ಗೋಣಿಕೊಪ್ಪ, ಜು. ೨೧: ರೋಟರಿಯ ಪ್ರತೀ ಸದಸ್ಯರೂ ಮತ್ತೋರ್ವ ಸದಸ್ಯನನ್ನು ನೂತನ ವಾಗಿ ರೋಟರಿ ಸಂಸ್ಥೆಗೆ ಸೇರ್ಪಡೆ ಗೊಳಿಸಿ ಎಂಬ ಗುರಿಯೊಂದಿಗೆ ಈ ವರ್ಷ ರೋಟರಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದು ರೋಟರಿ ಮುಂದಿನ ಸಾಲಿನ ರಾಜ್ಯಪಾಲ ಪ್ರಕಾಶ್ ಕಾರಂತ್ ಹೇಳಿದರು.

ಗೋಣಿಕೊಪ್ಪ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ತೀತಮಾಡ ನೀತಾ ಕಾವೇರಮ್ಮ ಮತ್ತು ಕಾರ್ಯದರ್ಶಿಯಾಗಿ ಜಪ್ಪೆಕೋಡಿ ಸುಭಾಷಿಣಿ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ರೋಟರಿ ಸದಸ್ಯತ್ವ ವನ್ನು ೧೨ ಲಕ್ಷದಿಂದ ೧೩ ಲಕ್ಷಕ್ಕೆ ಹೆಚ್ಚಿಸುವ ಉದ್ದೇಶ ಅಂತರರಾಷ್ಟಿçÃಯ ರೋಟರಿ ಸಂಸ್ಥೆಯ ಅಧ್ಯಕ್ಷ ಶೇಖರ್ ಮೆಹ್ತಾ ಅವರದ್ದಾಗಿದೆ.

ಸದಸ್ಯತ್ವ ಹೆಚ್ಚಳದಿಂದಾಗಿ ವಿಶ್ವದಾದ್ಯಂತ ಸಮಾಜಕ್ಕೆ ರೋಟರಿಯ ಸಾಮಾಜಿಕ ಸೇವಾ ಕಾರ್ಯದ ಕೊಡುಗೆ ಲಭಿಸಿದಂತಾಗುತ್ತದೆ ಎಂದು ಹೇಳಿದ ಕಾರಂತ್, ಮಾನವೀಯ ಗುಣವೇ ಸದಸ್ಯತ್ವಕ್ಕೆ ಆದ್ಯತೆಯಾಗಬೇಕು ಎಂದರು.

ರೋಟರಿ ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಗೋಣಿಕೊಪ್ಪ ರೋಟರಿಯ ಲತಾಬೋಪಣ್ಣ ಸಂಪಾದಕತ್ವದಲ್ಲಿ ಪ್ರಕಟಿತ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯಲ್ಲಿ ಪ್ರತೀ ವರ್ಷ ಅಧಿಕಾರದ ಬದಲಾವಣೆ ಕಡ್ಡಾಯವಾಗಿ ಆಗಲೇಬೇಕಾಗಿದೆ. ಹೀಗಾಗಿ ಅಧಿಕಾರಕ್ಕೆ ಆಸೆ ಪಡುವವರ ಸಂಸ್ಥೆಯಾಗಿ ರೋಟರಿ ಕಂಡು ಬರುತ್ತಿಲ್ಲ. ಪ್ರತಿ ವರ್ಷವೂ ಹೊಸ ತಂಡ ಹೊಸ ಯೋಜನೆಗಳೊಂದಿಗೆ ಹೊಸ ಉತ್ಸಾಹದಿಂದ ಜನಸೇವೆಗೆ ಕಾರ್ಯಪ್ರವೃತ್ತವಾಗುತ್ತಿದೆ. ಮಹಿಳಾ ಸದಸ್ಯರ ಸೇರ್ಪಡೆಗೆ ಈ ವರ್ಷ ವಿಶೇಷ ಗಮನ ನೀಡಲಾಗಿದೆ ಎಂದರು.

ನೂತನ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಸಂಬAಧಿತ ಯೋಜನೆಗಳಿಗೆ ಆದ್ಯತೆ ನೀಡುವುದ ರೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯಯೋಜನೆಗಳನ್ನೂ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ರೋಟರಿ ಮೂಲಕ ಆಯೋಜಿಸುವುದಾಗಿ ಹೇಳಿದರು.

ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ ವಂದಿಸಿದ ಕಾರ್ಯಕ್ರಮದಲ್ಲಿ ರೋಟರಿ ವಲಯ ಕಾರ್ಯದರ್ಶಿ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಆದಿತ್ಯ, ನಿರ್ಗಮಿತ ಅಧ್ಯಕ್ಷೆ ಬೀಟಾ ಲಕ್ಷ್ಮಣ್, ಕಾರ್ಯದರ್ಶಿ ಮುತ್ತಪ್ಪ ವೇದಿಕೆಯಲ್ಲಿದ್ದರು. ಸುಭಾಷಿಣಿ ಸ್ವಾಗತಿಸಿ, ರಾಜೀವ್ ಪ್ರಾರ್ಥಿಸಿದರು.

ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಮತ್ತು ಲೋಪಮುದ್ರ ಆಸ್ಪತ್ರೆಯ ಡಾ. ಸೌಮ್ಯ ನಾಣಯ್ಯ ಅವರನ್ನು ಗೋಣಿಕೊಪ್ಪ ರೋಟರಿಯ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು