ಗೋಣಿಕೊಪ್ಪ ವರದಿ: ಕುಟ್ಟಂದಿ ಗ್ರಾಮದಲ್ಲಿ ಸೀಲ್‌ಡೌನ್‌ಗೆ ಒಳಗಾಗಿದ್ದ ಗುಡ್ಡಮಾಡು ಕಾಲೋನಿಯ ೨೪ ಕುಟುಂಬಗಳಿಗೆ ಹಾಗೂ ೧೮ ವಿಶೇಷಚೇತನರ ಕುಟುಂಬಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಆಹಾರ ಕಿಟ್ ವಿತರಿಸಿದರು.

ಕಾಂಗ್ರೆಸ್ ಮುಖಂಡರಾದ ಕೊಲ್ಲೀರ ಬೋಪಣ್ಣ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಕಡೇಮಾಡ ಕುಸುಮ, ಚಂದುರ ರೋಹಿತ್, ಬಿ. ಶೆಟ್ಟಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿಮಾಡ ಸದನ್, ಪೊನ್ನಂಪೇಟೆ ಕಿಸಾನ್ ಘಟಕ ಅಧ್ಯಕ್ಷ ಚೇರಂಡ ಮೋಹನ್ ಇದ್ದರು.

*ಗೋಣಿಕೊಪ್ಪ : ಬುಡಕಟ್ಟು ಜನರ ಸಮಸ್ಯೆಗಳನ್ನು ನಿಭಾಯಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗಳ ಕಾರ್ಯಗತಕ್ಕೆ ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ತಿತಿಮತಿ, ಮರೂರು ಗಿರಿಜನ ಆಶ್ರಮ ಶಾಲೆಯ ಸಭಾಂಗಣದಲ್ಲಿ ಗುಡ್‌ಪ್ರೆಸ್ಸ್ ಫೌಂಡೇಶನ್ ವತಿಯಿಂದ ನೀಡಿದ ಬುಡಕಟ್ಟು ಜನರ ಸೇವೆ ಮಾಡುವ ಶುಶ್ರೂಷಕಿಯರು ಹಾಗೂ ಆಶಾ ಕಾರ್ಯಕರ್ತರಿಗೆ ಆರೋಗ್ಯ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ತಾಲೂಕು ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ಗುರುಶಾಂತಪ್ಪ ನೇತೃತ್ವದಲ್ಲಿ ಗುಡ್‌ಪ್ರೆಸ್ಸ್ ಫೌಂಡೇಷನ್ ತಿತಿಮತಿ ಭಾಗದ ಸುಮಾರು ೪೦ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರಿಗೆ ಆರೋಗ್ಯ ಕಿಟ್‌ಗಳನ್ನು ನೀಡಲಾಯಿತು. ತಿತಿಮತಿ ಗ್ರಾ.ಪಂ. ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ವಿಜಯ, ಸದಸ್ಯರುಗಳಾದ ಎನ್.ಎನ್. ಅನೂಪ್‌ಕುಮಾರ್, ಶಂಕರ, ಶೇಖರ, ಸರಸ್ವತಿ, ಜಿ.ಪಂ. ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಪಿ.ಡಿ.ಓ. ಮಮತಾಜಗದೀಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ, ಸಂಸ್ಥೆಯ ನಿರ್ದೇಶಕರಾದ ಸಂತೋಷ್, ವಿನೋದ್‌ಕುಮಾರ್ ಹಾಜರಿದ್ದರು.ಸಿದ್ದಾಪುರ : ಕಾರ್ಮಿಕ ಇಲಾಖೆ ವತಿಯಿಂದ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಕಟ್ಟಡ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ಕಾರ್ಮಿಕ ಇಲಾಖಾಧಿಕಾರಿ ಜಯಣ್ಣ ವಿತರಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಎಲ್ಲಾ ಕಟ್ಟಡ ಕಾರ್ಮಿಕರು ತಮ್ಮ ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳಬೇಕೆಂದರು. ಅಲ್ಲದೇ ಕಾರ್ಮಿಕರು ಸರ್ಕಾರದಿಂದ, ಪಂಚಾಯಿತಿ ಮೂಲಕ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಕೊರೊನಾ ಸೋಂಕು ಬಗ್ಗೆ ಜಾಗೃತಿ ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಉಪಾಧ್ಯಕ್ಷೆ ಪುಷ್ಪ ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು. ವೀರಾಜಪೇಟೆ : ಮಹಿಳೆಯರು ಸಂಘಟನೆಗಳ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುದರೊಂದಿಗೆ ಸ್ವಾವಲಂಬಿಗಳಾಗಿ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಆರ್ಜಿ ಗ್ರಾ.ಪಂ.ಆವರಣದಲ್ಲಿ ಆಯೋಜಿಸಿದ್ದ ಗ್ರಾ. ಪಂ.ಮಟ್ಟದ ಸಂಜೀವಿನಿ ಒಕ್ಕೂಟಕ್ಕೆ ಕೇಂದ್ರ ಸರಕಾರದ ಪುರಸ್ಕೃತ ಹಾಗೂ ಸರಕಾರದ ಕೃಷಿ ಯಾಂತ್ರೀಕರಣ ಉಪಯೋಜನೆ ಅಡಿಯಲ್ಲಿ ಟ್ರಾö್ಯಕ್ಟರ್ ಮತ್ತು ವೀಡ್ಕಟ್ಟರ್ ವಿತರಿಸಿ ಮಾತನಾಡಿದ ಅವರು, ಸರಕಾರಗಳ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮತ್ತು ಕೊಡಗು ಜಿಲ್ಲಾ ಪಂಚಾಯಿತಿಯ ಯೋಜನಾ ನಿದೇರ್ಶಕರಾದ ಶ್ರೀಕಂಠಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಉಪೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್, ಹಾಗೂ ಪಂಚಾಯಿತಿ ಸದಸ್ಯರಾದ ಬೋಪಣ್ಣ, ಸಹದ್ದೀರ್ ಆಲಿ, ಕೆ.ಟಿ. ಬಶೀರ್, ಸುನೀತಾ, ಕವಿತಾ, ಫಾತಿಮಾ, ಆಂಜೋವಿಟಾ, ಜೋಸೆಫ್, ಜಿಲ್ಲಾ ಪಂಚಾಯಿತಿ ಡಿಪಿಎಂ ಕುಮಾರ್ ಸೇರಿದಂತೆ ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ : ವೀರಾಜಪೇಟೆಯ ಸಮಾಜ ಸೇವಾ ಸ್ನೇಹಿತರ ಬಳಗದ ವತಿಯಿಂದ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಚಿತ್ರ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ ವನ್ನು ಕೆದಮುಳ್ಳೂರು ಗ್ರಾಮದ ಕಥರೀನಾ ಚಿತ್ತಧೀನಿ ನಿರ್ಗತಿಕ ಮಕ್ಕಳ ಕುಠೀರ ಆಶ್ರಮದಲ್ಲಿ ಆಚರಿಸಲಾಯಿತು. ಹುಟ್ಟುಹಬ್ಬದ ಅಂಗವಾಗಿ ಆಶ್ರಮದ ಆಶ್ರಯದಲ್ಲಿರುವ ನಿವಾಸಿಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಬಳಿಕ ಮಾತನಾಡಿದ ಬಳಗದ ಪಿ.ಎ. ಮಂಜುನಾಥ್ ಅವರು, ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಮರಣದ ನಂತರದಲ್ಲಿ ಅಂಗಾAಗಗಳನ್ನು ಇತರರಿಗೆ ದಾನ ಮಾಡಿರುವುದು ಮಾನವೀಯತೆಗೆ ಸಾಕ್ಷಿಯಾಗಿದೆ. ದಿವಂಗತ ವಿಜಯ್ ಅವರು ಕೊಡಗಿನಲ್ಲಿ ಘಟಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ನೆರವು ನೀಡಿದ್ದಾರೆ ಎಂದರು. ಸೇವಾ ಆಶ್ರಮದ ಮುಖ್ಯಸ್ಥೆ ಸಿಸ್ಟರ್ ಅಂಥೋನಿ ಮೇರಿ ಅವರು ಮಾತನಾಡಿ, ದಿವಂಗತ ವಿಜಯ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಳಗದ ಟಿ.ಎಂ. ಯೋಗೇಶ್ ನಾಯ್ಡು, ರಾವೂಫ್, ಆಶ್ರಮದ ಪ್ರಮುಖರಾದ ಸಿಸ್ಟರ್ ಲೂಸಿ, ಸಿಸ್ಟರ್ ಪ್ರಸ್ಸಿಲ್ಲಾ ಮತ್ತು ಆಶ್ರಮದಲ್ಲಿರುವ ಮಕ್ಕಳು ಹಾಜರಿದ್ದರು.

-ಕೆ.ಕೆ.ಎಸ್. ವೀರಾಜಪೇಟೆ