ಗೋಣಿಕೊಪ್ಪ ವರದಿ, ಜು. ೨೧ : ಜುಲೈ ೨೩ ರಿಂದ ಆಗಸ್ಟ್ ೧೫ ರವರೆಗೆ ಪಾಟಿಯಾಲದಲ್ಲಿ ನಡೆಯಲಿರುವ ರಾಷ್ಟçಮಟ್ಟದ ಕಿರಿಯರ ಅಥ್ಲೆಟ್ ಶಿಬಿರದಲ್ಲಿ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಕ್ರೀಡಾಪಟು ಜ್ಯೋತಿಕಾ ಭಾಗವಹಿಸಲಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ನಡೆದ ೩೬ ನೇ ರಾಷ್ಟçಮಟ್ಟದ ಜೂನಿಯರ್ ಅಥ್ಲೆಟ್ ಚಾಂಪಿಯನ್‌ಶಿಪ್‌ನಲ್ಲಿ ೪೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ಹಿನ್ನೆಲೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಇದರಂತೆ ಕೀನ್ಯಾದಲ್ಲಿ ನಡೆಯಲಿರುವ ವಿಶ್ವ ಕಿರಿಯರ ಅಥ್ಲೆಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ಶಿಬಿರ ನಡೆಸಲಾಗುತ್ತಿದೆ. ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿನಿ ಯಾಗಿರುವ ಜ್ಯೋತಿಕಾ ಅವರಿಗೆ ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ಮೂಲಕ ೩ ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ.