ಕಣಿವೆ, ಜು. ೨೧ : ಕಳೆದ ಎರಡು ದಿನಗಳಿಂದ ರಾಷ್ಟಿçÃಯ ಮಾಧ್ಯಮಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಬದಲಾವಣೆಯ ಕುರಿತು ಬರುತ್ತಿರುವ ಸುದ್ದಿಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿವೆ.
ಒಂದು ಕಾಲದಲ್ಲಿ ವಯಸ್ಸಿನ ಕಾರಣಕ್ಕೆ ಬಿಜೆಪಿಯ ಭೀಷ್ಮನಂತಿದ್ದ ಲಾಲ್ ಕೃಷ್ಣ ಅಡ್ವಾಣಿಯವರನ್ನೇ ಪಕ್ಷ ಮೂಲೆಗುಂಪು ಮಾಡಿ ದೂರ ಸರಿಸಿತ್ತು. ಬಿಜೆಪಿ ಹಾಗೂ ಸಂಘಪರಿವಾರಗಳು ಮಾಡಿಕೊಂಡಿರುವ ಜಂಟಿ ಒಡಂಬಡಿಕೆಯAತೆ ವಯಸ್ಸು ೭೦ ದಾಟಿದವರು ತಮ್ಮ ಸ್ಥಾನಮಾನ ಗಳನ್ನು ಪಕ್ಷ ಹಾಗೂ ಸಂಘದ ಹೊಸ ಮುಖಗಳಿಗೆ ಬಿಟ್ಟುಕೊಟ್ಟು ಅಗತ್ಯವಾದ ಸಲಹೆ, ಮಾರ್ಗದರ್ಶನ ನೀಡುವ ಮೂಲಕ ಪಕ್ಷಕ್ಕೆ ಊರುಗೋಲಾಗಿರಬೇಕು ಎಂಬುದಾಗಿದೆ.
ಈ ಪಕ್ಷದ ಈ ಸಿದ್ಧಾಂತದ ಪ್ರಕಾರ ಬಿ.ಎಸ್.ಯಡಿಯೂರಪ್ಪ ಅವರ ವಯಸ್ಸನ್ನು ಪರಿಗಣಿಸುವುದಾದರೆ ಅವರಿಗೆ ಪಕ್ಷವು ಈವರೆಗೂ ಕೊಟ್ಟಿರುವ ಸದವಕಾಶಗಳು, ಸ್ಥಾನ-ಮಾನ, ಗೌರವಗಳು ಜಾಸ್ತಿಯೇ ಇದೆ ಎನ್ನಬಹುದು. ಅಂದರೆ ಪಕ್ಷದ ನಾಯಕತ್ವದ ಈ ವಯೋಮಿತಿ ಸ್ವತಃ ಪ್ರಧಾನಿ ಮೋದಿಗೂ ಅನ್ವಯವಾಗಬೇಕಿದೆ.
ಕರ್ನಾಟಕದ ಮಟ್ಟಕ್ಕೆ ತೆಗೆದುಕೊಂಡರೆ ಬಿಜೆಪಿಯನ್ನು ಬಿಟ್ಟರೆ ಬಿಎಸ್ ವೈ.ಗೆ, ಬಿಎಸ್ ವೈ ಬಿಟ್ಟು ಬಿಜೆಪಿಗೆ ಬೇರೆ ದಾರಿಯೇ ಇಲ್ಲ ಎಂಬAತಹ ಸ್ಥಿತಿ ನಿರ್ಮಾಣವಾಗಿದೆ.
ಅಂದರೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯಿತರ ಅಗ್ರಗಣ್ಯ ನಾಯಕನಾಗಿರುವ ಯಡಿಯೂರಪ್ಪ ಅವರ ವರ್ಚಸ್ಸಿನ ಫಲದಿಂದಲೇ
ಭಾರತೀಯ ಜನತಾ ಪಕ್ಷ ನಿಂತಿದೆ ಎಂಬAತಿರುವ ಈ ವಾಸ್ತವ ಸತ್ಯದ ಪರಿದಿಯನ್ನು ಅಳಿಸಿ ಹಾಕುವ ಮೂಲಕ ಲಿಂಗಾಯಿತರೇತರ ವ್ಯಕ್ತಿಯನ್ನು ಬದಲು ಮಾಡುತ್ತಿರುವ ಬಿಎಸ್‌ವೈ ಸ್ಥಾನಕ್ಕೆ ಏರಿಸುವ ಬಹು ದೊಡ್ಡ ನಿರ್ಣಯಕ್ಕೆ ಬಿಜೆಪಿಯ ಕೇಂದ್ರ ವರಿಷ್ಠರು ಬಂದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಪಕ್ಷದ ಬೇರು ಕೂಡ ಇಲ್ಲದ ದುಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಇದ್ದಾಗ ರಾಜ್ಯವ್ಯಾಪಿ ಕಾಲಿಗೆ ಚಕ್ರ ಕಟ್ಟಿ ಓಡಾಡಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದ ಬಿಎಸ್ ವೈ ಗರಿಮೆ - ಹಾಗೂ ಹಿರಿಮೆಯನ್ನು ಪರಿಗಣಿಸಿದ್ದ ರಿಂದಲೇ ಪಕ್ಷ ಇಲ್ಲಿಯತನಕ ಎಲ್ಲವುಗಳನ್ನು ಕೊಡಮಾಡಿದೆ. ಆದರೆ ಈಗ ಅವರ ವಯಸ್ಸು ಹಾಗೂ ವರ್ಚಸ್ಸು ಮಾಸುತ್ತಿದೆ ಎಂದು ಅವರನ್ನು ಬದಲಿಸಿ ಅವರ ಸ್ಥಾನಕ್ಕೆ ವರ್ಚಸ್ವಿ ಯುವ ನಾಯಕನ ಪಟ್ಟಾಭಿಷೇಕ ಮಾಡಲು ಹೊರಟಿರುವ ಪಕ್ಷದ ಹೈಕಮಾಂಡ್ ನಿಲುವಿಗೆ ಲಿಂಗಾಯಿತ ಸಮುದಾಯದ ಕಡೆಯಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ.
ಅಷ್ಟೇ ಅಲ್ಲ ಕೇಂದ್ರದ ಬಿಜೆಪಿ ಹೈಕಮಾಂಡ್ ವಯಸ್ಸು ವರ್ಚಸ್ಸಿನ ನೆಪವೊಡ್ಡಿ ಯಡಿಯೂರಪ್ಪ ಅವರನ್ನು ಏನಾದರೂ ಅಧಿಕಾರದಿಂದ ಕೆಳಗಿಳಿಸಿದರೆ ಅದರ ಗಂಭೀರತೆಯನ್ನು ಪಕ್ಷ ಎದುರಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಸಿದೆ.
ಆದರೆ ೨೦೨೩ ರಲ್ಲಿ ಎದುರಾಗುವ ವಿಧಾನ ಸಭಾ ಚುನಾವಣೆಯಲ್ಲಿ ಬಿಎಸ್ ವೈ ಇದ್ದರೂ ಸರಿ ಇರದಿದ್ದರೂ ಸರಿ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳು ಬರಲಾರವು ಎಂದು ಹೇಳಲಾಗುತ್ತಿದೆ.
ಏಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಕಾಂಗೈ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಿ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಹಾಗೂ ಸಂಗಡಿಗರು ಮಾಡಿದ ಸ್ಟçಗಲ್ ಇದೆಯಲ್ಲ ಅದು ಯಡಿಯೂರಪ್ಪ ಅವರ ಈವರೆಗಿನ ಜೀವಿತಾವಧಿಯ ಉದ್ದಕ್ಕು ಮಾಡಿಕೊಂಡು ಬಂದ ಹೋರಾಟಕ್ಕೆ ಸಮವಾದುದು. ಆದರೆ ಎಷ್ಟೆಲ್ಲಾ ಕಷ್ಟಪಟ್ಟು ಸಿದ್ದಪಡಿಸಿದ ಗದ್ದುಗೆ ಮೇಲೆ ವಿರಾಜಿಸಲು ಕಳೆದ ಎರಡು ವರ್ಷಗಳಲ್ಲಿ ಪ್ರಕೃತಿ ಒಂದು ಕಡೆ ಬಿಡಲಿಲ್ಲ. ಅಂದರೆ ಅತೀವೃಷ್ಟಿ ಸಂಭವಿಸಿತ್ತು. ಜೊತೆಗೆ ಕೊರೊನಾ ಕಾಡಿತು. ಈಗ ಎಲ್ಲವನ್ನು ಎದುರಿಸಿ ಒಂದಷ್ಟು ನೆಮ್ಮದಿಯಿಂದ ರಾಜ್ಯಭಾರ ಮಾಡೋಣ ಅಂದರೆ ಈಗ ಪಕ್ಷದ ಹೈಕಮಾಂಡ್ ಬಿಡ್ತಾ ಇಲ್ಲವಲ್ಲ ಎಂಬ ಕೊರಗು ಅವ್ಯಕ್ತವಾಗಿ ಬಿ.ಎಸ್.ವೈ. ಗೆ ಕಾಡುತ್ತಿದೆ.
ಬಿಎಸ್ ವೈ ಅಧಿಕಾರದಲ್ಲಿದ್ದ ಅಷ್ಟೂ ದಿನ ಪಕ್ಷದೊಳಗಿನ ಕೆಲವು ಅತೃಪ್ತರು ಸ್ವಪಕ್ಷೀಯ ಮುಖ್ಯಮಂತ್ರಿಗಳ ವಿರುದ್ಧ ಏನೆಲ್ಲ ಟೀಕೆ ಟಿಪ್ಪಣಿೆ ಮಾಡಿದರೂ ಕೂಡ ಅವರ ಬಾಯಿ ಮುಚ್ಚಿಸುವಲ್ಲಿ ಪಕ್ಷದ ಹೈಕಮಾಂಡ್ ಗೆ ಸಾಧ್ಯವಾಗದಿರುವುದು ಮತ್ತು ಇದೀಗ ಅವಧಿಗೂ ಮುನ್ನವೇ ಅಧಿಕಾರದಿಂದ ಕೆಳಗಿಳಿಸಲು ನಡೆಸುತ್ತಿರುವ ಸಂಚು ಸಹಜವಾಗಿ ಬಿಎಸ್ ವೈ ಅವರಲ್ಲಿ ಅಸಹನೆಯನ್ನು ಮೂಡಿಸಿದೆ.
ಏನೇ ಇರಲಿ ಬಿಎಸ್ ವೈ ಸಾರಥ್ಯ ಇಲ್ಲದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ನಷ್ಟವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಎಸ್ ವೈ ಪದಚ್ಯುತಿಯ ನಂತರ ತಲೆದೋರಬಹುದಾದ ಸಂಕಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಲು ಬಿಜೆಪಿ ಹೈಕಮಾಂಡ್ ರಾಜ್ಯ ಹಾಗೂ ಕೇಂದ್ರದಲ್ಲಿ ಪಕ್ಷವೇ ಅಧಿಕಾರದಲ್ಲಿರುವುದರಿಂದ ಇನ್ನೂ ಎರಡು ವರ್ಷಗಳ ದೂರ ಇರುವ ಚುನಾವಣೆಗೆ ಈಗಿನಿಂದಲೂ ಸಿದ್ಧತೆ ನಡೆಸಿ
ಬಿಎಸ್ ವೈ ಬದಲಿಸಿದಲ್ಲಿ ಲಿಂಗಾಯಿತ ಮತ ಬ್ಯಾಂಕು ಗಟ್ಟಿಗೊಳಿಸಲು ಲಿಂಗಾಯಿತರನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡುತ್ತದೆಯೋ, ಅಥವಾ ಲಿಂಗಾಯಿತರೇತರ ಒಕ್ಕಲಿಗ ಅಥವಾ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳಿಗೆ ಪಕ್ಷದ ಹೈಕಮಾಂಡ್ ಮಣೆ ಹಾಕುತ್ತದೋ ಕಾದು ನೋಡಬೇಕಿದೆ. ಕರ್ನಾಟಕದಲ್ಲಿ ಪ್ರಬಲ ಲಿಂಗಾಯಿತ ಸಮುದಾಯದ ಅಸ್ಮಿತೆಯಾಗಿ ರುವ ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಮುಂದುವರೆಸಲೂ ಆಗದ ಮತ್ತು ಕೆಳಗಿಳಿಸಲೂ ಆಗದ ಸಂದಿಗ್ಧತೆಯಲ್ಲಿರುವ ಬಿಜೆಪಿ ಒಟ್ಟಾರೆ ಕವಲುದಾರಿಯಲ್ಲಿದೆ.
- ಕೆ. ಎಸ್. ಮೂರ್ತಿ, ಕುಶಾಲನಗರ.