಗುತ್ತದೆ.
೨೦೧೯ ರಲ್ಲಿಯೂ ಆ. ೩ ಕ್ಕೆ ಪ್ರಾರಂಭಗೊAಡ ಆಶ್ಲೇಷ ನಕ್ಷತ್ರದ ಮಳೆ ಆ. ೧೬ ರವರೆಗೆ ಮುಂದುವರಿಯಿತು. ಆ ವರ್ಷದಲ್ಲಿಯೂ ಆಗಸ್ಟ್ ತಿಂಗಳೊAದರಲ್ಲಿಯೇ ಜಿಲ್ಲೆಯಲ್ಲಿ ಸರಾಸರಿ ೫೨.೪೭ ಇಂಚು ಮಳೆಯಾಗಿದೆ. ಆ ವರ್ಷ ಆ. ೮, ೯ ಮತ್ತು ೧೦ ರಂದು ಸುರಿದ ಧಾರಾಕಾರ ಮಳೆ ಜಿಲ್ಲೆಯಲ್ಲಿ ಭಾರೀ ಅನಾಹುತಕ್ಕೆ ಕಾರಣವಾಯಿತು.೧೭ ಮಂದಿ ಸಾವಿಗೀಡಾದರು. ೨೦೬೮ ಮನೆಗಳು ಹಾನಿಗೀಡಾದವು.
ಕಳೆದ ೨೦೨೦ ರಲ್ಲಿಯೂ ಆ.೨ ಕ್ಕೆ ಆಶ್ಲೇಷ ಮಳೆ ಪ್ರಾರಂಭಗೊAಡು ಆ. ೧೫ ಕ್ಕೆ ಮುಕ್ತಾಯಗೊಂಡಿತು. ಕಳೆದ ವರ್ಷವೂ ಆಗಸ್ಟ್ನಲ್ಲಿ ೫೫.೮೦ ಇಂಚು ಮಳೆಯಾಗಿದೆ. ಕಳೆದ ವರ್ಷವೂ ಆಶ್ಲೇಷ ಮಳೆಯ ೪ ನೇ ದಿನವಾದ ಆ. ೬ ರಂದು ಪವಿತ್ರ ಕ್ಷೇತ್ರವಾದ ತಲಕಾವೇರಿಯಲ್ಲಿ ಭಾರೀ ಭೂಕುಸಿತದಿಂದ ಪ್ರಧಾನ ಅರ್ಚಕ ನಾರಾಯಣಾಚಾರ್ ಸೇರಿದಂತೆ ಅವರ ಪತ್ನಿ , ಅವರ ಸಹೋದರ ಹಾಗೂ ಇತರ ಇಬ್ಬರು ಅರ್ಚಕರು ಸೇರಿ ೫ ಮಂದಿ ಭೂಗತರಾಗಿ ಸಾವಿಗೀಡಾದ ನೆನಪು ಇನ್ನೂ ಮರೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಮುಂದಿನ ಆ.೨ ರಿಂದ ಆ.೧೫ ರವರೆಗಿನ ಆಶ್ಲೇಷ ನಕ್ಷತ್ರ ಮಳೆ ಸಂದರ್ಭ ಜಿಲ್ಲೆಯ ಜನತೆ ಜಾಗರೂಕರಾಗಿರುವದು ಒಳಿತು.